ಬೆಂಗಳೂರು: ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತ ಪಾಠಗಳನ್ನು ತೆಗೆದಿಲ್ಲ. ಮೈಸೂರು ಹುಲಿ ಎಂಬ ಬಿರುದು ಕೂಡ ಉಳಿಸಿಕೊಳ್ಳಲಾಗಿದೆ. ಆದರೆ, ಸಾಕ್ಷ್ಯವಿಲ್ಲದ ವಿಚಾರಗಳನ್ನು ಮಾತ್ರ ಕೈಬಿಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಪ್ಪಚ್ಚು ರಂಜನ್ ಅವರು ಪ್ಪು ಪಠ್ಯವನ್ನು ಸಂಪೂರ್ಣವಾಗಿ ಕೈಬಿಡಿ ಅಥವಾ ಟಿಪ್ಪುವಿನ ಮತ್ತೂಂದು ಮುಖವನ್ನು ಕೂಡ ಪರಿಚಯಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ, ಆಧಾರವಿಲ್ಲದ ವಿಚಾರಗಳನ್ನು ಕೈಬಿಡಲಾಗಿದ್ದು, ಪಾಠವನ್ನು ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಪ್ರತಿಭೆಗೆ ವಯಸ್ಸಿಲ್ಲ : ಎಳೆಯ ಹುಡುಗನ ಮೈಕ್, ಲೈಟಿಂಗ್ಸ್ ಕರಾಮತ್ತು
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಾಲೆಯಲ್ಲಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸಲಾಗುತ್ತಿದೆ. ನೈತಿಕ ಶಿಕ್ಷಣದಲ್ಲಿ ಪಂಚತಂತ್ರ ಕತೆಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಖುರಾನ್ ಮತ್ತು ಇನ್ನಿತರ ಯಾವುದೇ ಧರ್ಮದಲ್ಲಿ ಉತ್ತಮವಾಗಿರುವ ಅಂಶಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಶೇ.90ರಷ್ಟು ಯಾವ ವಿದ್ಯಾರ್ಥಿಗಳು ಇರುತ್ತಾರೋ ಆ ಧರ್ಮದ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೀಗಾಗಿ, ಯಾವುದೇ ಧರ್ಮಕ್ಕೆ ನೈತಿಕ ಶಿಕ್ಷಣ ಸೀಮಿತವಾಗಿಲ್ಲ ಎಂದು ಅವರು ತಿಳಿಸಿದರು.
ಮದರಸಾಗಳಲ್ಲೂ ಸರಕಾರವೇ ಶಿಕ್ಷಣ
ಮದರಸಾಗಳಲ್ಲಿ ಕಲಿಯುವ ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಹೇಳಿದ್ದಾರೆ. ಮದರಸಾಗಳಲ್ಲಿಯೂ ಸರಕಾರವೇ ಶಿಕ್ಷಣ ನೀಡುವ ಬೇಡಿಕೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ದೂರು ಬಂದರೆ, ಕ್ರಮ ವಹಿಸಲಾಗುವುದು ಎಂದರು.