Advertisement

ಇರಪ್ಪು ಜಲಪಾತಕ್ಕೆ ಹೋಗಲು ಟೈಮ್‌ ಫಿಕ್ಸ್‌ ಮಾಡಿ!

08:53 PM Aug 30, 2020 | Karthik A |

ಪ್ರವಾಸ ಎಂದ ಕೂಡಲೇ ಎಲ್ಲಿಗೆ ತೆರಳಬೇಕು ಎಂಬುದು ಪ್ರಶ್ನಾರ್ಥಕವಾಗಿ ಉಳಿಯುತ್ತದೆ.

Advertisement

ಅಂತವರಲ್ಲಿ ಕೆಲವರಿಗೆ ಹೊಸ ಹೊಸ ಸ್ಥಳಗಳನ್ನು ನೋಡಬೇಕು ಕುಟುಂಬದ ಜತೆಯಲ್ಲಿ ಕಾಣಬೇಕು ಎಂಬ ಹಂಬಲವಿರುತ್ತದೆ ಅಂತವರು ಪ್ರವಾಸಕ್ಕೆ ಹೋಗಬೇಕೆಂದು ಬಯಸಿದಲ್ಲಿ ಇರಪ್ಪು ಜಲಪಾತಕ್ಕೆ ತೆರಳಬಹುದು.

ಸ್ಥಳೀಯವಾಗಿ ಲಕ್ಷಣ ತೀರ್ಥ ಎಂದು ಕರೆಯಲ್ಪಡುವ ಜಲಪಾತವನ್ನು ವಯ್‌ನಾಡ್‌ ಟೂರ್‌ ಪ್ಯಾಕೇಜ್‌ನಲ್ಲಿ ಎಂದಿಗೂ ಮಿಸ್‌ ಮಾಡಿಕೊಳ್ಳಬಾರದು ಎದನ್ನು ಇರಪ್ಪು ಎಂಬ ಹೆಸರಿನಿಂದಲೂ ಸಂಬೋಧಿಸಲಾಗುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶ್ವಿ‌ಯಾಗಿದೆ.

ಬ್ರಹ್ಮಗಿರಿ ಶಿಖರದಲ್ಲಿ ಹುಟ್ಟುವ ಈ ನದಿ ಕಾವೇರಿ ನದಿಯನ್ನು ಸೇರುತ್ತದೆ.

ದಂತ ಕಥೆಯ ಪ್ರಕಾರ ರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕುತ್ತಾ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಹಾದು ಹೋಗುವಾಗ ರಾಮ ಲಕ್ಷ್ಮಣನ ಬಳಿಯಲ್ಲಿ ಸ್ವಲ್ಪ ಕುಡಿಯಲು ನೀರು ಕೇಳಿದಾಗ, ಲಕ್ಷ್ಮಣ ಬ್ರಹ್ಮಗಿರಿ ಬೆಟ್ಟಗಳ ಮೇಲೆ ಬಾಣ ಹೊಡೆದು ಲಕ್ಷ್ಮಣ ತೀರ್ಥವನ್ನು ಸೃಷ್ಟಿಸಿದನು ಎನ್ನುವ ಪ್ರತೀತಿ ಇದೆ.

Advertisement

ಈ ಜಲಪಾತ ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆ ತನ್ನ ಸೌಂದರ್ಯವನ್ನು ಹುಟ್ಟು ಹಾಕಿಕೊಂಡಿದ್ದು, ಘರ್ಜಿಸುವ ನೀರು, ಸುಂದರವಾದ ಸುತ್ತ ಮುತ್ತಲಿನ ಪ್ರದೇಶಗಳು ಈ ಜಾಗವನ್ನು ಪ್ರವಾಸಿಗರ ನೆಚ್ಚಿನ ತಾಣವಾಗಲೂ ಸಹಕಾರಿಯಾಗಿದೆ. ಆದರೆ ಇಲ್ಲಿ ಚಾರಣ ಮಾಡಲು ಅರಣ್ಯ ಇಲಾಖೆಯವರ ಅನುಮತಿ ಅಗತ್ಯವಾಗಿದ್ದು ಅನುಮತಿ ಇಲ್ಲದೆ ಹೋಗಲು ಸಾಧ್ಯವಿಲ್ಲ.

ಈ ನದಿಯ ದಡದಲ್ಲಿ ರಾಮನು ಪ್ರತಿಷ್ಟಾಪಿಸಿದ ಶಿವಲಿಂಗವಿದ್ದು ಶಿವರಾತ್ರಿ ಸಮಯದಲ್ಲಿ ಇಲ್ಲಿ ಅತಿ ಹೆಚ್ಚಿನ ಜನರು ಸೇರುತ್ತಾರಲ್ಲದೆ ವಿಶೇಷ ಪೂಜೆಗಳು ನಡೆಯುತ್ತದೆ.

ಗೋಣಿಗೊಪ್ಪದಿಂದ ಚಾಲನೆ ಮಾಡುವಾಗ ಶ್ರೀಮಂಗಲಕ್ಕೆ ಹೋಗಿ ಅಲ್ಲಿಂದ 2.5 ಕಿ.ಮೀ ಅನಂತರ ತಿರುವು ಪಡೆದುಕೊಂಡು ಅಲ್ಲಿಂದ ಕಾಫಿ ಎಸ್‌ಟೆಟ್‌ಗಳ ಮೂಲಕ 6 ಕಿ. ಮೀ ಸಾಗಿದರೆ ರಾಮೇಶ್ವರದವರೆಗೆ ಅಪ್ರೋಚ್‌ ರಸ್ತೆ ಲಭ್ಯವಿದೆ. ಜಲಪಾತಕ್ಕೆ ತೆರಳುವವರು ಅಲ್ಲಿಯೇ ಹಣ ಪಾವತಿಸಿ ಹೋಗಬೇಕು. ಅಲ್ಲಿಂದ ದಟ್ಟ ಕಾಡಿನ ಮೂಲಕ 15-20 ನಿಮಿಷಗಳ ಕಾಲ್ನಡಿಗೆ (ಮಾರ್ಗ ಚೆನ್ನಾಗಿದೆ) ಬೇಕಾದಲ್ಲಿ ನೀವು ಜಲಪಾತಕ್ಕೆ ಭೇಟಿ ನೀಡಲು ಕುಟ್ಟ ಅಥವಾ ಶ್ರೀಮಂಗಲದಲ್ಲಿ ವಾಹನವನ್ನು ಬಾಡಿಗೆ ಪಡೆಯಬಹುದು.

ಈ ಜಲಪಾತ ಕೋಜಿಕೋಡ್‌ ವಿಮಾನ ನಿಲ್ದಾಣದಿಂದ 145 ಕಿ. ಮೀ. ದೂರದಲ್ಲಿದೆ. ಮೈಸೂರು ಜಂಕ್ಷನ್‌ ರೈಲ್ವೇ ನಿಲ್ದಾಣ 110 ಕಿ. ಮೀ. ದೂರದಲ್ಲಿದೆ. ಕುಟ್ಟಾ ಬಸ್‌ ನಿಲ್ದಾಣ ಜಲಪಾತಕ್ಕೆ ಹತ್ತಿರದ ನಿಲ್ದಾಣವಾಗಿದೆ. ಕುಟ್ಟಾದಲ್ಲಿ ಬೇಕಾದ ರೀತಿಯ ವಸತಿ ಸೌಲಭ್ಯಗಳಿದ್ದು ದೂರದಿಂದ ಬಂದು 2 ಮೂರು ದಿನಗಳ ಪ್ಯಾಕೇಜ್‌ ಟೂರ್‌ಗಳಿಗೂ ಇದು ಸಹಕಾರಿಯಾಗಿದ್ದು ಪ್ರವಾಸವನ್ನು ಇನ್ನಷ್ಟು ಸುಂದರಗೊಳಿಸಬಹುದಾಗಿದೆ.

 ಪ್ರೀತಿ ಭಟ್‌, ಗುಣವಂತೆ 

Advertisement

Udayavani is now on Telegram. Click here to join our channel and stay updated with the latest news.

Next