Advertisement

ಮನೆಗೆ ಮರಳುವ ಸಮಯ…

03:50 AM Mar 03, 2017 | |

“ಮರಳಿ ಮನೆಗೆ’ ಎಂಬ ಚಿತ್ರವೊಂದು ಆರಂಭವಾದ ಬಗ್ಗೆ ನಿಮಗೆ ಗೊತ್ತಿರಬಹುದು. ಯೋಗೇಶ್‌ ಮಾಸ್ಟರ್‌ ನಿರ್ದೇಶನದ ಈ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಆಡಿಯೋ ಬಿಡುಗಡೆ
ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. 

Advertisement

ತಮ್ಮ ದೇಸಿ ಕಾಲೇಜಿನಲ್ಲಿ ಉಪನ್ಯಾಸರಕರಾಗಿದ್ದ ಯೋಗೇಶ್‌ ಮಾಸ್ಟರ್‌ ಅವರು ಮಾಡಿದ ಕಥೆ, ಚೆನ್ನಾಗಿದ್ದು ಭಿನ್ನ
ಕಥಾಹಂದರವೊಂದಿದೆ ಎಂದರು. ಚಿತ್ರದ ಆಡಿಯೋ ಬಿಡುಗಡೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದಿದ್ದರಿಂದ ಹಂಸಲೇಖ ಫ್ಲ್ಯಾಶ್‌ಬ್ಯಾಕ್‌ ಗೂ ಜಾರಿದರು. “ಅನೇಕ ಒಳ್ಳೊಳ್ಳೆ ಹಾಡುಗಳು ತಯಾರಾದ ಜಾಗವಿದು. “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು …’ ಹಾಡಿನ ರೆಕಾರ್ಡಿಂಗ್‌ ಕೂಡಾ ಇದೇ ಸ್ಟುಡಿಯೋದಲ್ಲಿ ಆಗಿತ್ತು’ ಎಂದು ಸ್ಟುಡಿಯೋ ಜೊತೆಗಿನ ತಮ್ಮ ನಂಟನ್ನು 
ನೆನಪಿಸಿಕೊಂಡರು.

ಅಂದಹಾಗೆ, “ಮನೆಗೆ ಮರಳಿ’ ಚಿತ್ರ ಯೋಗೇಶ್‌ ಮಾಸ್ಟರ್‌ ಸುಮಾರು 20 ವರ್ಷಗಳ ಹಿಂದೆ ಬರೆದ ಕಥೆ. ಆ ನಂತರ
ನಾಟಕವಾಗಿಯೂ ಅದು ಜನಪ್ರಿಯವಾಗಿದೆ. “ಅದೊಂದು ದಿನ ಒಬ್ಬ ಯುವಕ ನನ್ನ ಬಳಿ ಬಂದು “ಮರಳಿ ಮನೆಗೆ’ ತರದ ಒಳ್ಳೆಯ
ಸಂದೇಶವಿರುವ ಕಥೆಗಳನ್ನು ಮಾಡಿ. ಆ ನಾಟಕ ನೋಡಿ ನನಗೆ ಮತ್ತೆ ಮನೆಗೆ ಹೋಗಬೇಕು, ಕುಟುಂಬದ ಜೊತೆ ಇರಬೇಕು ಎನಿಸುತ್ತಿದೆ’ ಎಂದು ಹೇಳಿದ. ಆದರೆ, ಆ ನಾಟಕ ಬರೆದವ ನಾನೇ ಎಂಬುದು ಆ ಹುಡುಗನಿಗೆ ಗೊತ್ತಿರಲಿಲ್ಲ. ಆಗ ನಾನು ಯೋಚಿಸಿದೆ, ನಾಟಕವೇ ಅಷ್ಟೊಂದು ಜನರಿಗೆ ತಲುಪಿರುವಾಗ, ಇನ್ನು ಸಿನಿಮಾದ ವ್ಯಾಪ್ತಿ ದೊಡ್ಡದು. ಹಾಗಾಗಿ, ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿದೆ’ ಎಂದರು. ಚಿತ್ರವನ್ನು ಎಸ್‌.ಎನ್‌.ಲಿಂಗೇಗೌಡ ಹಾಗೂ ಸುಭಾಶ್‌ ಗೌಡ ನಿರ್ಮಿಸಿದ್ದಾರೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರುತಿ ನಟಿಸಿದ್ದಾರೆ. ಅವರಿಗೆ ಇಲ್ಲಿ ವಯಸ್ಸಿಗೆ ಮೀರಿದ ಪಾತ್ರ ಸಿಕ್ಕಿದೆಯಂತೆ. “ನನ್ನ ಶಕ್ತಿಗೆ ಮೀರಿದ ಪಾತ್ರಗಳು ಸಿಗಬೇಕೆಂದು ನಾನು ಬಯಸುತ್ತೇನೆ. ಆ ತರಹದ ಒಂದು ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ’ ಎಂದು 
ಹೇಳಿಕೊಂಡರು. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್‌ ನಟಿಸಿದ್ದು, ಅವರು ಕೂಡಾ ತಮ್ಮ ಅನುಭವ ಹಂಚಿಕೊಂಡರು. ಚಿತ್ರದಲ್ಲಿ ಶಂಕರ್‌ ಆರ್ಯನ್‌, ಅನಿರುದಟಛಿ, ಅರುಂಧತಿ ಜತ್ಕರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಯೋಗೇಶ್‌ ಮಾಸ್ಟರ್‌ ಹಾಗೂ 
ಗುರುಮೂರ್ತಿ ವೈದ್ಯ ಅವರ ಸಂಗೀತವಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next