Advertisement

ನಾಗರ ಹಾವಿಗೂ ಆಪರೇಷನ್‌!

03:07 PM Apr 22, 2020 | Naveen |

ತೀರ್ಥಹಳ್ಳಿ: ಗಾಯಗೊಂಡ ನಾಗರ ಹಾವಿಗೆ ಆಪರೇಷನ್‌ ಮಾಡಿ ಚಿಕಿತ್ಸೆ ನೀಡಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಡಾ| ಯುವರಾಜ್‌ ಹೆಗ್ಡೆ ಈ ಚಿಕಿತ್ಸೆ ಮಾಡಿದ್ದು ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕೋವಿಡ್ ಆತಂಕದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.

Advertisement

ತೀರ್ಥಹಳ್ಳಿಯ ಉಂಟೂರು ಕಟ್ಟೆ ಬಳಿಯ ಶೆಟ್ಟಿಗಳ ಕೊಪ್ಪ ಗ್ರಾಮದಲ್ಲಿ ಸತ್ಯವತಿ ಮಾನಪ್ಪ ಹೆಗಡೆ ಅವರ ಮನೆಯಲ್ಲಿ ಜೆಸಿಬಿ ಯಂತ್ರದಲ್ಲಿ ಮಣ್ಣು ತೆಗೆಯುವ ವೇಳೆಯಲ್ಲಿ ಮಣ್ಣಿನ ಅಡಿಯಲ್ಲಿದ್ದ ನಾಗರ ಹಾವಿಗೆ ತೀವ್ರ ಗಾಯವಾಗಿತ್ತು. ಆಕಸ್ಮಿಕವಾಗಿ ಆದ ಸಮಸ್ಯೆಗೆ ಮರುಗಿದ ಕುಟುಂಬ ಮಂಗಳವಾರ ಚಿಕಿತ್ಸೆ ನೀಡಬೇಕೆಂದು ವೈದ್ಯರಲ್ಲಿ ಕೇಳಿಕೊಂಡಿದ್ದರು. ಲಾಕ್‌ ಡೌನ್‌ ಸಮಯವಾದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆಡೆಗೆ ತೆಗೆದುಕೊಂಡು ಹೋಗುವುದು ಸಾಧ್ಯವೂ ಇರಲಿಲ್ಲ. ಅಲ್ಲದೆ ಸರೀಸೃಪಗಳಿಗೆ ಚಿಕಿತ್ಸೆ ನೀಡುವಾಗ ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ .

ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದು ನಂತರ ಹಲವಾರು ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡಿ, ಅಗತ್ಯ ಮಾಹಿತಿಗಳನ್ನು ಮತ್ತು ಚಿಕಿತ್ಸಾ ವಿಧಾನಗಳನ್ನು ಚರ್ಚಿಸಿ ಹಾವಿಗೆ ಚಿಕಿತ್ಸೆ ನೀಡಿದ್ದಾರೆ. ಅರಿವಳಿಕೆ ನೀಡುವಾಗ ಹಾವನ್ನು ನಿಯಂತ್ರಿಸುವ ಸಲುವಾಗಿ ಮಲೆನಾಡಿನ ಪ್ರಸಿದ್ಧ ಉರಗ ತಜ್ಞ ಮಾರುತಿ ಅವರನ್ನು ಸಹ ಜೊತೆಗೆ ಕರೆದುಕೊಂಡು ಹೋಗಿ ಆಪರೇಷನ್‌ ಮಾಡಲಾಗಿದೆ.

ತೀರ್ಥಹಳ್ಳಿಯ ಪ್ರಸಿದ್ಧ ಪಶುವೈದ್ಯರಾಗಿರುವ ಡಾ| ಯುವರಾಜ ಹೆಗಡೆ ಮೊನ್ನೆ ತಾನೇ ದುಷ್ಕರ್ಮಿಗಳು ದನದ ಕಾಲನ್ನು ಕಡಿದಿದ್ದಕ್ಕೆ ಚಿಕಿತ್ಸೆ ನೀಡಿ ಸಾರ್ವಜನಿಕ ಮೆಚ್ಚುಗೆ ಪಡೆದಿದ್ದರು. ಈಗ ಹಾವಿಗೆ ಆಪರೇಷನ್‌ ಮಾಡಿ ಮಾನವೀಯತೆ ಮೆರೆದಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next