ತೀರ್ಥಹಳ್ಳಿ: ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಹೆಗ್ಗೇಬೈಲು ಹೋಗುವ ರಸ್ತೆಯಲ್ಲಿ 12 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವೊಂದು ಶನಿವಾರ ರಾತ್ರಿ ಪತ್ತೆಯಾಗಿದೆ.
ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಹೋಗುವ ವೇಳೆ ಹಾವು ನೋಡಿ, ರಸ್ತೆಯಲ್ಲಿ ಹಾವು ಇರುವ ಸುದ್ದಿಯನ್ನು ಊರಿನವರಿಗೆ ತಿಳಿಸಿದ್ದಾರೆ. ಭಾರೀ ಗಾತ್ರದ ಹೆಬ್ಬಾವು ಇರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯರು ರಾತ್ರಿ ವೇಳೆ ಗ್ರಾಮಸ್ಥರು ಹಾವನ್ನು ನೋಡಲು ಜಮಾಯಿಸಿದ್ದಾರೆ.
ಉರಗ ತಜ್ಞ ಮಾರುತಿ ಮಾಸ್ಟರ್ ಸಹಕಾರದಿಂದ ಭಾರೀ ಗಾತ್ರದ ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬ್ಬಾವು ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳಾದ ಪರಶುರಾಮ ಹಾಗೂ ಮಾಲತೇಶ್ ರವರು ಸ್ಥಳಕ್ಕಾಗಮಿಸಿ ಸೆರೆಯಾದ ಹೆಬ್ಬಾವನ್ನು ದೂರದ ಹೆಗ್ಗರ್ ಗುಡ್ಡ ಸಮೀಪ ಕಾಡಿನಲ್ಲಿ ಬಿಟ್ಟು ಬರುವುದಾಗಿ ತಿಳಿಸಿ ಗ್ರಾಮಸ್ಥರಿಗೆ ಇದ್ದ ಹೆಬ್ಬಾವಿನ ಭಯ ಹೊಗಲಾಡಿಸಿದರು.
ಇದನ್ನೂ ಓದಿ: ಶಿವರಾಜ್ ಕುಮಾರ್ ಅವರ ಕೃತಜ್ಞತೆ ಅವರ ಮತ್ತು ದೊಡ್ಮನೆಯ ದೊಡ್ಡ ಗುಣ: ಸಿಎಂ ಬೊಮ್ಮಾಯಿ
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಂತೋಷ್, ಜಗದೀಶ ಆಚಾರ್, ನಾಗರಾಜ್, ಗಣೇಶ್, ಸೃಜನ್, ಗಿರೀಶ್, ಪ್ರದೀಪ್, ನವ ಎಸ್ ನಾಯಕ್, ಮಾಣಿ, ತಿರಳೇಬೈಲು ಶರತ್ ಅಪ್ಪು ಮತ್ತಿತರ ಗ್ರಾಮಸ್ಥರು ಇದ್ದರು.