Advertisement

ಆಸ್ಟ್ರೇಲಿಯದ ಟಿಮ್‌ ಕಾಹಿಲ್‌ ನಿವೃತ್ತಿ

06:00 AM Jul 18, 2018 | Team Udayavani |

ಸಿಡ್ನಿ: ಆಸ್ಟ್ರೇಲಿಯದ ಖ್ಯಾತ ಫ‌ುಟ್‌ಬಾಲ್‌ ಆಟಗಾರ ಮತ್ತು ಗರಿಷ್ಠ ಗೋಲು ಹೊಡೆದ ಖ್ಯಾತಿಯ ಟಿಮ್‌ ಕಾಹಿಲ್‌ ಅವರು ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ನಿಂದ ನಿವೃತ್ತಿಯಾಗಿದ್ದಾರೆ.

Advertisement

ಒಟ್ಟಾರೆ 107 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 50 ಗೋಲು ಹೊಡೆದಿರುವ ಅವರು ರಶ್ಯದಲ್ಲಿ ನಡೆದ ಫಿಫಾ ವಿಶ್ವಕಪ್‌ನ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಬದಲಿ ಆಟಗಾರರಾಗಿ ಆಸ್ಟ್ರೇಲಿಯ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆ ಪಂದ್ಯದಲ್ಲಿ ಆಸ್ಟ್ರೇಲಿಯವು ಪೆರು ತಂಡಕ್ಕೆ 0-2 ಗೋಲುಗಳಿಂದ ಶರಣಾಗಿತ್ತು.

ಈ ದಿನ ನಾನು ಅಧಿಕೃತವಾಗಿ ಆಸ್ಟ್ರೇಲಿಯ ತಂಡದ ಜತೆ ಅಂತಾ ರಾಷ್ಟ್ರೀಯ ಬಾಳ್ವೆಯಿಂದ ನಿವೃತ್ತಿ ಯಾಗುತ್ತಿದ್ದೇನೆ ಎಂದು ಕಾಹಿಲ್‌ ಟ್ವಿಟರ್‌ ಖಾತೆಯಲ್ಲಿ ಬರೆದಿದ್ದಾರೆ. ದೇಶವನ್ನು ಪ್ರತಿನಿಧಿಸುವುದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ. 

ಆಸ್ಟ್ರೇಲಿಯ ಪರ ಆಡುತ್ತಿರುವ ವೇಳೆ ನನಗೆ ಪ್ರೋತ್ಸಾಹ, ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next