Advertisement

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

04:09 PM Sep 20, 2024 | Team Udayavani |

ಹುಬ್ಬಳ್ಳಿ: ತಿರುಪತಿ‌ ಲಡ್ಡು ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ‌ ಪವಿತ್ರ ಕ್ಷೇತ್ರಗಳಲ್ಲಿ‌ ನೀಡುವ ಪ್ರಸಾದವನ್ನೂ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು‌ ಕೇಂದ್ರ ಸಚಿವ ಪ್ರಹ್ಲಾದ ಜೋಶಿ‌ ಶುಕ್ರವಾರ(ಸೆ20)ಒತ್ತಾಯಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ‘ತಿರುಪತಿಯಲ್ಲಿ ಭಕ್ತರಿಗೆ ನೀಡುವ ಪ್ರಸಾದ ಪ್ರಕರಣದ ವಿಚಾರವಾಗಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು. ತಿರುಪತಿಯಲ್ಲಿ‌ ಲಾಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು, ಮೀನು ಎಣ್ಣೆ ಬಳಕೆ ಹಿನ್ನೆಲೆಯಲ್ಲಿ ‌ರಾಜ್ಯದ ಎಲ್ಲ‌ ಪವಿತ್ರ ಕ್ಷೇತ್ರಗಳ‌ ಪ್ರಸಾದಕ್ಕೆ ಬಳಸುವ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ‌ ಜಗಮೋಹನ್ ರೆಡ್ಡಿ ‌ಸಿಎಂ ಆಗಿದ್ದಾಗ ತಿರುಪತಿಯಲ್ಲಿ ಪ್ರಸಾದಕ್ಕೆ ಜಾನುವಾರು‌‌‌‌ ಕೊಬ್ಬು, ಮೀನು ಎಣ್ಣೆ ಬಳಸಿ ಹಿಂದೂ ವಿರೋಧಿ ಕ್ರಮಗಳಿಗೆ ಬೆಂಬಲವಾಗಿ ನಿಂತಿದ್ದರು. ಜಗನ್‌ ಮೋಹನ‌ ರೆಡ್ಡಿ ಅವರು ಹಿಂದೂಯೇತರರನ್ನು ತಿರುಪತಿಯ ಟ್ರಸ್ಟ್ ಸದಸ್ಯರನ್ನಾಗಿ ನೇಮಕ‌ ಮಾಡಿದ್ದರು. ಹಿಂದೂ ಧಾರ್ಮಿಕ ಟ್ರಸ್ಟ್ ಗಳಿಗೆ ಹಿಂದೂಯೇತರರನ್ನು‌ ಸದಸ್ಯರನ್ನಾಗಿ ನೇಮಕ‌ ಮಾಡಬಾರದು’ ಎಂದು ಸಚಿವ ಜೋಶಿ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next