Advertisement
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಅತ್ಯಧಿಕ 5 ಸಲ ಚಾಂಪಿಯನ್ ಆಗಿರಬಹುದು, ಆದರೆ ಅದು ಫೈನಲ್ ತಲುಪಿದ್ದು 6 ಸಲ ಮಾತ್ರ (ಶುಕ್ರವಾರದ ಫಲಿತಾಂಶ ಹೊರತುಪಡಿಸಿ). ಈ ಯಾದಿಯಲ್ಲಿ ಮುಂಬೈಗೆ ದ್ವಿತೀಯ ಸ್ಥಾನ. ಕೆಕೆಆರ್ ಮತ್ತು ಆರ್‌ಸಿಬಿ ತಲಾ 3 ಸಲ; ರಾಜಸ್ಥಾನ್, ಹೈದರಾಬಾದ್ ತಲಾ 2 ಸಲ; ಡೆಕ್ಕನ್, ಪಂಜಾಬ್, ಪುಣೆ, ಡೆಲ್ಲಿ ಮತ್ತು ಗುಜರಾತ್ ಒಮ್ಮೆ ಫೈನಲ್ ಕಂಡಿವೆ.
ಈ ಹತ್ತೂ ಫೈನಲ್‌ಗಳಲ್ಲಿ ಚೆನ್ನೈ ತಂಡವನ್ನು ಧೋನಿಯೇ ಮುನ್ನಡೆಸಿ ರುವುದು ಕೂಡ ಒಂದು ದಾಖಲೆಯೇ ಆಗಿದೆ. ಇನ್ನೂ ಒಂದು ಸ್ವಾರಸ್ಯವನ್ನು ಉಲ್ಲೇಖೀಸುವುದಾದರೆ, ಇದು ಧೋನಿ ಆಡಲಿರುವ 11ನೇ ಐಪಿಎಲ್ ಫೈನಲ್. ಇದು ಕೂಡ ಒಂದು ದಾಖಲೆ. 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಫೈನಲ್ ಪ್ರವೇಶಿಸಿದಾಗ ಧೋನಿ ಈ ತಂಡದ ಸದಸ್ಯರಾಗಿದ್ದರು. ನಾಯಕರಾಗಿದ್ದವರು ಸ್ಟೀವನ್ ಸ್ಮಿತ್. 2008ರಿಂದಲೇ ಪ್ರಭುತ್ವ
ಚೆನ್ನೈ 2008ರ ಚೊಚ್ಚಲ ಐಪಿಎಲ್ ನಿಂದಲೇ ತನ್ನ ಪ್ರಭುತ್ವವನ್ನು ಸಾಬೀ ತುಪಡಿಸುತ್ತ ಬಂದ ತಂಡ. ಅಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಫೈನಲ್ ಆಡಿದ ಧೋನಿ ಪಡೆಗೆ ಅದೃಷ್ಟ ಕೈಹಿಡಿದಿರಲಿಲ್ಲ. 3 ವಿಕೆಟ್‌ಗಳ ಸೋಲ ನುಭವಿಸಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ಚೆನ್ನೈ ಪ್ರಶಸ್ತಿ ಅಭಿಯಾನ ಆರಂಭ ವಾದದ್ದು 2010ರಲ್ಲಿ. ಅಂದು ಆತಿಥೇಯ ಮುಂಬೈ ಇಂಡಿಯನ್ಸ್‌ಗೆ 22 ರನ್ನುಗಳ ಸೋಲುಣಿಸಿದ ಹೆಗ್ಗಳಿಕೆ ಧೋನಿ ಪಡೆಯದ್ದಾಗಿತ್ತು. ಡಾ| ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡವೇ ಫೇವರಿಟ್ ಆಗಿತ್ತು. ಆದರೆ ಧೋನಿ ಪಡೆ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.
Related Articles
2011ರಲ್ಲೂ ಚೆನ್ನೈ ತಂಡವೇ ಟ್ರೋಫಿ ಎತ್ತಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ತಂಡವೆಂಬ ಹೆಗ್ಗಳಿಕೆಗೆ ಧೋನಿ ಪಡೆ ಪಾತ್ರವಾಯಿತು. ಅಂದು ತವರಿನಂಗಳದಲ್ಲೇ ಚೆನ್ನೈ ಪಡೆ ಆರ್‌ಸಿಬಿಯನ್ನು 58 ರನ್ನುಗಳಿಂದ ಬಗ್ಗುಬಡಿಯಿತು.
ಮುಂದಿನೆರಡು ವರ್ಷವೂ ಚೆನ್ನೈಗೆ ಫೈನಲ್ ಬಾಗಿಲು ತೆರೆಯಿತಾದರೂ ನಸೀಬು ಕೈಕೊಟ್ಟಿತು. 2012ರ ಚೆನ್ನೈ ಸಮರದಲ್ಲೇ ಕೆಕೆಆರ್ 5 ವಿಕೆಟ್‌ಗಳಿಂದ ಗೆದ್ದು ಮೊದಲ ಸಲ ಚಾಂಪಿಯನ್ ಎನಿಸಿಕೊಂಡಿತು. 2013ರ “ಈಡನ್ ಗಾರ್ಡನ್ಸ್’ ಮೇಲಾಟದಲ್ಲಿ ಮುಂಬೈಗೆ 23 ರನ್ನುಗಳಿಂದ ಶರಣಾಯಿತು. ಇದರೊಂದಿಗೆ ರೋಹಿತ್ ಪಡೆ ಪ್ರಶಸ್ತಿ ಖಾತೆ ತೆರೆದಿತ್ತು. ಆದರೆ ಐಪಿಎಲ್ ಚರಿತ್ರೆಯಲ್ಲಿ ಸತತ 4 ಫೈನಲ್ ಕಂಡ ಏಕೈಕ ತಂಡವೆಂಬುದು ಚೆನ್ನೈ ಪಾಲಿನ ದಾಖಲೆಯಾಗಿಯೇ ಉಳಿದಿದೆ.
Advertisement
ಒಂದು ರನ್ ಸೋಲುಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಫೈನಲ್‌ಗೆ ಲಗ್ಗೆ ಹಾಕಿದ್ದು 2018ರಲ್ಲಿ. ಅದು ಹೈದರಾಬಾದ್ ವಿರುದ್ಧ ವಾಂಖೇಡೆಯಲ್ಲಿ ನಡೆದ ಪಂದ್ಯ. ಚೆನ್ನೈ 8 ವಿಕೆಟ್‌ಗಳ ಅಮೋಘ ಜಯಭೇರಿಯೊಂದಿಗೆ 3ನೇ ಸಲ ಟ್ರೋಫಿ ಎತ್ತಿತ್ತು. 2019ರಲ್ಲಿ ಇದನ್ನು ಉಳಿಸಿಕೊಳ್ಳಲು ಮುಂಬೈ ಬಿಡಲಿಲ್ಲ. ಹೈದರಾಬಾದ್‌ನಲ್ಲಿ ಏರ್ಪಟ್ಟ ರೋಚಕ ಫೈನಲ್‌ನಲ್ಲಿ ರೋಹಿತ್ ಪಡೆ ಒಂದು ರನ್ನಿನ ನಂಬಲಾಗದ ಜಯ ಸಾಧಿಸಿತ್ತು.
ಸಿಎಸ್‌ಕೆಗೆ 9ನೇ ಸಲ ಫೈನಲ್ ದರ್ಶನವಾದದ್ದು 2021ರಲ್ಲಿ. ಅದು ದುಬಾೖಯಲ್ಲಿ ನಡೆದ ಮುಖಾಮುಖೀ. ಎದುರಾಳಿ ತಂಡ ಕೋಲ್ಕತಾ ನೈಟ್‌ರೈಡರ್. ಫಲಿತಾಂಶ, ಚೆನ್ನೈಗೆ 27 ರನ್ನುಗಳ ಗೆಲುವು. ಒಂದು ವರ್ಷದ ಬ್ರೇಕ್ ಬಳಿಕ ಚೆನ್ನೈಗೆ ಮತ್ತೂಮ್ಮೆ ಫೈನಲ್ ಟಿಕೆಟ್ ಲಭಿಸಿದೆ. ರವಿವಾರ ರಾತ್ರಿಯ ಕೌತುಕ ಮೇರೆ ಮೀರಿದೆ.