Advertisement
ಎಪ್ರಿಲ್-ಮೇನಲ್ಲಿ ಮದುವೆ ಇತ್ಯಾದಿ ಶುಭ ಸಮಾರಂಭಗಳು ಹೆಚ್ಚು ನಡೆಯುವ ಕಾಲ. ಬಹಳಷ್ಟು ಅನಾನಸು ಈ ಕಾರ್ಯಕ್ರಮಗಳಲ್ಲಿ ಅನಾನಸ್‌ಗಳಿಗೆ ತಂಪು ಪಾನೀಯಕ್ಕೆ ಬಳಸಲಾಗುತ್ತಿತ್ತು. ಇದಲ್ಲದೆ ಹೊಟೆಲ್‌ಗಳಲ್ಲಿ ಜ್ಯೂಸ್‌ಗೆ ಬಹಳಷ್ಟು ಬೇಡಿಕೆ ಇರುತ್ತಿತ್ತು. ಒಂದಿಷ್ಟು ಪ್ರಮಾಣ ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತಿತ್ತು. ಕೊರೊನಾ ಕಾರಣದಿಂದ ಅದಕ್ಕೂ ಅವಕಾಶವಿಲ್ಲವಾಗಿದೆ.ಈ ಸಂದರ್ಭದಲ್ಲಿ ಕೃಷಿ ಪರಿಣಿತರು ಹೇಳುವ ಪ್ರಕಾರ, ಕೃಷಿ ಉತ್ಪನ್ನವನ್ನು ಮೌಲ್ಯವರ್ಧನೆಗೊಳಿಸುವುದೇ ಸೂಕ್ತ. ಅದೇ ಹೆಚ್ಚು ಲಾಭದಾಯಕ ಎನ್ನುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ಯಿಂದಲೂ ತಪ್ಪಿಸಿಕೊಳ್ಳಲು ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯೆ ಪರಿಹಾರ ಎನ್ನುತ್ತಾರೆ ಕೃಷಿ ಪರಿಣಿತರು.
ದೊಡ್ಡ ಪ್ರಮಾಣದಲ್ಲಿ ಅನಾನಾಸು ಬೆಳೆದಿದ್ದು ನೇರವಾಗಿ ಮಾರಾಟ ಆಗದಿದ್ದಾಗ ಪಲ್ಪ್ ತಯಾರಿ ಉತ್ತಮ ಮಾರ್ಗ. ಉತ್ತಮ ಗುಣಮಟ್ಟದ ಹಣ್ಣುಗಳನ್ನು ಆರಿಸಿ ಬಿಸಿ ನೀರಿನಲ್ಲಿ ತೊಳೆಯಬೇಕು. ಸಿಪ್ಪೆ ತೆಗೆದು ತಿರುಳು ಬೇರ್ಪಡಿಸಬೇಕು. ಅನಂತರ ಗೆùಂಡರ್‌ನಂತಹ ಸಾಧನದಲ್ಲಿ ಅರೆದು ರಸವನ್ನು ಬೇರ್ಪಡಿಸಬೇಕು. ಡ್ರಮ್‌ನಂತಹ ಸಂಗ್ರಹ ಯೋಗ್ಯ ಸಾಧನದಲ್ಲಿ ಮುಕ್ಕಾಲು ಭಾಗದಷ್ಟು ತುಂಬಿಸಬೇಕು. ಅನಂತರ ಅದನ್ನು ನೀರು ತುಂಬಿದ ಇನ್ನೊಂದು ಪಾತ್ರೆಯೊಳಗಿರಿಸಿ 100 ಡಿಗ್ರಿ ಸೆಲಿÏಯಸ್‌ನಲ್ಲಿ ಕನಿಷ್ಠ 30 ನಿಮಿಷ ಕುದಿಸಬೇಕು.ಬಳಿಕ ಮುಚ್ಚಳವನ್ನು ಭದ್ರಗೊಳಿಸಿ ಗಾಳಿಯಾಡದಂತೆ ಸಂರಕ್ಷಿಸಿದರೆ ಕನಿಷ್ಠ 6 ತಿಂಗಳ ವರೆಗೆ ಸುರಕ್ಷಿತವಾಗಿಡ ಬಹುದು. ಇದನ್ನು ಯಾವುದೇ ಸಂದರ್ಭದಲ್ಲಿ ನೈಜ ಹಣ್ಣಿನಂತೆ ಜ್ಯೂಸ್ ಇನ್ನಿತರ ವಿಧಾನಕ್ಕೆ ಬಳಸಿ ಕೊಳ್ಳಬಹುದು. ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇರುತ್ತದೆ. ಆದರೆ ಪ್ರತಿ ಹಂತದಲ್ಲೂ ಸ್ವತ್ಛತೆಗೆ ಗಮನ ಹರಿಸುವುದು ಅತೀ ಅವಶ್ಯ ಎನ್ನುತ್ತಾರೆ ಕೃಷಿ ಪರಿಣಿತರು.
Related Articles
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.
Advertisement
ವಾಟ್ಸಪ್ ಸಂಖ್ಯೆ:76187 74529