Advertisement

ಅಂಗಾಂಶ ಕೃಷಿ ಪದ್ದತಿಯ ಕುಡಿ ಕಾಂಡ ಸಸಿಗಳ ತಾಂತ್ರಿಕತೆ ಜಾರಿಗೆ ಪ್ರಯತ್ನ

06:57 PM May 10, 2021 | Team Udayavani |

ಹಾಸನ: ಅಂಗಾಂಶ ಆಲೂಗಡ್ಡೆ ತಳಿರೋಗ ನಿರೋಧಕ ತಳಿಯಾ ಗಿದೆ.ಜಿಲ್ಲೆಯ ಆಲೂಗಡ್ಡೆ ಬೆಳೆಗಾರರು ಗಡ್ಡೆಗಳ ಬಿತ್ತನೆಯ ಸಾಂಪ್ರದಾಯಿಕ ಕೃಷಿಗೆಪರ್ಯಾಯವಾಗಿ ಅಂಗಾಂಶಆಲೂಗಡ್ಡೆ ತಳಿಯನ್ನು ಬೆಳೆಯತ್ತ ಚಿತ್ತಹರಿಸಬೇಕು ಎಂದು ತೋಟಗಾರಿಕೆಇಲಾಖೆ ಉಪ ನಿರ್ದೇಶಕ ಯೋಗೇಶ್‌ಸಲಹೆ ನೀಡಿದರು.

Advertisement

ತೋಟಗಾರಿಕೆ ಇಲಾಖೆ ಕಚೇರಿಯಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿನಡೆಸಿದ ಅವರು, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿವಿ ಹಾಗೂ ಬೆಂಗಳೂರಿನ ಅಂತಾರಾಷ್ಟ್ರೀಯ ಆಲೂಗಡ್ಡೆ ಸಂಸ್ಥೆಯ ಸಹಭಾಗಿತ್ವದಲ್ಲಿಅಂಗಾಂಶ ಕೃಷಿ ಪದ್ಧತಿಯ ಕುಡಿ ಕಾಂಡಸಸಿಗಳ ತಾಂತ್ರಿಕತೆಯ ಮೂಲಕ ಆಲೂಗಡ್ಡೆ ಸಸ್ಯೋತ್ಪಾದನೆ ಹಾಗೂ ಆಸಸಿಗಳಿಂದ ಆಲೂಗಡ್ಡೆ ಉತ್ಪಾದನೆಮಾಡಲಾಗುತ್ತಿದೆ ಎಂದರು.

ಈ ಕೃಷಿ ತಾಂತ್ರಿ ಕತೆ ವಿಯೆಟ್ನಾಮ್‌,ಇಂಡೋನೇ ಶಿಯಾ ದೇಶಗಳಲ್ಲಿ ಬಹಳಪ್ರಚಲಿತವಾ ಗಿದ್ದು, ಆಲೂಗಡ್ಡೆ ಬೆಳೆಯುವ ಯಾವ ಪ್ರದೇಶದಲ್ಲಿಯಾದರೂ ಈತಾಂತ್ರಿ ಕತೆಯ ಮೂಲಕ ಉತ್ಪಾದನೆಹಾಗೂ ಬೆಳೆ ಬೆಳೆಯಬಹುದಾಗಿದೆ.ದೇಶದಲ್ಲೇ ಪ್ರಥಮ ಬಾರಿಗೆ ಹಾಸನಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ,ಹಾಸನ ತಾಲೂಕು ಸೋಮನಹಳ್ಳಿಕಾವಲ್‌ನಲ್ಲಿರುವ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಕಂದಲಿ ಕೃಷಿ ವಿಜ್ಞಾನ ಕೇಂದ್ರ,ಅಂತಾರಾಷ್ಟ್ರೀಯ ಆಲೂ ಗಡ್ಡೆ ಸಂಸ್ಥೆಯಸಹಭಾಗಿತ್ವದಲ್ಲಿ ತಾಂತ್ರಿಕತೆಯ ಬಗ್ಗೆದೊಡ್ಡ ಪ್ರಮಾಣ ದಲ್ಲಿ ಪ್ರಯೋಗಗಳು,ನರ್ಸರಿದಾರರು, ರೈತರಿಗೆ ಪ್ರಾತ್ಯ ಕ್ಷಿಕೆಕೈಗೊಂಡು ರೈತರಿಗೆ ಪರಿಚಯಿಸುವಲ್ಲಿಯಶಸ್ವಿಯಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next