Advertisement

India tour ಮುನ್ನ ನಾಯಕತ್ವ ತೊರೆದ ಸೌಥಿ :ಕಿವೀಸ್ ಗೆ ಹೊಸ ಸಾರಥಿ

03:26 PM Oct 02, 2024 | Team Udayavani |

ಆಕ್ಲೆಂಡ್: ಭಾರತ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಗೆ ಮುನ್ನ ಟಿಮ್ ಸೌಥಿ ನ್ಯೂಜಿಲ್ಯಾಂಡ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಸ್ಥಾನಕ್ಕೆ ಟಾಮ್ ಲ್ಯಾಥಮ್ ಅವರನ್ನು ನೇಮಿಸಲಾಗಿದೆ.

Advertisement

“ನಾನು ಯಾವಾಗಲೂ ನನ್ನ ವೃತ್ತಿಜೀವನದುದ್ದಕ್ಕೂ ತಂಡವನ್ನು ಮೊದಲ ಸ್ಥಾನದಲ್ಲಿ ಇರಿಸಲು ಪ್ರಯತ್ನಿಸಿದ್ದೇನೆ ಮತ್ತು ಈ ನಿರ್ಧಾರವು ತಂಡಕ್ಕೆ ಉತ್ತಮವಾಗಿದೆ ಎಂದು ನಾನು ನಂಬುತ್ತೇನೆ” ಎಂದು ಸೌಥಿ ಹೇಳಿಕೆ ನೀಡಿದ್ದಾರೆ.

“ನಮ್ಮ ತಂಡಕ್ಕೆ ನಾನು ಅತ್ಯುತ್ತಮ ಸೇವೆ ಸಲ್ಲಿಸುವ ವಿಧಾನವೆಂದರೆ ಮೈದಾನದಲ್ಲಿ ನನ್ನ ಪ್ರದರ್ಶನಗಳ ಮೇಲೆ ಕೇಂದ್ರೀಕರಿಸುವುದಾಗಿದೆ. ಅತ್ಯುತ್ತಮ ಸ್ಥಿತಿಗೆ ಮರಳುವುದು, ವಿಕೆಟ್‌ಗಳನ್ನು ಪಡೆಯುವುದನ್ನು ಮುಂದುವರಿಸುವುದು ಮತ್ತು ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ” ಎಂದು 35 ರ ಹರೆಯದ ಬಲಗೈ ವೇಗಿ ಹೇಳಿದ್ದಾರೆ.

ಸೌಥಿ 14 ಟೆಸ್ಟ್‌ಗಳಲ್ಲಿ ನಾಯಕರಾಗಿದ್ದರು, ಇದರಲ್ಲಿ ಕಿವೀಸ್ ಆರು ಗೆದ್ದಿದ್ದರೆ, ಆರು ಪಂದ್ಯಗಳಲ್ಲಿ ಸೋತಿತ್ತು. ಎರಡು ಪಂದ್ಯ ಡ್ರಾ ಮಾಡಿಕೊಂಡಿತ್ತು.

161 ಏಕದಿನ ಮತ್ತು 126 ಟಿ 20 ಜತೆಗೆ 102 ಟೆಸ್ಟ್‌ಗಳನ್ನು ಆಡಿದ ಹಿರಿಮೆ ಸೌಥಿ ಅವರದ್ದಾಗಿದೆ. 382 ವಿಕೆಟ್‌ಗಳೊಂದಿಗೆ, ಅವರು ದಂತಕಥೆ ರಿಚರ್ಡ್ ಹ್ಯಾಡ್ಲಿ (431) ನಂತರ ಕಿವೀಸ್‌ ನ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Advertisement

ನ್ಯೂಜಿ ಲ್ಯಾಂಡ್ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಅಕ್ಟೋಬರ್ 16-20 ರವರೆಗೆ ಬೆಂಗಳೂರಿನಲ್ಲಿ ಮೊದಲ ಪಂದ್ಯ ಆಡಲಿದೆ. ಅಕ್ಟೋಬರ್ 24-28 ರವರೆಗೆ ಪುಣೆಯಲ್ಲಿ ಎರಡನೇ ಪಂದ್ಯ ಮತ್ತು ನವೆಂಬರ್ 1-5 ರವರೆಗೆ ಮುಂಬೈನಲ್ಲಿ ಮೂರನೇ ಪಂದ್ಯವನ್ನು ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next