ಮುಂಬೈ: ಬಹುನಿರೀಕ್ಷಿತ ಏಷ್ಯಾ ಕಪ್ ಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಆಗಸ್ಟ್ 30ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಈ ಬಾರಿ ಕೂಟ ನಡೆಯಲಿದೆ. ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ.
19 ದಿನಗಳ ಕಾಲ ನಡೆಯುವ ಏಷ್ಯಾ ಕಪ್ ನಲ್ಲಿ ಆರು ತಂಡಗಳು ಭಾಗವಹಿಸಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಏಷ್ಯಾಕಪ್ ಆಡಲಿದೆ. ಎರಡು ಹಂತದಲ್ಲಿ ಕೂಟ ನಡೆಯಲಿದ್ದು, ಗ್ರೂಪ್ ಹಂತ ಮತ್ತು ಸೂಪರ್ ಫೋರ್ ಮಾದರಿಯಲ್ಲಿ ಇರಲಿದೆ.
ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಂದ್ಯಗಳ ಆರಂಭದ ಸಮಯವನ್ನು ನಿಗದಿ ಮಾಡಿದೆ. ಪ್ರತಿ ಪಂದ್ಯವು ಸಂಜೆ 3 ಗಂಟೆಗೆ ಆರಂಭವಾಗಲಿದೆ.
ಇದನ್ನೂ ಓದಿ:Jailer: ರಜಿನಿ – ಶಿವಣ್ಣ ಮುಖಾಮುಖಿ.. ʼಜೈಲರ್ʼ ಹೊಸ ಪೋಸ್ಟರ್ ವೈರಲ್
ಏಷ್ಯಾ ಕಪ್ ಎರಡು ದೇಶಗಳಲ್ಲಿ ಮತ್ತು ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ಟೂರ್ನಿಯ ಆರಂಭಿಕ ಪಂದ್ಯವು ಮುಲ್ತಾನ್ ನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಶ್ರೀಲಂಕಾ ಕ್ಯಾಂಡಿ ಮತ್ತು ಕೊಲಂಬೊದಲ್ಲಿ ಒಟ್ಟು 9 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಪಾಕಿಸ್ತಾನವು ಮುಲ್ತಾನ್ ಮತ್ತು ಲಾಹೋರ್ ನಲ್ಲಿ 4 ಪಂದ್ಯಗಳನ್ನು ಆಯೋಜಿಸಲಿದೆ.
ಭಾರತವು ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಇದು ಸಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ನಡೆಯಲಿದೆ. ನೇಪಾಳದ ವಿರುದ್ಧದ ಪಂದ್ಯವು ಸಪ್ಟೆಂಬರ್ 4ರಂದು ಕ್ಯಾಂಡಿಯಲ್ಲಿ ನಡೆಯಲಿದೆ.