Advertisement

ಮೇ4ಕ್ಕೆ ತಿರುಪತಿ ಬ್ರಹ್ಮೋತ್ಸವಂ

08:58 PM Apr 23, 2023 | Team Udayavani |

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿರುವ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ)ದಲ್ಲಿ ಮೇ 4ರಿಂದ ವಾರ್ಷಿಕ ಬ್ರಹ್ಮೋತ್ಸವಂ ನಡೆಸಲು ಟಿಟಿಡಿ ಆಡಳಿತ ಮಂಡಳಿ ಸಜ್ಜುಗೊಂಡಿದೆ. ಏ.25ರಂದು ಪೂರ್ವಭಾವಿಯಾಗಿ ಕೋಲಿ ಆಲ್ವಾರ್‌ ತಿರುಮಂಜನಂ ಆಚರಣೆಯನ್ನು ನೆರವೇರಿಸಲಾಗುತ್ತದೆ. ಬಳಿಕ ಮೇ 4ರಿಂದ 9 ದಿನಗಳ ಕಾಲ ಬ್ರಹ್ಮೋತ್ಸವಂ ನಡೆಯಲಿದೆ. ಈ ವೇಳೆ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಆಡಳಿತ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next