Advertisement

ಮಳೆಗಾಲ ಗಿಡಗಳ ಆರೈಕೆಗೆ ಸಕಾಲ

10:59 PM Jun 21, 2019 | mahesh |

ಮಳೆಗಾಲ ಇನ್ನೇನು ಆರಂಭವಾಗುತ್ತಿದೆ. ಬಿಸಿಲಿನಿಂದ ಬಾಡಿ ಹೋಗಿರುವ ಗಿಡಗಳೆಲ್ಲ ಚಿಗುರಿ ಮತ್ತೆ ಹೂವರಳಿಸಿ ನಿಲ್ಲುವ ಸಮಯ. ಗಾರ್ಡನ್‌ ಪ್ರಿಯರಂತೂ ಈ ಸಮಯದಲ್ಲಿ ಹೂ ಗಿಡಗಳ ಹಿಂದೆಯೇ ಸುತ್ತುತ್ತಿರುತ್ತಾರೆ. ಆದರೆ ಮಳೆಗಾಲದಲ್ಲಿ ಗಿಡಗಳು ಬೆಳೆದಟ್ಟು ಹಾನಿಯಾಗುವ ಸಂಭವಗಳೂ ಅಧಿಕವಾಗಿರುತ್ತವೆ. ಅವುಗಳನ್ನು ಸಂರಕ್ಷಿಸಲು ಇಲ್ಲಿದೆ ಕೆಲವು ಸಿಂಪಲ್‌ ಟಿಪ್ಸ್‌ಗಳು.

Advertisement

ನೀರು ಹಾಕುವಾಗ ಗಮನಿಸಿ. ಹೆಚ್ಚಿನ ವೇಳೆಗಳಲ್ಲಿ ಹೂ ಗಿಡಗಳ ಬುಡದಲ್ಲಿ ಮಳೆ ನೀರಿರುತ್ತದೆ. ಅಗತ್ಯವಿದ್ದರೆ ಮಾತ್ರ ನೀರು ಹಾಕಿ. ಕಾಂಡ ಕೊಳೆಯುವ ಸಾಧ್ಯತೆಯಿರುತ್ತದೆ.

ಬುಡದಲ್ಲಿ ನೀರು ಕಟ್ಟಿನಿಲ್ಲದಂತೆ ನೋಡಿಕೊಳ್ಳಬೇಕು.

ಹುಳಗಳು ಗಿಡಗಳಲ್ಲಿವೆಯೇ ಎಂದು ದಿನನಿತ್ಯ ಪರೀಕ್ಷಿಸಿಕೊಳ್ಳಬೇಕು. ಹುಳಗಳಿದ್ದರೆ ಕೀಟನಾಶಕಗಳನ್ನು ಸಿಂಪಡಿಸಿ. (ಜೈವಿಕ ಕೀಟನಾಶಕವಾದರೆ ಉತ್ತಮ).

ಎರೆಹುಳಗಳು ಮಣ್ಣಲಿದ್ದರೆ ಉತ್ತಮ. ಅವುಗಳು ಮಣ್ಣು ನೀರನ್ನು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತವೆ.

Advertisement

ಕೀಟನಾಶಕಗಳನ್ನು ಅಗತ್ಯವಿದ್ದರೆ ಮಾತ್ರ ಹಾಕಬೇಕು. ಬೆಳಗ್ಗೆ 6 ರಿಂದ 11 ಗಂಟೆಯವರೆಗೆ ಸೂಕ್ತ ಸಮಯ.

ಓಪನ್‌ ಗಾರ್ಡನ್‌ ಅನ್ನು ಮಳೆಯಿಂದ ರಕ್ಷಿಸಲು ಪ್ಲಾಸ್ಟಿಕ್‌ ಕವರ್‌ ಅಥವಾ ಟರ್ಪಾಲ್‌ಗ‌ಳನ್ನು ಬಳಸಬೇಡಿ.
ಬದಲಾಗಿ ಪರ್‌ಫೋರ್ಟೆಡ್‌ ಷೀಟ್‌ಗಳನ್ನು ಬಳಸಿ. ಇದರಿಂದ ನೀರು ಹನಿಹನಿಯಾಗಿ ಗಿಡಗಳ ಮೇಲೆ ಬೀಳುತ್ತವೆ. ಇದು ಗಿಡಗಳಿಗೆ ಉತ್ತಮ ವಾಗಿರುತ್ತದೆ.

ಹೂದೋಟ ದಲ್ಲಿರುವ ಸಣ್ಣ ಗಿಡಗಳನ್ನು ಮಳೆಯಿಂದ ಆದಷ್ಟು ರಕ್ಷಿಸುವುದು ಅಗತ್ಯ.

ಗಿಡಗಳ ಕೊಂಬೆ ರೆಂಬೆಗಳು ಉದ್ದವಾಗಿ ಬೆಳೆದಿದ್ದರೆ ಅದನ್ನು ಕತ್ತರಿಸಬೇಕು. ಇದರಿಂದ ಅವುಗಳು ಮತ್ತೆ ಆರೋಗ್ಯವಾಗಿ ಬೆಳವಣಿಗೆ ಹೊಂದುವುದರ ಜತೆಗೆ ಹೂಗಳು ಬೇಗ ಚಿಗುರುತ್ತವೆ.

ಗಿಡಗಳು ಬೆಳೆದಂತೆ ಹೂದೋಟದಲ್ಲಿ ಅನಗತ್ಯವಾದ ಹುಲ್ಲುಗಳು ಬೆಳೆಯುತ್ತವೆ. ಅವುಗಳನ್ನು ಬುಡಸಮೇತ ಕಿತ್ತು ಹಾಕಿ. ಇಲ್ಲದಿದ್ದರೆ ಅವುಗಳು ಮತ್ತೆ ಬೆಳೆಯುವ ಸಾಧ್ಯತೆಗಳಿರುತ್ತವೆ.

ದೊಡ್ಡ ದೊಡ್ಡ ಮರಗಳು ಹೋದೋಟದ ಬದಿಯಲ್ಲಿದ್ದರೆ ಅವುಗಳ ರೆಂಬೆ ಮಳೆಗಾಲದ
ಆರಂಭದಲ್ಲೇ ಕತ್ತರಿಸಬೇಕು. ಇಲ್ಲದಿದ್ದರೆ ಗಿಡಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.

–  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next