ಮನೆ ಅಂದವಾಗಿದ್ದರೆ ನೋಡಲು ಚಂದ. ಅದರಲ್ಲೂ ಬೆಡ್ ರೂಂಗಳು ಎಷ್ಟು ಚೊಕ್ಕಟವಾಗಿರುತ್ತವೆಯೋ ಅಷ್ಟು ನಮ್ಮ ಮನಸ್ಸು ಉಲ್ಲಸಿತವಾಗಿರುತ್ತವೆ.
ದಿನವಿಡೀ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬರುವವರು ಬಯಸುವುದು ಸುಖಕರ ನಿದ್ದೆ. ನಿದ್ರೆ ಎಷ್ಟೋ ಖಾಯಿಲೆಗಳಿಗೆ ಮದ್ದು ಎನ್ನುವ ಮಾತು ಇದೆ. ನಾವು ದೈಹಿಕವಾಗಿ ಮಾನಸಿಕವಾಗಿ ಎಷ್ಟೇ ಬಳಲಿದ್ದರೂ ಚುಟುಕು ನಿದ್ದೆ ನಮ್ಮಲ್ಲಿ ಹೊಸತನ ಮೂಡಿಸುತ್ತೆ. ನಾವು ನಿದ್ದೆ ಮಾಡಲು ಕೊಡುವ ಮಹತ್ವ ಬೆಡ್ ರೂಮಿಗೂ ನೀಡುವುದು ಅಗತ್ಯ. ಹಾಗಾದರೆ ನಿಮ್ಮ ಬೆಡ್ ರೂಂ ಹೇಗಿರಬೇಕು ? ನಿಮ್ಮ ನಿದ್ರಾಕೋನೆಗೆ ಹೊಸತನ ನೀಡುವುದು ಹೇಗೆ ? ಇಲ್ಲಿವೆ ನೋಡಿ ಕೆಲವೊಂದು ಟಿಪ್ಸ್.
1 ) ಬೆಡ್ ಶೀಟ್ ಬದಲಿಸುತ್ತೀರಿ :
ದೀರ್ಘಕಾಲದಿಂದ ಬಳಸುತ್ತಿರುವ ಬೆಡ್ ಶೀಟ್ ಹಾಗೂ ತಲೆದಿಂಬುಗಳ ಕವರ್ ಗಳನ್ನು ವಾರಕ್ಕೆ ಒಂದು ಸಲವಾದರೂ ಬದಲಿಸುತ್ತಿರಬೇಕು. ಶುಭ್ರವಾದ ಹಾಗೂ ವಿವಿಧ ಬಣ್ಣಗಳ ಬೆಡ್ ಶೀಟ್ ಉಪಯೋಗಿಸಬೇಕು.
2) ಪೇಂಟಿಂಗ್ :
ಬೆಡ್ ರೂಂ ಗೋಡೆಗಳು ಬರಿದಾಗಿದ್ದರೆ ಅಂದವೆನಿಸುವುದಿಲ್ಲ. ಚೆಂದನೆಯ ಪೇಂಟಿಂಗ್ಸ್ ಹಾಗೂ ನುಡಿಮುತ್ತುಗಳ ಬರಹಗಳು ಗೋಡೆ ಮೇಲೆ ನೇತಾಕಿ.
3) ಬೆಡ್ ಲ್ಯಾಂಪ್ :
ನಾವು ಮಲಗುವ ಕೋನೆಯಲ್ಲಿ ಮಂದ ಬೆಳಕಿನ ಚಿಕ್ಕ ಲ್ಯಾಂಪ್ ಇರುವುದು ಉತ್ತಮ. ರಾತ್ರಿ ಹೊತ್ತು ಕಲರ್ ಲೈಟ್ ಗಳ ಬೆಡ್ ಲ್ಯಾಂಪ್ ಬೆಳಗಿಸುವುದು ನಿಮ್ಮ ರೂಮಿಗೆ ಆಕರ್ಷಕ ಲುಕ್ ಬರಬಹುದು.
4) ಮೆತ್ತನೆಯ ದಿಂಬು :
ಮನೆಯ ಹಾಲ್ ನಲ್ಲಿ ಸೋಫಾ ಮೇಲೆ ಮೆತ್ತನೆಯ ದಿಂಬು ಹಾಗೂ ಅದಕ್ಕೊಂದು ಸುಂದರವಾದ ಕವರ್ ಹಾಕಿರುತ್ತೇವೆ. ಅದೇ ರೀತಿಯ ದಿಂಬುಗಳನ್ನು ಬೆಡ್ ರೂಂಗಳಲ್ಲಿಯೂ ಬಳಸುವುದ ಉತ್ತಮ.
5) ಚೆಂದನೆಯ ಕನ್ನಡಿ :
ಬೆಡ್ ರೂಂನಲ್ಲಿ ಕನ್ನಡಿ ಇರದಿದ್ದರೆ ಅದಕ್ಕೊಂದು ಲುಕ್ ಬರಲಾರದು. ಬಟ್ಟೆ ಧರಿಸುವಾಗ ಹಾಗೂ ಮೇಕಪ್ ಮಾಡಿಕೊಳ್ಳಲು ಕನ್ನಡಿ ಬೇಕೇ ಬೇಕು. ಈಗಂತೂ ನಾನಾ ಬಗೆಯ ಕನ್ನಡಿಗಳು ದೊರೆಯುತ್ತವೆ. ನಿಮ್ಮ ಬೆಡ್ ರೂಮಿಗೆ ಸರಿಹೊಂದುವ ಒಂದನ್ನು ಗೋಡೆಗೆ ನೇತುಹಾಕಿ.
.