Advertisement

ಆಸೀಸ್ ಟೆಸ್ಟ್ ನಾಯಕತ್ವ ತ್ಯಜಿಸಿದ ಟಿಮ್ ಪೇನ್: ಮುಳುವಾಯಿತು 4 ಹಿಂದಿನ ‘ಮೆಸೇಜ್’

11:16 AM Nov 19, 2021 | Team Udayavani |

ಮೆಲ್ಬೋರ್ನ್: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೇನ್ ಅವರು ನಾಯಕತ್ವವನ್ನು ತ್ಯಜಿಸಿದ್ದಾರೆ. ನಾಲ್ಕು ವರ್ಷಗಳ ಹಿಂದಿನ ಮೊಬೈಲ್ ಸಂದೇಶ ಪ್ರಕರಣದಲ್ಲಿ ಹೆಸರು ಕೇಳಿಬಂದ ಕಾರಣ ಟಿಮ್ ಪೇನ್ ಅವರು ತಕ್ಷಣಕ್ಕೆ ಜಾರಿಗೆ ಬರುವಂತೆ ಅವರು ತಮ್ಮ ರಾಜೀನಾಮೆ ಸಲ್ಲಸಿದ್ದಾರೆ.

Advertisement

“ಇಂದು ಆಸ್ಟ್ರೇಲಿಯನ್ ಪುರುಷರ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ನನ್ನ ನಿರ್ಧಾರವನ್ನು ನಾನು ಘೋಷಿಸಿದ್ದೇನೆ. ಇದು ನಂಬಲಾಗದಷ್ಟು ಕಷ್ಟಕರವಾದ ನಿರ್ಧಾರ, ಆದರೆ ನನಗೆ, ನನ್ನ ಕುಟುಂಬ ಮತ್ತು ಕ್ರಿಕೆಟ್‌ಗೆ ಸರಿಯಾದ ನಿರ್ಧಾರ” ಎಂದು ಪೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಹಿಂದೆ ಆಗಿನ ಸಹೋದ್ಯೋಗಿ ಯುವತಿಗೆ ಟಿಮ್ ಪೇನ್ ಅಶ್ಲೀಲ ಮೆಸೇಜ್ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆಯನ್ನೂ ನಡೆಸಿದೆ.

ಇದನ್ನೂ ಓದಿ:ಸಿನಿಮಾದ ಫೀಲ್‌ ಸದಾ ಕಾಡಬೇಕು: ರಾಜ್‌ ಶೆಟ್ಟಿ ಡ್ರೀಮ್‌ ಪ್ರಾಜೆಕ್ಟ್

ಆ್ಯಶಸ್ ಸರಣಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಂತೆ ಟಿಮ್ ಪೇನ್ ಈ ನಿರ್ಧಾರ ಪ್ರಕಟಿಸಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ನಾಯಕ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಫ್ಟ್ ಬಾಲ್ ಟ್ಯಾಂಪರಿಂಗ್ ವಿವಾದಕ್ಕೆ ಸಿಲುಕಿದ ಬಳಿಕ ಟಿಮ್ ಪೇನ್ ಟೆಸ್ಟ್ ತಂಡ ನಾಯಕತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next