Advertisement

ಕ್ರೇಜಿ-ಉಪ್ಪಿ ಸಿನಿಮಾಕ್ಕೆ ಟೈಟಲ್‌ ಫಿಕ್ಸ್‌: “ರವಿ ಚಂದ್ರ’

10:00 PM Aug 03, 2018 | |

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಹೊಸ ಸಿನಿಮಾ ಮಾಡುತ್ತಿದ್ದು, ರವಿಚಂದ್ರನ್‌ ಹಾಗೂ ಉಪೇಂದ್ರ ಈ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ನಿಮಗೆ ಗೊತ್ತೇ ಇದೆ. ಈ ಚಿತ್ರದಲ್ಲಿ ಸಾನ್ವಿ ಶ್ರೀವಾತ್ಸವ್‌ ಹಾಗೂ ನಿಮಿಕಾ ರತ್ನಾಕರ್‌ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರತಂಡ ಸಿನಿಮಾಕ್ಕೆ ಯಾವ ಟೈಟಲ್‌ ಇಡೋದೆಂದು ಆಲೋಚಿಸಿ, ಕೊನೆಗೂ ಒಂದು ಟೈಟಲ್‌ ಅಂತಿಮಗೊಳಿಸಿದೆ.

Advertisement

ಅದು “ರವಿ ಚಂದ್ರ’. ಹೌದು, ರವಿಚಂದ್ರನ್‌ ಹಾಗೂ ಉಪೇಂದ್ರ ಕಾಂಬಿನೇಶನ್‌ನ ಈ ಚಿತ್ರಕ್ಕೆ “ರವಿ ಚಂದ್ರ’ ಎಂದು ಟೈಟಲ್‌ ಇಡಲಾಗಿದೆ. ಆಗಸ್ಟ್‌ 11 ರಂದು ಚಿತ್ರದ ಫೋಟೋಶೂಟ್‌ ನಡೆಯಲಿದ್ದು, 20ಕ್ಕೆ ಚಿತ್ರ ಸೆಟ್ಟೇರಲಿದೆ. ಈ ಚಿತ್ರವನ್ನು ಆರ್‌.ಎಸ್‌.ಪ್ರೊಡಕ್ಷನ್ಸ್‌ನಡಿ ಕನಕಪುರ ಶ್ರೀನಿವಾಸ್‌ ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಇದು ತೆಲುಗು ಸಿನಿಮಾವೊಂದರ ರೀಮೇಕ್‌ ಎನ್ನಲಾಗಿದೆ. 

ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ರವಿಕುಮಾರ್‌ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನವಿದ್ದು, ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಸದ್ಯ ಉಪೇಂದ್ರ “ಐ ಲವ್‌ ಯೂ’ ಚಿತ್ರೀಕರಣದಲ್ಲಿ ಬಿಝಿಯಾಗಿದ್ದು, ಅದು ಮುಗಿಸಿಕೊಂಡು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next