Advertisement

ಉದ್ಯಮಶೀಲ ವ್ಯಕ್ತಿಯಲ್ಲಿ ಸಮಯಪ್ರಜ್ಞೆ ಅಗತ್ಯ

04:38 PM Sep 09, 2022 | Team Udayavani |

ಜೇವರ್ಗಿ: ಉದ್ಯಮಶೀಲ ವ್ಯಕ್ತಿಯಲ್ಲಿ ತಾಳ್ಮೆ ಸಮಯ ಪ್ರಜ್ಞೆ, ಉತ್ತಮ ನಾಯಕತ್ವ ಗುಣ ಲಕ್ಷಣ ಇರುವುದು ತುಂಬಾ ಅಗತ್ಯ ಎಂದು ರಾಯಚೂರು ಸಿಡಾಕ್‌ ಜಂಟಿ ನಿರ್ದೇಶಕ ಜಿ.ಯು.ಹುಡೇದ್‌ ಹೇಳಿದರು.

Advertisement

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್‌) ಕಲಬುರಗಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ನಿರುದ್ಯೋಗ ಹೋಗಲಾಡಿಸಲು ಎಲ್ಲರೂ ಪ್ರಯತ್ನಿಸಬೇಕು. ತರಬೇತಿಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು ಮತ್ತು ಸರ್ಕಾರದ ಸ್ವಂತ ಉದ್ಯೋಗದ ಯೋಜನೆಗಳು, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಉದ್ಯಮ ನಿರ್ವಹಣೆ ಹಾಗೂ ಉದ್ಯಮಕ್ಕೆ ಸಂಬಂಧಿ ಸಿದ ಬ್ಯಾಂಕಿನ ವ್ಯವಹಾರ, ಸರ್ಕಾರದ ವಿವಿಧ ಸಬ್ಸಿಡಿ ಯೋಜನೆಗಳ ಬಗ್ಗೆ ತರಬೇತಿ ನೀಡಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು. ಪದವಿ ಮುಗಿಸಿದ ನಂತರ ನೌಕರಿ ಸಿಗದೇ ಹೋದಲ್ಲಿ ತಮ್ಮದೇ ಆದ ಸ್ವ-ಉದ್ಯೋಗ ಕಲ್ಪಿಸಿಕೊಂಡು ಆರ್ಥಿಕವಾಗಿ ಮುಂದೇ ಬರಲು ಈ ತರಬೇತಿ ಅನುಕೂಲವಾಗಲಿದೆ ಎಂದು ಹೇಳಿದರು.

ನಂತರ ಉದ್ಯಮಶೀಲತಾ ತರಬೇತಿ ಪಡೆದ ಅಂತಿಮ ವರ್ಷದ 70 ಜನ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು. ಪ್ರಾಚಾರ್ಯ ಡಾ|ಲಕ್ಷ್ಮಣ ಭೋಸ್ಲೆ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಂತರಿಕ ಮೌಲ್ಯಮಾಪನಾ ಕೋಶದ ಮುಖ್ಯಸ್ಥ ಡಾ|ಕರಿಗೂಳೇಶ್ವರ, ನಿಯೋಜನೆ ಕೋಶ ಸಂಯೋಜಕ ಭೀಮಣ್ಣ, ಕಲಬುರಗಿ ಸಿಡಾಕ್‌ ತರಬೇತುದಾರ ಜಯಶ್ರೀ ಪಾಟೀಲ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next