Advertisement

Darshan & ಗ್ಯಾಂಗ್ ನಿಂದ ಹ*ತ್ಯೆಯಾಗಿದ್ದ ರೇಣುಕಾಸ್ವಾಮಿ ಪತ್ನಿಗೆ ಮಗು ಜನನ

11:36 AM Oct 16, 2024 | Team Udayavani |

ಚಿತ್ರದುರ್ಗ: ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಗೆ ಗಂಡು ಮಗು ಜನನವಾಗಿದೆ. ನಗರದ ಕೀರ್ತಿ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Advertisement

ರೇಣುಕಾಸ್ವಾಮಿ ಕೊಲೆಯಾದ ಸಂದರ್ಭದಲ್ಲಿ ಪತ್ನಿ ಸಹನಾ ಗರ್ಭಿಣಿಯಾಗಿದ್ದರು. ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಸಹನಾ ಅವರಿಗೆ ಬುಧವಾರ (ಅ16)ಬೆಳಗಿನ ಜಾವ 5 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ -ಮಗು ಆರೋಗ್ಯವಾಗಿದ್ದಾರೆ ಅಲ್ಲದೆ ಕೀರ್ತಿ ಆಸ್ಪತ್ರೆಯಿಂದ ಡಾ.ಮಲ್ಲಿಕಾರ್ಜುನ್ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ನಟ ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿಯನ್ನು ವ್ಯಕ್ತಿಗಳು ಅಪಹರಿಸಿ ಜೂನ್ 8 ರಂದು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ಪ್ರಮುಖ ಆರೋಪಿಗಳಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next