Advertisement

Tungabhadra ಸಮಾನಾಂತರ ಜಲಾಶಯಕ್ಕೆ ಸಕಾಲ: ಬೊಮ್ಮಾಯಿ

10:54 PM Aug 12, 2024 | Team Udayavani |

ಹೊಸಪೇಟೆ: ತುಂಗಭದ್ರಾ ಜಲಾಶಯದ ಗೇಟ್‌ ಮುರಿದು ನೀರು ಹರಿದು ಪೋಲಾಗಿರುವುದರಿಂದ ರಾಜ್ಯ ಸರಕಾರ ತಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಚಾಲನೆ ನೀಡಲು ಇದು ಸೂಕ್ತ ಸಮಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ತುಂಗಭದ್ರಾ ಜಲಾಶಯ ಪರಿಶೀಲನೆ ಬಳಿಕ ಮಾತನಾಡಿದ ಅವರು, ಈಗಾಗಲೇ ಡಿಪಿಆರ್‌ ಸಿದ್ಧವಾಗಿದೆ. ಅದನ್ನು ಆಂಧ್ರಪ್ರದೇಶ ಸರಕಾರದ ಜತೆ ಹಂಚಿಕೊಂಡಿದ್ದೇವೆ. ಹಿಂದಿನ ಆಂಧ್ರ ಸಿಎಂ ವೈಎಸ್‌ ಜಗನಮೋಹನ್‌ ರೆಡ್ಡಿ ಜತೆ ಚರ್ಚೆ ನಡೆಸಿದ್ದೆವು. ಅವರು ತಾಂತ್ರಿಕ ತಂಡ ಕಳುಹಿಸಿ ಕೊಟ್ಟಿದ್ದರು. ತಾಂತ್ರಿಕವಾಗಿ ಒಪ್ಪಿಗೆಯೂ ಆಗಿತ್ತು. ಮುಖ್ಯಮಂತ್ರಿಗಳು ಈಗಿನ ಆಂಧ್ರ ಹಾಗೂ ತೆಲಂಗಾಣ ಸರಕಾರದೊಂದಿಗೆ ಮಾತುಕತೆ ನಡೆಸಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು. ಇದರಿಂದ 28 ಟಿಎಂಸಿ ನೀರು ಉಳಿತಾಯವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next