ಬ್ಲೂಮ್‌ಬರ್ಗ್: ಕೇವಲ ಒಂದು ವರ್ಷದ ಹಿಂದೆ ಬೈಟ್‌ಡಾನ್ಸ್ ಮಾಲಿಕತ್ವದ ಮನರಂಜನಾ ಆ್ಯಪ್ ಟಿಕ್‌ಟಾಕ್ ವಿಶ್ವದ ಮೂಲೆಮೂಲೆಯಿಂದ ಸವಾಲುಗಳಿಗೆ ತುತ್ತಾಗಿತ್ತು. ಭಾರತ ಅದನ್ನು ನಿರ್ಬಂಧಿಸಿದ್ದರೆ, ಅಮೆರಿಕ ನಿಷೇಧ ಹಾಕುವ ಮಾತನಾಡಿತ್ತು. ಚೀನಾ ಕಂಪನಿಯಾಗಿದ್ದರೂ ಚೀನಾ ಸರ್ಕಾರವೇ ತನ್ನ ತಾಂತ್ರಿಕ ದೈತ್ಯ ಕಂಪನಿಗಳ ಮೇಲೆ ಸಿಟ್ಟಾಗಿತ್ತು.
ಇಷ್ಟೆಲ್ಲದರ ನಡುವೆ ಟಿಕ್‌ಟಾಕ್ ಮತ್ತು ಅದರ ಮಾಲಿಕ ಸಂಸ್ಥೆ ಬೈಟ್‌ಡಾನ್ಸ್ ಬೆಳೆಯುತ್ತಲೇ ಸಾಗಿವೆ.
ಟಿಕ್‌ಟಾಕ್ ಸಂಸ್ಥಾಪಕ, ಬೈಟ್‌ಡಾನ್ಸ್ ಮಾಲಿಕ ಝಾಂಗ್ ಯಿಮಿಂಗ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅವರ ಆಸ್ತಿಮೌಲ್ಯ 45 ಲಕ್ಷ ಕೋಟಿ ರೂ. (60 ಬಿಲಿಯನ್ ಡಾಲರ್). ಹೀಗೆಂದು ಅಮೆರಿಕದ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಮಾಹಿತಿ ನೀಡಿದೆ.
ಅವರೀಗ ಚೀನಾದ ಟೆನ್ಸೆಂಟ್ ಮಾಲಿಕ ಪೋನಿ ಮಾ, ಬಾಟಲಿ ನೀರಿನ ದೊರೆ ಝಾಂಗ್ ಶಾನ್ಶಾನ್ ಅಕ್ಕಪಕ್ಕ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ :ಕೈಕೊಟ್ಟ ಪ್ರಿನ್ಸ್ ಹ್ಯಾರಿ, ಕೋರ್ಟ್ ಮೆಟ್ಟಿಲೇರಿದ ವಕೀಲೆ!