Advertisement
ದೇಶದ ಐಕ್ಯತೆ, ಸಮಗ್ರತೆ ಎತ್ತಿಹಿಡಿಯುವ ಸಲುವಾಗಿ ಇಲಾಖೆಯ ಬಹುಮುಖೀ ಯೋಜನೆಗಳಿಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಚಾಲನೆ ನೀಡಿದರು. ಇದರಂತೆ, ಕೋಸ್ಟಲ್ ಗಾರ್ಡ್‌ನ ಸಿಬಂದಿ ದೇಶಾದ್ಯಂತ 100 ದ್ವೀಪಗಳಲ್ಲಿ ರಾಷ್ಟ್ರಧ್ವಜಾರೋಣ ನಡೆಸದ್ದಾರೆ.
Related Articles
Advertisement
ರಾಷ್ಟ್ರ ರಾಜಧಾನಿ ಸುತ್ತಮುತ್ತ ನಾಲ್ವರು ಕಿಡಿಗೇಡಿ ಗಳನ್ನು ಶಸ್ತ್ರಾಸ್ತ್ರ ಸಹಿತ ಶುಕ್ರವಾರ ಸೆರೆಹಿಡಿಯಲಾ ಗಿದೆ. ರಾಜ್‌ಬೀರ್, ಧೀರಜ್, ಧರ್ಮೇಂದರ್, ವಿನೋದ್ ಎಂಬುವವರು ಪೊಲೀಸರ ಬಲೆಗೆ ಬಿದ್ದಿದ್ದು, 50 ಜೀವಂತ ಸ್ಫೋಟಕಗಳ ಜತೆಗೆ 55 ಪಿಸ್ತೂಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಐಇಡಿ ಅಳವಡಿಸಲ್ಪಟ್ಟ ಸ್ಟಿಕ್ಕಿ ಬಾಂಬ್‌ಗಳನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. ಒಟ್ಟಿನಲ್ಲಿ ಭಾರೀ ವಿಧ್ವಂಸಕ ಕೃತ್ಯವನ್ನು ತಡೆದಂತಾಗಿದೆ. ಈ ನಡುವೆ, ಜಮ್ಮು-ಕಾಶ್ಮೀರ ಹೆದ್ದಾರಿಯಲ್ಲಿ ಭಾರೀ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನಿ ಉಗ್ರನನ್ನು ಕುಲ್ಗಾಂನಲ್ಲಿ ಭದ್ರತಾಪಡೆ ಹೊಡೆದುರುಳಿಸಿದೆ.