Advertisement

ಫೇಕ್‌ ನ್ಯೂಸ್‌ ತಡೆಗೆ ವಾಟ್ಸ್‌ಆ್ಯಪ್‌ನಿಂದ ಟಿಪ್‌ಲೈನ್‌

12:58 AM Apr 03, 2019 | Team Udayavani |

ಹೊಸದಿಲ್ಲಿ: ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಟ್ಟಿರುವ ವಾಟ್ಸ್‌ ಆ್ಯಪ್‌ ಇದಕ್ಕಾಗಿಯೇ “ಟಿಪ್‌ಲೈನ್‌’ ಎಂಬ ಹೊಸ ಫೀಚರ್‌ ಪರಿಚಯಿಸಿದೆ.

Advertisement

ಈ ಫೀಚರ್‌ ಮೂಲಕ ವಾಟ್ಸ್‌ಆ್ಯಪ್‌ಗೆ ಬರುವಂಥ ಸಂದೇಶಗಳ ಸತ್ಯಾಸತ್ಯತೆ ತಿಳಿಯಬಹುದಾಗಿದೆ. ವಾಟ್ಸ್‌ಆéಪ್‌ನ ಚೆಕ್‌ ಪಾಯಿಂಟ್‌ “ಟಿಪ್‌ಲೈನ್‌’ ಮಂಗಳವಾರದಿಂಲೇ ಜಾರಿಗೆ ಬಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ಮೊಬೈಲ್‌, ಸಾಮಾ ಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಅಬ್ಬರ ತೀವ್ರ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಥ ಫೇಕ್‌ನೂÂಸ್‌ಗಳ ತಡೆಗೆ ವಾಟ್ಸ್‌ಆ್ಯಪ್‌ ಈ ಅಸ್ತ್ರವನ್ನು ಪ್ರಯೋಗಿಸಿದೆ.

ಭಾರತ ಮೂಲದ “ಪ್ರೋಟೋ’ ಎಂಬ ಮೀಡಿಯಾ ಸ್ಕಿಲ್ಲಿಂಗ್‌ ಸ್ಟಾರ್ಟಪ್‌ ಇದನ್ನು ಅಭಿವೃದ್ಧಿಪಡಿಸಿದೆ. ಸುಳ್ಳು ಸುದ್ದಿಗಳು ಮತ್ತು ವದಂತಿಗಳ ಡೇಟಾಬೇಸ್‌ ಅನ್ನು ರೂಪಿಸಿ, ಅದರ ಸತ್ಯಾಸತ್ಯತೆ ಬಗ್ಗೆ ಅಧ್ಯಯನ ನಡೆಸುವುದು ಇದರ ಕೆಲಸ. ಇದಕ್ಕೆ ವಾಟ್ಸ್‌ಆ್ಯಪ್‌ ತಾಂತ್ರಿಕ ಸಹಾಯವನ್ನು ಒದಗಿಸಿದೆ.

4 ಪ್ರಾದೇಶಿಕ ಭಾಷೆಗಳು
ಸತ್ಯಾಸತ್ಯತೆ ಅರಿಯಲು ನೀವು ಕಳುಹಿಸುವಂಥ ಸಂದೇಶವು ಟೆಕ್ಸ್ಟ್, ಚಿತ್ರಗಳು, ವೀಡಿಯೋ ಲಿಂಕ್‌ ಹೀಗೆ ಯಾವುದೇ ರೂಪದಲ್ಲಿದ್ದರೂ ಅದನ್ನು ಪರಿಶೀಲಿಸ ಲಾಗುತ್ತದೆ. ಸದ್ಯಕ್ಕೆ ಇಂಗ್ಲಿಷ್‌ ಹಾಗೂ ನಾಲ್ಕು ಪ್ರಾದೇಶಿಕ ಭಾಷೆಗಳಾದ ಹಿಂದಿ, ತೆಲುಗು, ಬಂಗಾಲಿ ಮತ್ತು ಮಲಯಾಳದಲ್ಲಿರುವ ಸಂದೇಶಗಳ ಸತ್ಯಾಸತ್ಯತೆ ಮಾತ್ರ ಅರಿಯಲು ಸಾಧ್ಯ.

20 ಕೋಟಿ ಬಳಕೆದಾರರು
ಭಾರತದಲ್ಲಿ ಸರಿಸುಮಾರು 20 ಕೋಟಿ ವಾಟ್ಸ್‌ ಆéಪ್‌ ಬಳಕೆದಾರರಿದ್ದಾರೆ. ಇತ್ತೀಚಿನ ದಿನ ಗಳಲ್ಲಿ ವಾಟ್ಸ್‌ ಆ್ಯಪ್‌ ವಿರುದ್ಧ ಕೇಂದ್ರ ಸರಕಾರ ತಿರುಗಿ ಬಿದ್ದಿತ್ತು. ಇದಕ್ಕೆ ಕಾರಣ, ಕೆಲವು ಸುಳ್ಳು ಸುದ್ದಿಗಳ ಹರಿ ದಾಡುವಿಕೆ ಯಿಂದಾಗಿ ಕೋಮು ಘರ್ಷಣೆಯಂಥ ಘಟನೆಗಳು ನಡೆದಿರುವುದು.

Advertisement

ನೀವೇನು ಮಾಡಬೇಕು?
ನಿಮ್ಮ ಮೊಬೈಲ್‌ಗೆ ಬಂದ ಸಂದೇಶಗಳ ಬಗ್ಗೆ ಅನುಮಾನ ವಿದ್ದರೆ ಕೂಡಲೇ ಅದನ್ನು ಚೆಕ್‌ಪಾಯಿಂಟ್‌ ಟಿಪ್‌ಲೈನ್‌ನ ವಾಟ್ಸ್‌ಆ್ಯಪ್‌ ಸಂಖ್ಯೆ +91-9643-000-888ಗೆ ಕಳುಹಿಸಬೇಕು. ಈ ಸಂದೇಶವನ್ನು ಸ್ವೀಕರಿಸಿದ ಕೂಡಲೇ ಪ್ರೋಟೋದ ದೃಢೀಕರಣ ಕೇಂದ್ರವು ಅದನ್ನು ಪರಿಶೀಲಿಸುತ್ತದೆ. ಅನಂತರ ಆ ಸಂದೇಶವು ಸುಳ್ಳು ಸುದ್ದಿಯೋ, ಸತ್ಯ ಮಾಹಿತಿಯೋ ಎಂಬುದನ್ನು ತಿಳಿಸುತ್ತದೆ. ಈ ಕೇಂದ್ರವು ನೀಡುವ ಪ್ರತಿಕ್ರಿಯೆಯಲ್ಲಿ ನೀವು ಕಳುಹಿಸಿರುವ ಸುದ್ದಿಯನ್ನು “ಸತ್ಯ, ಸುಳ್ಳು, ದಾರಿ ತಪ್ಪಿಸುವಂಥದ್ದು, ವಿವಾದಿತ’ ಎಂದು ನಮೂದಿಸಲಾಗಿರುತ್ತದೆ. ಜತೆಗೆ ಅದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಗಳನ್ನೂ ಒದಗಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next