ಚೆನ್ನೈ: ಕಾಲಿವುಡ್ ನಟ ಸೂರ್ಯ (Actor Suriya) ಅವರ 44ನೇ ಚಿತ್ರದ ಟೈಟಲ್ ಟೀಸರ್ ರಿವೀಲ್ ಆಗಿದೆ.
ಕಾರ್ತಿಕ್ ಸುಬ್ಬರಾಜ್ (Karthik Subbaraj) ಅವರೊಂದಿಗೆ ಸೂರ್ಯ ಅವರು ಸಿನಿಮಾ ಮಾಡುತ್ತಿದ್ದು, ಈ ಚಿತ್ರ ಅನೌನ್ಸ್ ಆದ ದಿನದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಸೂರ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಗ್ಯಾಂಗ್ ಸ್ಟರ್ ಲುಕ್ನಲ್ಲಿ ಮಿಂಚಿದ್ದ ಟೀಸರ್ ನೋಡಿ ಫ್ಯಾನ್ಸ್ಗಳು ಫಿದಾ ಆಗಿದ್ದರು.
“ಒಂದು ಪ್ರೀತಿ, ಒಂದು ನಗು, ಒಂದು ಯುದ್ಧ… ಒಂದಕ್ಕಾಗಿ ಕಾಯುತ್ತಿದೆ..” ಎಂದು ಸೂರ್ಯ ಅವರ ಮಾಸ್ ಲುಕ್ ಟೀಸರ್ ರಿವೀಲ್ ಮಾಡಿತ್ತು. ಇದೀಗ ಕ್ರಿಸ್ಮಸ್ ಹಬ್ಬಕ್ಕೆ ಅಭಿಮಾನಿಗಳಿಗೆ ಚಿತ್ರತಂಡ ಟೈಟಲ್ ಟೀಸರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದೆ.
ದೇವಸ್ಥಾನವೊಂದರ ಮುಂದೆ ನಾಯಕಿ – ನಾಯಕಿ (ಸೂರ್ಯ – ಪೂಜಾ ಹೆಗ್ಡೆ) ʼಕೋಪವನ್ನು ಕಮ್ಮಿ ಮಾಡಿಕೊಳ್ಳುತ್ತೇನೆ. ನನ್ನ ತಂದೆ ಜತೆ ಮಾಡುತ್ತಿರುವ ಕೆಲಸವನ್ನು ಬಿಡುತ್ತೇನೆ. ರೌಡಿಸಂ, ಹಿಂಸೆ, ಹೊಡೆದಾಟ ಎಲ್ಲವನ್ನು ಈ ಕ್ಷಣದಿಂದಲೇ ಬಿಡುತ್ತೇನೆ. ನಾವು ನಗು ಹಾಗೂ ಸಂತೋಷದಿಂದ ಇರಲು ಪ್ರಯತ್ನಿಸುವ ಎಂದು ಹೇಳಿ ಮದುವೆ ಪ್ರಸ್ತಾಪವನ್ನು ಮಾಡುವ ದೃಶ್ಯವನ್ನು ತೋರಿಸಲಾಗಿದೆ.
ತಾನು ಇಷ್ಟಪಟ್ಟ ಹುಡುಗಿಗಾಗಿ ನಾಯಕ ಬದಲಾಗುವ ಸನ್ನಿವೇಶವನ್ನು ಒಂದು ಕಡೆ ತೋರಿಸಿದ್ದು, ಇನ್ನೊಂದು ಕಡೆ ಈ ಹಿಂದೆ ನಾಯಕ ಹೇಗೆ ಮಾಸ್, ರಗಡ್ ಆಗಿ ಪಾತಕಲೋಕದಲ್ಲಿ ಇದ್ದ ಎನ್ನವುದನ್ನು ತೋರಿಸಲಾಗಿದೆ. ಮಾಸ್ ಸೀನ್ಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ.
ಚಿತ್ರಕ್ಕೆ ʼರೆಟ್ರೋʼ ಎಂದು ಟೈಟಲ್ ಇಡಲಾಗಿದೆ. ಇದೊಂದು ಮಾಸ್ & ರಗಡ್ ಕಥೆವುಳ್ಳ ಸಿನಿಮಾವೆಂದು ಹೇಳಲಾಗಿದೆ. ಕೊನೆಯಲ್ಲಿ ಸೂರ್ಯ ಕೈಯಲ್ಲಿ ಸಿಗರೇಟ್, ಬಿಯರ್ ಹಿಡಿದು ಆ್ಯಕ್ಷನ್ ಹೀರೋ ಅಂತೆ ಕೊಡುವ ಲುಕ್ ಅಭಿಮಾನಿಗಳಿಗೆ ಕಿಕ್ ಕೊಡುತ್ತದೆ.
ಬಹು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ 2025 ಬೇಸಿಗೆಯಲ್ಲಿ ರಿಲೀಸ್ ಆಗಲಿದೆ.
ಸೂರ್ಯ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಜಯರಾಮ್, ಕರುಣಾಕರನ್ ಮತ್ತು ಜೋಜು ಜಾರ್ಜ್ ಮುಂತಾದವರು ಪ್ರಮುಖದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಸೂರ್ಯ ಅವರ ನಿರ್ಮಾಣ ಸಂಸ್ಥೆ 2ಡಿ ಎಂಟರ್ಟೈನ್ಮೆಂಟ್ ಬಂಡವಾಳ ಹಾಕಲಿದೆ.