Advertisement

ತಿರುಮಲದ ಈ ಸೇವೆಗೆ 1.5 ಕೋಟಿ ರೂ.! ಇದು ಜಗತ್ತಿನಲ್ಲೇ ಅತ್ಯಂತ ದುಬಾರಿ ಸೇವೆ

09:08 PM Jan 01, 2022 | Team Udayavani |

ತಿರುಮಲ : ಕ್ಯೂನಲ್ಲಿ ಗಂಟೆಗಟ್ಟಲೆ ಕಾದು ಅಥವಾ 300 ರೂ. ಪಾವತಿಸಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದನ್ನು ನೋಡಿರುತ್ತೀರಿ. ಆದರೆ, ಈಗ ತಿರುಮಲ ವೆಂಕಟೇಶ್ವರ ದೇವಾಲಯದ ಆಡಳಿತಮಂಡಳಿಯು ಜಗತ್ತಿನಲ್ಲೇ ಅತ್ಯಂತ ದುಬಾರಿ “ಸೇವೆ’ಯನ್ನು ಪರಿಚಯಿಸಲು ಮುಂದಾಗಿದೆ.

Advertisement

ಈ ವಿಶೇಷ ಸೇವೆಯ ಹೆಸರೇ “ಉದಯಾಸ್ತಮಾನ ಸೇವೆ’. ಇದಕ್ಕೆ ತಗಲುವ ವೆಚ್ಚ ಬರೋಬ್ಬರಿ 1 ಕೋಟಿ ರೂ.ಗಳಿಂದ ಒಂದೂವರೆ ಕೋಟಿ ರೂ.!

ಸುಪ್ರಭಾತಂನಿಂದ ಏಕಾಂತ ಸೇವೆವರೆಗೆ :

ಹೌದು.ಅಚ್ಚರಿಯಾದರೂ ಇದು ಸತ್ಯ. ಕೋಟಿ ರೂಪಾಯಿ ಪಾವತಿಸುವ ಭಕ್ತರು ಮತ್ತು ಅವರ ಕುಟುಂಬದ ಐವರು ಸದಸ್ಯರು ಗರ್ಭಗುಡಿಯ ಸಮೀಪ ಮತ್ತು ಇತರೆ ನಿರ್ದಿಷ್ಟ ಪ್ರದೇಶಗಳಲ್ಲಿ ಇಡೀ ದಿನ ಕುಳಿತು ಬೆಳಗ್ಗಿನ ಸುಪ್ರಭಾತಂನಿಂದ ಹಿಡಿದು ಸಂಜೆಯ ಏಕಾಂತ ಸೇವೆಯವರೆಗೆ ತಿಮ್ಮಪ್ಪನಿಗೆ ಸಲ್ಲುವ ಎಲ್ಲ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ವೀಕ್ಷಿಸಬಹುದು. ಇತರೆ ದಿನಗಳಲ್ಲಿ ಈ ಸೇವೆಗೆ 1 ಕೋಟಿ ರೂ. ಇದ್ದರೆ, ಶುಕ್ರವಾರ ಮಾತ್ರ ಅಭಿಷೇಕಂ ಕೂಡ ನೋಡಲು ಅವಕಾಶವಿರುವ ಕಾರಣ, ಇದರ ಮೊತ್ತ ಒಂದೂವರೆ ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : 70 ವರ್ಷಗಳ ಸಿನಿ ಪ್ರಯಾಣ ಮಾಡಿದ್ದ ಹಾಲಿವುಡ್‌ನ‌ ಹಿರಿಯ ನಟಿ ಬೆಟ್ಟಿ ವೈಟ್‌ ನಿಧನ

Advertisement

ಎಷ್ಟು ಮಂದಿಗೆ ಅವಕಾಶ ಕಲ್ಪಿಸುವುದು, ಎಷ್ಟು ವರ್ಷಗಳ ಕಾಲ ಈ ಸೇವೆ ನೀಡುವುದು ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು. ಇದರಿಂದ ಬರುವ ಮೊತ್ತವನ್ನು ಸಂಪೂರ್ಣವಾಗಿ ಸೂಪರ್‌ ಸ್ಪೆಷಾಲಿಟಿ ಮಕ್ಕಳ ಹೃದ್ರೋಗ ಆಸ್ಪತ್ರೆಯ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಟಿಟಿಡಿ ಹೇಳಿದೆ.

ಈ ಹಿಂದೆಯೂ ಅಂದರೆ 80ರ ದಶಕದಲ್ಲೂ ಉದಯಾಸ್ತಮಾನ ಸೇವೆ ನೀಡಲಾಗುತ್ತಿತ್ತು. ಅದರ ಆರಂಭಿಕ ದರ 1 ಲಕ್ಷ ರೂ. ಆಗಿತ್ತು. ಬಳಿಕ ಅದನ್ನು 10 ಲಕ್ಷ ರೂ.ಗೆ ಏರಿಸಲಾಯಿತು. ಸ್ಥಳಾವಕಾಶದ ಕೊರತೆ ಮತ್ತಿತರ ಕಾರಣಗಳಿಂದಾಗಿ 2010ರಲ್ಲಿ ಈ ಸೇವೆ ಸ್ಥಗಿತಗೊಳಿಸಲಾಯಿತು ಎಂದೂ ಟಿಟಿಡಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next