Advertisement

“ಟೈಮಿಂಗ್‌ ಪಾಲಿಸುತ್ತಿಲ್ಲ: ಖಾಸಗಿ ಬಸ್‌ ಮಾಲಕರು’

02:29 PM Jun 08, 2017 | Team Udayavani |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಪರ್ಮಿಟ್‌ ಪಡೆದು ವಿವಿಧ ಭಾಗದಲ್ಲಿ ಸಂಚರಿಸುತ್ತಿರುವ ಸರಕಾರಿ ಬಸ್‌ಗಳು ತಮಗೆ ನೀಡಿರುವ ಟೈಮಿಂಗ್‌ ಪ್ರಕಾರ ಬಸ್‌ಗಳನ್ನು ಓಡಿಸುತ್ತಿಲ್ಲ ಎಂದು ಖಾಸಗಿ ಬಸ್‌ ಮಾಲಕರು ಬುಧವಾರ ಮಣಿಪಾಲ ಜಿಲ್ಲಾಡಳಿತಗಳ ಸಂಕೀರ್ಣದ ಸಭಾಂಗಣದಲ್ಲಿ ನಡೆದ ಆರ್‌ಟಿಎ ಸಭೆಯಲ್ಲಿ ಆರೋಪಿಸಿದರು. ಇದಕ್ಕೆ
ಪ್ರತಿಯಾಗಿ ಮಾತನಾಡಿದ ಕೆಎಸ್ಸಾರ್ಟಿಸಿ ಅಧಿಕಾರಿ, ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಸರಕಾರಿ ಬಸ್‌ಗಳು ನಿಗದಿತ ಸಮಯದಲ್ಲಿ ಸಂಚರಿಸುತ್ತಿಲ್ಲ. ಹಾಗೆಯೇ ಟ್ರಿಪ್‌ ಕಡಿತ, ಸರಕಾರಿ ಬಸ್‌ ನಿಲ್ದಾಣಗಳಿಗೆ ಬಸ್‌ಗಳು ತೆರಳದಿರುವ ಬಗ್ಗೆ ದೂರು ಬಸ್‌ ಮಾಲಕರಿಂದ ಕೇಳಿ ಬಂದಿತು. ಬಸ್‌ ಮಾಲಕರ ಸಂಘದ ಕುಯಿಲಾಡಿ ಸುರೇಶ್‌ ನಾಯಕ್‌, ಬಸ್‌ ಮಾಲಕರಾದ ರಾಧಾದಾಸ್‌, ಸಂಜೀವ ಶೆಟ್ಟಿ, ರಮೇಶ್‌ ರಾವ್‌, ವಾಸುದೇವ, ಸುಧಾಕರ ಶೆಟ್ಟಿ, ಸುಧಾಕರ ಕಲ್ಮಾಡಿ,  ಬಳಕೆದಾರರ ವೇದಿಕೆಯ ದಾಮೋದರ ಐತಾಳ್‌ ಮೊದಲಾದವರು ಮಾತನಾಡಿದರು. ಪ್ರಯಾಣಿಕರ ಪರವಾಗಿ ಯಾವುದೇ ದನಿ ಸಭೆಯಲ್ಲಿ ಕೇಳಿಸಲಿಲ್ಲ.

“ನಿಯಮ ಉಲ್ಲಂ ಸಬೇಡಿ: ಡಿಸಿ’
ಸಮಯಕ್ಕೆ ಸರಿಯಾಗಿ ಸರಕಾರಿ ಬಸ್‌ಗಳನ್ನು ಓಡಿಸಲು ಆಯಾ ಬಸ್‌ಗಳ ಚಾಲಕ, ನಿರ್ವಾಹಕರಿಗೆ ಸೂಚಿಸುವಂತೆ, ತಪ್ಪಿದಲ್ಲಿ ಕ್ರಮಕೈಗೊಳ್ಳುವಂತೆ ಸರಕಾರಿ ಬಸ್‌ನ ವಿಭಾಗ ಸಂಚಾರ ಅಧಿಕಾರಿಗಳಿಗೆ ಸಭೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಸೂಚಿಸಿದರು. ಖಾಸಗಿ ಹಾಗೂ ಸರಕಾರಿ ಬಸ್‌ಗಳ ಟೈಮಿಂಗ್‌ ಒಂದೇ ಆಗಿದ್ದರೆ ಹೊಂದಾಣಿಕೆ ಮಾಡಿಕೊಂಡು ಹೋಗಿ. ಮಾತುಕತೆಗೆ ಇಳಿಯಬಾರದು. ಸರಕಾರಿ ಬಸ್‌ಗಳಿಗೆ ವಿಶೇಷ
ರಿಯಾಯಿತಿ ಕೊಟ್ಟಿಲ್ಲ. ನಿಗದಿತ ಅವಧಿಯಲ್ಲಿ ಅದೇ ಮಾರ್ಗದಲ್ಲಿ ಸರಕಾರಿ ಬಸ್‌ಗಳು ಕೂಡ ಸಂಚರಿಸಬೇಕು. ನಿಯಮಗಳ ಉಲ್ಲಂಘನೆ ಮಾಡಬಾರದು. ಈ ಕುರಿತು ಸರಕಾರಿ ಬಸ್‌ಗಳ ಚಾಲಕ, ನಿರ್ವಾಹಕರಿಗೆ ಸೂಚನೆ ನೀಡುವಂತೆ ಮಂಗಳೂರು ವಿಭಾಗದ ಸಂಚಾರ ಅಧಿಕಾರಿಗೆ ಡಿಸಿ ಸೂಚಿಸಿದರು.

“ಚಾಲಕ/ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ’
ಮಂಗಳೂರು ವಿಭಾಗದ ಸಂಚಾರ ಅಧಿಕಾರಿ ಜೈಶಾಂತ ಕುಮಾರ್‌ ಮಾತನಾಡಿ, ಸರಕಾರಿ ಬಸ್‌ಗಳು ಸಮಯ ಪಾಲನೆ ಮತ್ತು ನಿಗದಿತ ಮಾರ್ಗದಲ್ಲಿ ಸಂಚರಿಸದ ಕುರಿತು ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿಲ್ಲವಾ
ದರೂ ನಿಯಮ ಪಾಲನೆ ಮಾಡುವಂತೆ ಘಟಕದ ಎಲ್ಲ ಚಾಲಕ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಮಲ್ಪೆಯಲ್ಲಿ ಟ್ರಿಪ್‌ ಕಟ್‌ ಮಾಡಿದ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಸರಕಾರಿ ಬಸ್‌ ಸಂಚಾರ ಆರಂಭಗೊಂಡಿದ್ದು, ಪ್ರಾರಂಭದಲ್ಲಿ ಕೆಲವು ಕಡೆ ಗೊಂದಲವಾಗಿದೆ. ಒಂದು ವಾರದಲ್ಲಿ ಇದನ್ನು ಸರಿಪಡಿಸಲಾಗುವುದು ಎಂದರು.

“ಅನಧಿಕೃತ ಸಂಚಾರ-ಕ್ರಮ’
ಕುಂದಾಪುರ-ಭಟ್ಕಳ ಮಾರ್ಗವಾಗಿ ಅನಧಿಕೃತವಾಗಿ ಖಾಸಗಿ ಬಸ್‌ಗಳ ಸಂಚಾರದ ಕುರಿತು ದೂರು ಬಂದಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಂಚಾರ ಅಧಿಕಾರಿ ಜೈಶಾಂತ ಕುಮಾರ್‌ ಹೇಳಿದರು.

Advertisement

ಘಾಟಿಯಲ್ಲಿ ಕಾಂಪಿಟೀಶನ್‌…!
ಆಗುಂಬೆ ಘಾಟಿಯಲ್ಲಿ ಬಸ್‌ಗಳು ಪೈಪೋಟಿಯಿಂದ ಚಲಿಸುವುದರಿಂದ ಪ್ರಯಾಣಿಕರು ಗಾಬರಿಗೊಳ್ಳುವ ಸ್ಥಿತಿ ಇದೆ. ಸುರಕ್ಷೆ ದೃಷ್ಟಿಯಿಂದ ಪೈಪೋಟಿ ತಡೆಯುವಂತೆ ಶೃಂಗೇರಿಯ ಲಕ್ಷಿ ¾ ನಾರಾಯಣ ಭಟ್‌ ಮನವಿ ಮಾಡಿದರು.

“ರಸ್ತೆ ಬದಿ ನಿಲ್ಲಿಸದಂತೆ ಸೂಚನೆ’
ಮಣಿಪಾಲ-ಉಡುಪಿ ಮಧ್ಯೆ ರಾತ್ರಿ ವೇಳೆ ರಸ್ತೆ ಬದಿ ಅಲ್ಲಲ್ಲಿ ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಆಯಿಲನ್ನು
ರಸ್ತೆಗೆ ಚೆಲ್ಲುವುದು, ಬಸ್‌ ತೊಳೆಯುವುದರಿಂದ ಸಮಸ್ಯೆಯಾಗುತ್ತಿರುವ ಕುರಿತು ಎಚ್ಚರಿಸಿದ ಆರ್‌ಟಿಒ ಗುರುಮೂರ್ತಿ ಕುಲಕರ್ಣಿ ಅವರು ಇನ್ನು ಮುಂದಕ್ಕೆ ಯಾರು ಕೂಡ ರಸ್ತೆ ಬದಿ ಬಸ್‌ ನಿಲ್ಲಿಸದಂತೆ ಸೂಚಿಸಿದರು. ಈ ಸಮಸ್ಯೆ ಕುರಿತು “ಉದಯವಾಣಿ’ ಈ ಹಿಂದೆಯೇ ವಿಶೇಷ ವರದಿ ಪ್ರಕಟಿಸಿತ್ತು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎನ್‌. ವಿಷ್ಣುವರ್ಧನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next