Advertisement

ಭವಿಷ್ಯ ನಿರ್ಧರಿಸುವ ಸಮಯ : ಹೊಸಪೇಟೆಯಲ್ಲಿ ರಾಹುಲ್‌ ಗಾಂಧಿ 

03:50 PM Feb 10, 2018 | |

ಹೊಸಪೇಟೆ: ‘ಕರ್ನಾಟಕದ ಭವಿಷ್ಯ ನಿರ್ಧರಿಸುವ ಸಮಯ ಈಗ ಬಂದಿದ್ದು ಸತ್ಯದ ಪರವಾಗಿರುವ,ಹೇಳಿದ್ದನ್ನು ಮಾಡಿರುವ ಕಾಂಗ್ರೆಸ್‌ ಪಕ್ಷವನ್ನು ನೀವು ಚುನಾವಣೆಯಲ್ಲಿ ಬೆಂಬಲಿಸಿ ಕರ್ನಾಟಕದ ವಿಕಾಸಕ್ಕೆ ಕಾರಣವಾಗಬೇಕು’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ. 

Advertisement

ಹೊಸಪೇಟೆಯಲ್ಲಿ  ಶನಿವಾರ ನಡೆದ ಬೃಹತ್‌ “ಜನಾಶೀರ್ವಾದ’ ಯಾತ್ರೆಯಲ್ಲಿ ಎಲ್ಲರಿಗೂ ನಮಸ್ಕಾರ .. ಎಂದು ಭಾಷಣ ಆರಂಭಿಸಿದ ಅವರು ‘ಚುನಾವಣೆ ಹತ್ತಿರ ಬರುತ್ತಿದೆ ನಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ತಾವೆಲ್ಲರು ನಿರ್ಣಯ ಮಾಡಬೇಕು’ ಎಂದರು. 

‘ಯಾರ ಮೇಲೆ ಭರವಸೆ ಇಡುತ್ತೀರಿ, ನಿಮ್ಮ ಮುಂದೆ 2 ಪಕ್ಷಗಳಿದ್ದು ಒಂದು ಕಡೆ ಕಾಂಗ್ರೆಸ್‌, ನಾನು ಮತ್ತು ಸಿದ್ದರಾಮಯ್ಯ ಇದ್ದಾರೆ ಇನ್ನೊಂದು ಕಡೆ ಮೋದಿ ಮತ್ತು ಬಿಜೆಪಿ ಇದೆ. ಕಾಂಗ್ರೆಸ್‌ ಸತ್ಯದ ಪರವಾಗಿದೆ’ ಎಂದರು. 

371 ಎ ಕಲಂ ಜಾರಿಗೆ ತಂದಿದ್ದು ಕಾಂಗ್ರೆಸ್‌, ಇದರಿಂದಾಗಿ ಹೈದರಾಬಾದ್‌ ಕರ್ನಾಟಕಕ್ಕೆ  ದೊರಕುತ್ತಿದ್ದ 300 ರಿಂದ 400 ಕೋಟಿ ರೂಪಾಯಿ ಅನುದಾನ ಈಗ 4,000 ಕೋಟಿಗೆ ಏರಿಕೆಯಾಗಿದೆ. ಹಲವು ಲಾಭಗಳಾಗಿವೆ ಎಂದರು. 

ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಾರೆ. ಬಿಜೆಪಿ  ಬರೀ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ಅವರಿಗೆ ದಲಿತರು,ಬಡವರ ಬಗ್ಗೆ ಕಾಳಜಿ ಇಲ್ಲ ಎಂದರು. 

Advertisement

ರಾಫೆಲ್‌ ವಿಚಾರ ಪ್ರಶ್ನೆ 

ರಾಫೆಲ್‌ ಯುದ್ಧ ವಿಮಾನ ಖರೀದಿ ಕುರಿತು ಪ್ರಧಾನಿ ಮೋದಿ ಅವರಿಗೆ 3 ಪ್ರಶ್ನೆಗಳನ್ನು ಕೇಳಿದ ರಾಹುಲ್‌ ‘ಎಚ್‌ಎಎಲ್‌ಗೆ ನೀಡಿದ ಕಾಂಟ್ರಾಕ್ಟ್  ಹಿಂಪಡೆದು ನಿಮ್ಮ ಸ್ನೇಹಿತನಿಗೆ ಯಾಕೆ ನೀಡಿದಿರಿ? 2.ಹೊಸ ಕಾಂಟ್ರಾಕ್ಟ್‌ನಲ್ಲಿ ವಿಮಾನ ವನ್ನು ಖರೀದಿ ಮಾಡಿದ್ದೀರಿ  ಅದರ ಬೆಲೆ ಎಷ್ಟು ಸ್ಪಷ್ಟವಾಗಿ ಹೇಳಿ ? 3 .ಇಂತಹ ಪ್ರಮುಖ ತೀರ್ಮಾನ ಕೈಗೊಳ್ಳುವಾಗ ರಕ್ಷಣಾ ಮಂತ್ರಿಯ ಒಪ್ಪಿಗೆ ಪಡೆದಿದ್ದಾರಾ?’ ಎಂದು ಪ್ರಶ್ನಿಸಿದರು. 

‘ಮೋದಿ ಅವರಿಂದ ಬೆಂಗಳೂರು ಮತ್ತು ಕರ್ನಟಕದ ಭವಿಷ್ಯದ ಮೇಲೆ ಮಾರಕ ಪರಿಣಾಮ ಬೀರಿದೆ’ ಎಂದರು. 

‘ಬಳ್ಳಾರಿಯಲ್ಲಿ ನನ್ನ ತಾಯಿ ಸೋನಿಯಾ ಗಾಂಧಿ ಅವರಿಗೆ ಆಶೀರ್ವಾದ ನೀಡಿದ್ದೀರಿ . ಇಲ್ಲಿ ನೀವು ಯಾವಾಗ ಕರೆದರೂ ನಾನು ಬರಲು ಸಿದ್ದ ಇದ್ದೇನೆ’ ಎಂದರು. 

ರಾಹುಲ್‌ ಭಾಷಣ ದಿನೇಶ್‌ ಗುಂಡುರಾವ್‌ ಭಾಷಾಂತರ 
ರಾಹುಲ್‌ ಗಾಂಧಿ ಮಾಡಿದ ಭಾಷಣವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡು ರಾವ್‌ ಅವರು ಕನ್ನಡಕ್ಕೆ ಭಾಷಾಂತರಿಸಿದರು. 

ಸಿದ್ದರಾಮಯ್ಯ ಕಿಡಿ 
ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ತೀವ್ರವಾಗಿ ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next