ಮಂಗಳೂರು: ಕರಾವಳಿಯ ದೇವಾರಾಧನೆ, ದೈವಾರಾಧನೆ, ಕಂಬಳ ಕಲೆ ಸಂಸ್ಕೃತಿ ಎಲ್ಲವೂ ಪ್ರಕೃತಿಯಿಂದ ಬಂದಿದೆ. ಇವೆಲ್ಲ ಮುಂದಿನ ದಿನಗಳಲ್ಲೂ ಮುಂದುವರಿಯಬೇಕಾದರೆ ಮರ-ಗಿಡಗಳನ್ನು ಉಳಿಸುವತ್ತ ಗಮನ ಹರಿಸಬೇಕು. ಇದರಿಂದ ಮಾತ್ರ ನಾವು ಅಭಿವೃದ್ಧಿಯನ್ನು ಆನಂದಿಸಬಹುದು ಎಂದು ಜಿ.ಆರ್. ಮೆಡಿಕಲ್ ಕಾಲೇಜು ಮತ್ತು ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಹೇಳಿದರು.
ಶನಿವಾರ ತಿರುವೈಲು ಶ್ರೀ ಅಮೃತೇಶ್ವರ ದೇವಳದ ಎದುರಿನ ತಿರುವೈಲುಗುತ್ತಿನ ಕಂಬಳ ಗದ್ದೆಯಲ್ಲಿ ವಾಮಂಜೂರು ತಿರುವೈಲು ಗುತ್ತು ಸಂಕುಪೂಂಜ – ದೇವುಪೂಂಜ ಜೋಡು ಕರೆ ಕಂಬಳ ಟ್ರಸ್ಟ್ ವತಿಯಿಂದ ಜರುಗಿದ “ತುಳುನಾಡಿನ ಕಂಬಳ ತಿರುವೈಲೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ, ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಮಾಡಬೇಕು. ಎಂದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಜನಾಕರ್ಷಣೆಯೊಂದಿಗೆ ಪ್ರತೀ ವರ್ಷ ನಡೆಯುವ ತಿರುವೈಲು ಗುತ್ತು ಕಂಬಳ ಇನ್ನಷ್ಟು ಕಾಲ ಮುಂದುವರಿಯಲಿ ಎಂದರು.
ಟಿವಿಎಸ್ ಮೋಟಾರ್ ಕಂಪೆನಿ ಉಪಾಧ್ಯಕ್ಷ ರಾಹುಲ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮಾಜಿ ಶಾಸಕ ಬಿ.ಎ.ಮೊದಿನ್ ಬಾವಾ, ಅರಸು ಮುಂಡಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲ ಕೃಷ್ಣ ಭಂಡಾರಿ, ಪ್ರಮುಖರಾದ ಕಿಶೋರ್ ನಾಯ್ಕ, ಪದ್ಮರಾಜ್ ಆರ್., ಸಂತೋಷ್ ಶೆಟ್ಟಿ, ದೀಪಕ್ ಶೆಟ್ಟಿ, ಪವನ್ ಕುಮಾರ್, ಓಂ ಪ್ರಕಾಶ್ ಶೆಟ್ಟಿ, ಗಣೇಶ್ ಶೆಟ್ಟಿ ಜಪ್ಪು ಗುಡ್ಡೆ ಗುತ್ತು, ಸೀತಾರಾಮ ಜಾಣು ಶೆಟ್ಟಿ, ಸದಾಶಿವ ಭಟ್, ಕೆ.ಪ್ರತೋಷ್ ಮಲ್ಲಿ, ಉಮೇಶ್ ರೈ, ಗಿರಿಧರ ಶೆಟ್ಟಿ, ಗ್ರಾಪಂ ಸದಸ್ಯೆ ಸುಮಲತಾ, ಸುರೇಶ್ ಶೆಟ್ಟಿ ಕಾಪೆಟ್ಟುಗುತ್ತು, ಸನತ್ ಕುಮಾರ್ ರೈ ಪಡು, ಚಂದ್ರಶೇಖರ ಶೆಟ್ಟಿ ಕಾಪೆಟ್ಟುಗುತ್ತು, ಬಾಲಕೃಷ್ಣ ಭಂಡಾರಿ ಲಿಂಗಮಾರುಗುತ್ತು, ಚಂದ್ರಹಾಸ ಶೆಟ್ಟಿ ಬಾಳಿಕೆ ಮನೆ, ನವೀನ್ ಶೆಟ್ಟಿ ಪೆಜತ್ತಬೆಟ್ಟು, ಗಂಗಯ್ಯ ಅಮೀನ್, ನವೀನ್ ಚೌಟ, ಸಂದೀಪ್ ಶೆಟ್ಟಿ, ಬಾಲಕೃಷ್ಣ ಕೊಟ್ಟಾರಿ, ಚಂದ್ರಹಾಸ ರೈ, ಕಂಬಳ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಆಳ್ವ , ಗೌರವಾಧ್ಯಕ್ಷ ವಿಥುನ್ ರೈ, ಕಾರ್ಯಾಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಕೋಶಾಧಿಕಾರಿ ಧನರಾಜ್ ಶೆಟ್ಟಿ, ನವೀನ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ, ಕೆ. ಅಭಿಷೇಕ್ ಆಳ್ವ ಉಪಸ್ಥಿತರಿದ್ದರು.