Advertisement

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

08:15 PM Dec 08, 2021 | Team Udayavani |

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮಹತ್ವದ ಬೇಡಿಕೆಯಿಟ್ಟಿದ್ದಾರೆ. ತಿರುವನಂತಪುರಂನಿಂದ ಕಾಸರಗೋಡಿಗೆ ಸಿಲ್ವರ್‌ಲೈನ್‌ ಅರೆ ಅತಿವೇಗದ ರೈಲು ಸಂಚಾರ ಮಾರ್ಗ ನಿರ್ಮಾಣ ಮಾಡಿ, ಇದರಿಂದ ಕೇರಳದ ಅಭಿವೃದ್ಧಿಯಾಗುವುದು ಮಾತ್ರವಲ್ಲ, ದೇಶಕ್ಕೂ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

Advertisement

ಈಗಾಗಲೇ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವರೊಂದಿಗೆ ಜುಲೈನಲ್ಲಿ ಮಾತುಕತೆ ನಡೆಸಲಾಗಿತ್ತು. ಆದರೆ ರೈಲ್ವೆಯ ಆರ್ಥಿಕಸ್ಥಿತಿ ಹಿನ್ನೆಲೆಯಲ್ಲಿ ಅವರು ಸ್ವಲ್ಪ ಹಿಂಜರಿದಿದ್ದರು. ಇದೀಗ ನೀವು ಮಧ್ಯಪ್ರವೇಶಿಸಿ ಯೋಜನೆಗೆ ಅನುಮೋದನೆ ನೀಡಿ ಎಂದು ವಿನಂತಿಸಿದ್ದಾರೆ.

ಈಗಾಗಲೇ ಕೇರಳ ಸರ್ಕಾರ ಭೂಸ್ವಾಧೀನಕ್ಕೆ ಬೇಕಾದ ಅಷ್ಟೂ ಹಣ (13,700 ಕೋಟಿ ರೂ.) ನೀಡುವುದಾಗಿ ಘೋಷಿಸಿದೆ. ಒಂದು ವೇಳೆ ಕೇರಳ ರೈಲ್ವೆ ಘಟಕ ಬಾಹ್ಯ ಸಾಲ ಪಡೆದರೆ, ಅದರ ಹೊಣೆಯನ್ನೂ ಹೊರುವುದಾಗಿ ಪಿಣರಾಯಿ ಭರವಸೆ ನೀಡಿದ್ದಾರೆ. ಈ ಮಧ್ಯೆ ಪ್ರತಿಪಕ್ಷ ಕಾಂಗ್ರೆಸ್‌, ಕೇಂದ್ರ ಈ ಯೋಜನೆಗೆ ಅನುಮೋದನೆ ನೀಡಿಲ್ಲ, ಆದರೂ ರಾಜ್ಯ ಸರ್ಕಾರ ಭೂಸ್ವಾಧೀನ ನಡೆಸುತ್ತಿದೆ ಎಂದು ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿಂದು 399 ಕೋವಿಡ್‌ ಪಾಸಿಟಿವ್‌ ಪತ್ತೆ: 6 ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next