Advertisement

Titan: ಟೈಟಾನ್‌ ದುರಂತದ ಸಿನಿಮಾ

08:50 PM Sep 30, 2023 | Team Udayavani |

ವಾಷಿಂಗ್ಟನ್‌: ಟೈಟಾನ್‌ ಜಲಾಂತಗಾರ್ಮಿ ನೌಕೆಯ ದುರಂತದ ಕುರಿತು ಸಿನಿಮಾ ನಿರ್ಮಿಸಲು ನಿರ್ಮಾಪಕ ಇ.ಬ್ರಿಯಾನ್‌ ಡಾಬಿನ್ಸ್‌ ಮತ್ತು ಮೈಂಡ್‌ರಿಯೊಟ್‌ ಎಂಟರ್‌ಟೈನ್ಮೆಂಟ್‌ ಮುಂದಾಗಿದೆ. 2023ರ ಜೂನ್‌ನಲ್ಲಿ ಅಟ್ಲಾಂಟಿಕ್‌ ಮಹಾಸಾಗರದಲ್ಲಿ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡಲು ಹೊರಟ ಐವರಿದ್ದ ಟೈಟಾನ್‌ ಜಲಾಂತರ್ಗಾಮಿಯು ಆಳವಾದ ಸಮುದ್ರದಲ್ಲಿ ನಾಪತ್ತೆಯಾಗಿತ್ತು.

Advertisement

ಜಲಾಂತರ್ಗಾಮಿಯು ಸಂಚಾರ ಆರಂಭಿಸಿದ 1 ಗಂಟೆ ಮತ್ತು 45 ನಿಮಿಷಗಳ ನಂತರ ಮುಖ್ಯ ಹಡಗಿನಿಂದ ಸಂಪರ್ಕ ಕಡಿತಗೊಂಡಿತು. ನಾಲ್ಕು ದಿನಗಳು ಕಳೆದರೂ ಅದು ದೊರೆತಿರಲಿಲ್ಲ. ಅಂತಿಮವಾಗಿ ಟೈಟಾನ್‌ ಜಲಾಂತರ್ಗಾಮಿಯ ಅವಶೇಷಗಳು ಪತ್ತೆಯಾಗಿತ್ತು. ಅದರಲ್ಲಿದ್ದ ಐವರು ಮೃತಪಟ್ಟಿದ್ದರು. ಈ ದುರಂತದ ಕುರಿತು ಶೀಘ್ರದಲ್ಲೇ ಸಿನಿಮಾ ಮೂಡಿಬರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next