Advertisement

ತಿರುಪತಿ-ತಿರುಮಲ ಛತ್ರ ಅಭಿವೃದ್ಧಿ : ನಾಯ್ಕ್‌

01:18 AM Feb 14, 2019 | Team Udayavani |

ವಿಧಾನಪರಿಷತ್‌: ಆಂಧ್ರಪ್ರದೇಶದ ತಿರುಪತಿಯಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಪ್ರವಾಸಿಸೌಧದ ಸುಧಾರಣೆಗೆ ಸಮಿತಿ ರಚಿಸುವುದರ ಜತೆಗೆ ವಿಧಾನ ಪರಿಷತ್‌ ಸದಸ್ಯರ ನಿಯೋಗ ಕೊಂಡೊಯ್ಯಲಾಗುವುದು ಎಂದು ಮುಜರಾಯಿ ಖಾತೆ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.

Advertisement

ಪರಿಷತ್‌ನಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರವಾಸಿಸೌಧದಲ್ಲಿರುವ ಒಟ್ಟಾರೆ 91 ಕೊಠಡಿಗಳ ಪೈಕಿ 60 ನವೀಕರಿಸಲಾಗಿದ್ದು, ಇದರಲ್ಲಿ 40 ಕೊಠಡಿಗಳಿಗೆ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಆನ್‌ಲೈನ್‌ ಬುಕಿಂಗ್‌ ಸೌಲಭ್ಯ ಒದಗಿಸಲಾಗಿದೆ. ಉಳಿದ ಕೊಠಡಿಗಳ ದುರಸ್ಥಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನಾಲ್ಕು ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಸರ್ಕಾರವು ವರ್ಷದಲ್ಲಿ 60 ದಿನಗಳು ಉಚಿತವಾಗಿದ್ದ ಕೊಠಡಿಗಳನ್ನು 2010ರಿಂದ ಈಚೆಗೆ ಶೇ. 25ರಷ್ಟು ಬಾಡಿಗೆ ನಿಗದಿಪಡಿಸಿ, 20 ದಿನಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಸಭೆ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌, ಒಮ್ಮೆ ಕರ್ನಾಟಕ ಛತ್ರಗಳಿಗೆ ಭೇಟಿ ನೀಡಿದವರು ಮತ್ತೂಮ್ಮೆ ತಿರುಪತಿಗೆ ಹೋಗುವುದೇ ಬೇಡ ಅನಿಸುತ್ತದೆ. ಅಷ್ಟರಮಟ್ಟಿಗೆ ಅವ್ಯವಸ್ಥೆಯ ಆಗರ ಆಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್‌ ಸದಸ್ಯ ಟಿ.ಎ. ಶರವಣ, ತಿರುಪತಿಯಲ್ಲಿರುವುದು ಹೆಸರಿಗೆ ಮಾತ್ರ ಕರ್ನಾಟಕ ಸೌಧದ ಕೊಠಡಿಗಳು. ಆದರೆ,ಅದನ್ನು ಬಾಡಿಗೆ ನೀಡುವುದು ಅನ್ಯರಾಜ್ಯದವರಿಗೆ ಎಂದು ಅಸಮಾಧಾನ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next