Advertisement

Padubidri; ಟಿಪ್ಪರ್‌ನ 98 ಸಾವಿರ ರೂ. ಮೌಲ್ಯದ ಟಯರ್‌ ಕಳವು

11:43 PM Feb 12, 2024 | Team Udayavani |

ಪಡುಬಿದ್ರಿ/ಕಾಪು: ಇಲ್ಲಿನ ಕಾಮತ್‌ ಪೆಟ್ರೋಲ್‌ ಬಂಕ್‌ ಬಳಿಯ ಸಾಕ್ಷತ್‌ ಶೆಟ್ಟಿ ಅವರ ಮನೆ ಬಳಿ ನಿಲ್ಲಿಸಿದ್ದ ಅವರ ಮಾಲಕತ್ವದ ಟಿಪ್ಪರ್‌ನಿಂದ ಫೆ. 11ರ ರಾತ್ರಿಯ ವೇಳೆ ಸುಮಾರು 98,000 ರೂ. ಮೌಲ್ಯದ 5 ಡಿಸ್ಕ್ ಸಹಿತ ಟಯರ್‌ ಹಾಗೂ ಬ್ಯಾಟರಿಯನ್ನು ಕದ್ದೊಯ್ದಿದ್ದಾರೆ.

Advertisement

ಕಳ್ಳತನಕ್ಕೆ ಮೊದಲು ಟಿಪ್ಪರನ್ನು ಪಡುಬಿದ್ರಿಯಿಂದ ಕಳವುಗೈದು ಪಾಂಗಾಳ ಸೇತುವೆ ಬಳಿ ನಿಲ್ಲಿಸಿ ಕೃತ್ಯವೆಸಗಿ ಕಳ್ಳರು ಪರಾರಿಯಾಗಿದ್ದಾರೆ. ಮೊಬೈಲ್‌ ಜಿಪಿಎಸ್‌ ಮೂಲಕ ಟಿಪ್ಪರ್‌ ಪತ್ತೆ ಹಚ್ಚಲಾಗಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸ್ಟೆಪ್ನಿ ಟಯರ್‌ ಸಹಿತ ಐದು ಡಿಸ್ಕ್, ಟಯರ್‌ಗಳು ಕಳವಾಗಿರುವುದು ಗೊತ್ತಾಗಿದೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next