Advertisement

Tirupati; ವಿವಾದದಲ್ಲೂ 4 ದಿನದಲ್ಲಿ ಮಾರಾಟವಾದ ಲಡ್ಡುಗಳೆಷ್ಟು ಗೊತ್ತೇ?

07:46 AM Sep 25, 2024 | Team Udayavani |

ಹೈದರಾಬಾದ್‌:  ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಮಿಶ್ರಿತವಾ ಗಿದೆ ಎಂಬ ಆರೋಪಗಳು ವಿವಾದ ಸೃಷ್ಟಿಸಿ ರುವ ನಡುವೆಯೂ ತಿರುಪತಿ ಲಡ್ಡುಗಳಿಗಿ ರುವ ಬೇಡಿಕೆ ಏನೂ ಕಡಿಮೆಯಾಗಿಲ್ಲ. ಕಳೆದ 4 ದಿನದಲ್ಲಿ ದೇಗುಲದಲ್ಲಿ ಬರೋಬ್ಬರಿ 14 ಲಕ್ಷ ಲಡ್ಡು ಪ್ರಸಾದ ಮಾರಾಟವಾಗಿವೆ.

Advertisement

ಈ ಕುರಿತು ದೇಗುಲ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ದಿನಂಪ್ರತಿ 60,000 ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಪ್ರಸಾದ ಸೇವನೆಗೆ, ವಿತರಣೆಗೆಂದು ಸಾಕಷ್ಟು ಲಡ್ಡುಗಳನ್ನು ಖರೀದಿಸುತ್ತಾರೆ. ಅದರಂತೆ ಸೆ.19ರಂದು 3.59 ಲಕ್ಷ ಲಡ್ಡು ಮಾರಾ­ಟ­ವಾಗಿವೆ. ಸೆ.20ರಂದು 3.17 ಲಕ್ಷ, ಸೆ.21ಕ್ಕೆ 3.67 ಲಕ್ಷ, ಸೆ.22ಕ್ಕೆ 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ. ವಿವಾದಕ್ಕೆ ಮೊದಲು ದೇಗುಲದಲ್ಲಿ ಪ್ರತೀದಿನ ಸರಾಸರಿ 3.50 ಲಕ್ಷ ಲಡ್ಡು ಮಾರಾಟವಾಗುತ್ತಿತ್ತು. ಈಗಲೂ ಅದರ ಆಸುಪಾಸಿನ ಸಂಖ್ಯೆಯಲ್ಲೇ ಮಾರಾಟ­ವಾಗುತ್ತಿದೆ ಎಂದು ಟಿಟಿಡಿ ಹೇಳಿದೆ.

ಕಲ್ಲುಸಕ್ಕರೆ ಪ್ರಸಾದಕ್ಕೆ ಆಗ್ರಹ

ಲಡ್ಡು ಸೇರಿ ಸಿದ್ಧಪಡಿಸಿದ ಆಹಾರವನ್ನು ಭಕ್ಷರಿಗೆ ಪ್ರಸಾದ­ವಾಗಿ ನೀಡುವ ಬದಲು ಹಿಂದೂ ದೇವರುಗಳಿಗೆ ನೈವೇದ್ಯವಾಗಿ ನೀಡುವ ಕಲ್ಲುಸಕ್ಕರೆ, ಏಲಕ್ಕಿ, ಒಣಹಣ್ಣುಗಳನ್ನೇ ಭಕ್ತರಿಗೂ ಪ್ರಸಾದವಾಗಿ ನೀಡಬೇಕು. ಎಲ್ಲಾ ದೇವಾಲಯ­ಗಳು ಇದೇ ಪದ್ಧತಿಯನ್ನು ಅನುಸರಿಸಬೇಕು ಎಂದು ಸನ್ಯಾಸಿಗಳ ಪ್ರಮುಖ ಸಂಘಟನೆ ಆಗ್ರಹಿಸಿದೆ. ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಸನ್ಯಾಸಿ ಸಂಘಟನೆಯ ಈ ಆಗ್ರಹ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next