Advertisement

ಸ್ವಾತಂತ್ರ್ಯಾ ಪರಿಕಲ್ಪನೆ ನೀಡಿದ್ದೇ ಟಿಪ್ಪು

03:39 PM Nov 11, 2018 | Team Udayavani |

ಲಿಂಗಸುಗೂರು: ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಟದ ಕಿಚ್ಚು ಹಚ್ಚಿದ ಟಿಪ್ಪು ಸುಲ್ತಾನ್‌ನಿಂದ ದೇಶದಲ್ಲಿ ಸ್ವಾತಂತ್ರ್ಯಾದ ಪರಿಕಲ್ಪನೆ ಮೂಡಿತು ಎಂದು ಪತ್ರಕರ್ತ ಹಾಗೂ ಸಿಂಧನೂರಿನ ಮನೋಮತ ಬಳಗ ಅಧ್ಯಕ್ಷ ಡಿ.ಎಚ್‌.ಕಂಬಳಿ ಹೇಳಿದರು.

Advertisement

ತಾಲೂಕು ಆಡಳಿತ ವತಿಯಿಂದ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಟಿಪ್ಪು ಸುಲ್ತಾನ್‌ 9 ವರ್ಷಗಳಲ್ಲಿ 4 ಕದನಗಳನ್ನು ಮಾಡಿದ್ದಾರೆ. ಐದು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಟಿಪ್ಪು ಒಬ್ಬ ಸ್ವತಂತ್ರ ಸೇನಾನಿಯಾಗಿದ್ದ. ಸಮಾನತೆ, ಸ್ವಾತಂತ್ರ್ಯಾ ಹಾಗೂ ಭ್ರಾತೃತ್ವ ಕನಸು ಕಂಡಿದ್ದನು. ವೀರನಾಗಿದ್ದ ಟಿಪ್ಪು ಸುಲ್ತಾನ್‌ನನ್ನು ಕಂಡರೆ ಬ್ರಿಟಿಷರಲ್ಲಿ ನಡುಕ ಉಂಟಾಗುತ್ತಿತ್ತು ಎಂದರು.

ಟಿಪ್ಪು ಸುಲ್ತಾನ್‌ ಉತ್ತಮ ಆಡಳಿತಗಾರನಾಗಿದ್ದ. ರೇಷ್ಮೆ ಕೃಷಿ ಪರಿಚಯಿಸಿದ ಕೀರ್ತಿ ಆತನಿಗೆ ಸಲ್ಲುತ್ತದೆ. ಅನೇಕ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದ್ದರು. ತನ್ನ ಆಡಳಿತಾವಧಿಯಲ್ಲಿ ಶೃಂಗೇರಿ ಶಾರದಾಂಬೆ ಮಠ ಸೇರಿ ಅನೇಕ ಹಿಂದೂ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದ್ದ. ಉಳುವವನೇ ಭೂ ಒಡೆಯ ಎಂಬ ಪರಿಕಲ್ಪನೆ ಹೊಂದಿದ್ದ ರಾಜನಿದ್ದರೆ ಅದು ಟಿಪ್ಪು ಮಾತ್ರ. 39 ಸಾವಿರ ಕೆರೆಗಳ ನಿರ್ಮಾಣ, ಇನ್ನಿತರ ಒಡ್ಡುಗಳನ್ನು ನಿರ್ಮಿಸಿ ಶೇ.35ರಷ್ಟು ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದ್ದನು ಎಂದರು.

ಟಿಪ್ಪುವಿನ ಬಗ್ಗೆ ಅನೇಕ ವಾದ-ವಿವಾದಗಳು ನಡೆಯುತ್ತಲೇ ಇವೆ. ಆದರೆ ಟಿಪ್ಪು ಸುಲ್ತಾನ್‌ನನ್ನು ಮಾನವೀಯ ಹಾಗೂ
ಅಭಿವೃದ್ಧಿ ಚಿಂತನೆ ದೃಷ್ಟಿಯಿಂದ ನೋಡಬೇಕು. ಟಿಪ್ಪುವಿನ ಮಾನವೀಯತೆ ಗುಣಗಳನ್ನು ಹಾಗೂ ಉತ್ತಮ ಆಡಳಿತದ
ಆದರ್ಶಗಳನ್ನು ಪಾಲಿಸಬೇಕು ಎಂದರು.

ಸಹಾಯಕ ಆಯುಕ್ತ ಎಂ.ಪಿ.ಮಾರುತಿ, ಎಪಿಎಂಸಿ ಅಧ್ಯಕ್ಷ ಜಂಬನಗೌಡ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ನಾಗನಗೌಡ
ತುರಡಗಿ, ತಂಜಿಮುಲ್‌ ಮುಸ್ಲಿಂ ಕಮಿಟಿ ಅಧ್ಯಕ್ಷ ಲಾಲ್‌ ಮಹ್ಮದ್‌ಸಾಬ, ತಹಶೀಲ್ದಾರ್‌ ಚಾಮರಾಜ ಪಾಟೀಲ, ಸಿಪಿಐ ವಿ.ಎಸ್‌. ಹಿರೇಮಠ, ಟಿಎಚ್‌ಒ ಡಾ| ರುದ್ರಗೌಡ, ಬಿಇಒ ಚಂದ್ರಶೇಖರ ಭಂಡಾರಿ ಸೇರಿ ಮುಸ್ಲಿಂ ಸಮಾಜದ ಮುಖಂಡರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next