Advertisement

ಸೌಥಿ ಎಸೆತಕ್ಕೆ ವಿರಾಟ್ ಬೌಲ್ಡ್: ನೂತನ ದಾಖಲೆ ಬರೆದ ಟಿಮ್ ಸೌಥಿ

09:58 AM Feb 09, 2020 | keerthan |

ಆಕ್ಲಂಡ್: ಇಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಕಿವೀಸ್ ವೇಗಿ ಟಿಮ್ ಸೌಥಿ ಭಾರತದ ನಾಯಕ ವಿರಾಟ್ ಕೊಹ್ಲಿಯ ವಿಕೆಟ್ ಕಿತ್ತಿದ್ದಾರೆ. ಈ ಮೂಲ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸೌಥಿ ನೂತನ ದಾಖಲೆ ಬರೆದಿದ್ದಾರೆ.

Advertisement

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಯನ್ನು ಟಿಮ್ ಸೌಥಿ ಬರೆದರು. ಕಿವೀಸ್ ವೇಗಿ ಒಟ್ಟು 9 ಬಾರಿ ಕೊಹ್ಲಿಯನ್ನು ಔಟ್ ಮಾಡಿದರು.

ಎಲ್ಲಾ ಮೂರು ಮಾದರಿಯಲ್ಲಿ ಕೊಹ್ಲಿಯನ್ನು 9 ಬಾರಿ ಔಟ್ ಮಾಡಿದ ಟಿಮ್ ಸೌಥಿ ಈ ದಾಖಲೆ ಬರೆದರು. ಇಂಗ್ಲೆಂಡ್ ನ ಆಂಡರ್ಸನ್ ಮತ್ತು ಗ್ರೇಮ್ ಸ್ವಾನ್ ತಲಾ 8 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ.

ಏಕದಿನದಲ್ಲಿ ಟಿಮ್ ಸೌಥಿ ಕೊಹ್ಲಿಯನ್ನು ಒಟ್ಟು ಆರು ಬಾರಿ ಔಟ್ ಮಾಡಿದ್ದು, ವಿಂಡೀಸ್ ನ ರವಿ ರಾಂಪಾಲ್ ಜೊತೆಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ತಿಸ್ಸರ ಪರೆರಾ ಮತ್ತು ಆಡಂ ಜಂಪಾ 5 ಬಾರಿ ಔಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next