Advertisement
ಸುಳ್ಯದಲ್ಲಿನ ಕೃಷಿಕರೊಬ್ಬರು ತಾಲೂಕು ಆಸ್ಪತ್ರೆಗೆ ಎದೆನೋವೆಂದು ಧಾವಿಸಿ ಬಂದರು. ಅವರ ಇಸಿಜಿ ನಡೆಸಿ, ಹೃದಯ ಸಮಸ್ಯೆ ಅರಿತು ಅವರಿಗೂ ಇಂಜೆಕ್ಷನ್ ನೀಡಲಾಯಿತು. ಸುಮಾರು 1.5 ಗಂಟೆಯಲ್ಲಿ ಚೇತರಿಸಿಕೊಂಡ ಬಳಿಕ ಅವರನ್ನೂ ಹಬ್ ಆಸ್ಪತ್ರೆಗೆ ಕಳುಹಿಸಲಾಯಿತು. ಇವರಿಬ್ಬರೂ ಈಗ ಆರೋಗ್ಯವಾಗಿದ್ದಾರೆ.
Related Articles
Advertisement
ಹಬ್ ಮತ್ತು ಸ್ಪೋಕ್ ಮಾದರಿಚಕ್ರದ ಕಡ್ಡಿ ಮತ್ತು ಕೇಂದ್ರ (ಹಬ್ ಮತ್ತು ಸ್ಪೋಕ್) ಮಾದರಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, ಬೆಂಗಳೂರು ಮುಖ್ಯ ಹಬ್ ಕೇಂದ್ರ. ಪ್ರತಿ ಜಿಲ್ಲೆಯಲ್ಲಿ ತಾಲೂಕು ಆಸ್ಪತ್ರೆಗಳನ್ನುಸ್ಪೋಕ್ ಆಗಿ ಹಾಗೂ ಒಂದು ಖಾಸಗಿ ಸುಸಜ್ಜಿತ ಆಸ್ಪತ್ರೆಯನ್ನು ಜಿಲ್ಲಾ ಹಬ್ ಆಗಿ ಮಾಡಲಾಗಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಯೇನಪೊಯ ಆಸ್ಪತ್ರೆ ಮತ್ತು ಉಡುಪಿ ಜಿಲ್ಲೆಗೆ ಮಣಿಪಾಲ ಕೆಎಂಸಿ ಹಬ್ ಆಸ್ಪತ್ರೆಗಳು. ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಜೀವ ರಕ್ಷಣ ಪ್ರಕ್ರಿಯೆ ಬಳಿಕ ಅವರನ್ನು ಹಬ್ ಆಸ್ಪತ್ರೆಗಳಿಗೆ ಮುಂದಿನ ಚಿಕಿತ್ಸೆಗೆ ಕೊಂಡೊಯ್ಯಲಾಗುತ್ತದೆ. ಉಳಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ ವ್ಯವಸ್ಥೆ ಇದೆ. ಪ್ರಕರಣದ ಗಂಭೀರತೆ ಪರಿಗಣಿಸಿ ರೋಗಿಗಳನ್ನು ತಾಲೂಕು ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆಯೊಂದಿಗೆ ತೀರಾ ಅಪಾಯಕಾರಿ ಸ್ಥಿತಿಯಲ್ಲಿರುವ ರೋಗಿಗಳಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ಸಕಾಲಕ್ಕೆ ಸಿಗುವುದು ಒಂದೆಡೆ ಅನುಕೂಲವಾಗಿದ್ದರೆ, ಮತ್ತೂಂದೆಡೆೆ ಈ ಯೋಜನೆಯಡಿ ತತ್ಕ್ಷಣ ಜೀವ ಉಳಿಸಲು ನೀಡುವ ಒಂದು ಇಂಜೆಕ್ಷನ್. ಇದರ ಬೆಲೆ 28 ಸಾವಿರ ರೂ. ಗಳಿಂದ 40 ಸಾವಿರ ರೂ. ಗಳವರೆಗೆ ಇದ್ದು, ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ರೋಗಿಗಳು ಚೇತರಿಸಿಕೊಳ್ಳುತ್ತಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ಮಂದಿಗೆ ಈ ಇಂಜೆಕ್ಷನ್ ನೀಡಿದ್ದು, (ಬೆಳ್ತಂಗಡಿ ಹಾಗೂ ಬಂಟ್ವಾಳ ತಲಾ 1, ಬಂಟ್ವಾಳ-7, ಸುಳ್ಯ-10). ಉಡುಪಿಯಲ್ಲಿ 2 ಮಂದಿಗೆ ನೀಡಲಾಗಿದೆ(ಕಾರ್ಕಳ-1, ಕುಂದಾಪುರ-1). ಪುನೀತ್ ಹೃದಯ ಜ್ಯೋತಿ ಯೋಜನೆಯಿಂದ ಹೃದಯಾಘಾತ ಆಗುವಂತಹವರ ಜೀವ ಉಳಿಸಲು ಹೆಚ್ಚು ಅವಕಾಶ ಸಿಕ್ಕಿದಂತಾಗಿದೆ, ಗೋಲ್ಡನ್ ಅವರ್ ಅವಧಿಯಲ್ಲಿ ಅವರಿಗೆ ಅತ್ಯಗತ್ಯ ಚಿಕಿತ್ಸೆ, ಇಂಜೆಕ್ಷನ್ ನೀಡಿ ಮನೆಯ ಜ್ಯೋತಿ ಆರದಂತೆ ತಡೆಯಬಹುದಾಗಿದೆ.
-ಡಾ|ಎಚ್.ಆರ್.ತಿಮ್ಮಯ್ಯ/ಡಾ| ಐ.ಪಿ.ಗಡಾದ್
(ಜಿಲ್ಲಾ ಆರೋಗ್ಯಾಧಿಕಾರಿಗಳು ಮಂಗಳೂರು/ಉಡುಪಿ) -ವೇಣುವಿನೋದ್ ಕೆ.ಎಸ್