Advertisement

ಸರ್ಕಾರಿ ಅಧಿಕಾರಿಗಳಿಗೆ ಕ್ವಾರಂಟೈನ್‌

06:30 PM Apr 24, 2020 | Naveen |

ತೀರ್ಥಹಳ್ಳಿ: ತಾಲೂಕಿಗೆ ಆಗಮಿಸುವ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಕ್ಷೇತ್ರದ ಶಾಸಕ ಆರಗ ಜಾನೇಂದ್ರ, ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿದರು. ಕಟ್ಟುನಿಟ್ಟಿನ ಆದೇಶ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡದರು.

Advertisement

ಬಿದರುಗೋಡಿನ ವಾಹನ ತಪಾಸಣಾ ಕೇಂದ್ರದಲ್ಲಿ ಉಡುಪಿ ಜಿಲ್ಲೆಯ ವಾಹನವನ್ನು ತಡೆದು ಪುನಃ ವಾಪಸ್‌ ಕಳುಹಿಸಿದ ಘಟನೆಯೂ ನಡೆಯಿತು. ಬುಧವಾರ ಕುಶಾವತಿ ಚೆಕ್‌ಪೋಸ್ಟ್‌ನಲ್ಲಿ ಮಂಡ್ಯದಿಂದ ಬಂದ ತೀರ್ಥಹಳ್ಳಿಯ ಸರ್ಕಾರಿ ಅಧಿಕಾರಿಯನ್ನೇ ತಡೆದು ಇಪ್ಪತ್ತೆಂಟು ದಿನಗಳ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಭೂ ದಾಖಲೆಗಳ ಸಂಬಂಧಪಟ್ಟ ತೀರ್ಥಹಳ್ಳಿ ತಾಲೂಕು ಸರ್ವೆಯರ್‌ ಮತ್ತು ಪರ್ಯಾಯ ವೀಕ್ಷಕರನ್ನು ತಡೆದು ಹೋಂ ಕ್ವಾರಂಟೈನ್‌ಗೆ 28 ದಿನ ಕಳುಹಿಸಿದ್ದಾರೆ.

ಪಟ್ಟಣದ ಮೀನು ಮಾರ್ಕೆಟ್‌ ಹತ್ತಿರ ಖಾಸಗಿ ಬಡಾವಣೆಯೊಂದರ ಸಮೀಪ ಐವತ್ತು ಜನರ ಗುಂಪೊಂದು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕ್ರಿಕೆಟ್‌ ಆಡುತ್ತಿತ್ತು. ಆ ಗುಂಪಿನ ಮೇಲೆ ದಾಳಿ ನಡೆಸಿದ್ದು ಕ್ರಿಕೆಟ್‌ ಆಡುತ್ತಿದ್ದವರೆಲ್ಲರೂ ಪಲಾಯನ ಮಾಡಿದ್ದಾರೆ. ಅವರ ಕಾರು- ಬೈಕ್‌ಗಳನ್ನು ಸೀಜ್‌ ಮಾಡಿ ವಶಪಡಿಸಿಕೊಂಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮಕ್ಕೆ ಶ್ರಮಿಸುತ್ತಿರುವ ಶಾಸಕ ಆರಗ ಜಾನೇಂದ್ರ, ತಹಶೀಲ್ದಾರ್‌ ಡಾ| ಶ್ರೀಪಾದ್‌, ಡಿವೈಎಸ್ಪಿ ಸಂತೋಷ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಗಣೇಶಪ್ಪ, ಸಬ್‌ಇನ್ಸ್‌ಪೆಕ್ಟರ್‌ ಎಲ್ಲಪ್ಪನವರ್‌, ತಾಪಂ ಕಾರ್ಯ ನಿರ್ವಹಣಾ ಧಿಕಾರಿ ಆಶಾಲತಾ, ಪಪಂ ಮುಖ್ಯಾ ಧಿಕಾರಿ ಸಿ.ಡಿ. ನಾಗೇಂದ್ರ, ಕಂದಾಯ ಅ ಧಿಕಾರಿ ಮಂಜುನಾಥ್‌ ಮತ್ತು ತಂಡಕ್ಕೆ ಜನತೆಯಿಂದ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next