Advertisement

ವಿಟ್ಲ: ಟಿಕ್ ಟಾಕ್ ಸ್ಟಾರ್ ಕಮಲಜ್ಜಿ ನಿಧನ

07:53 PM Feb 09, 2022 | Team Udayavani |

ವಿಟ್ಲ: ಟಿಕ್ ಟಾಕ್ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿ ವರ್ಗವನ್ನು ಪಡೆದಿದ್ದ, ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ ಟಾಕ್ ಕಮಲಜ್ಜಿ ಯಾನೆ ಕಮಲ (85) ಅವರು ಫೆ.9ರಂದು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಆರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Advertisement

ಟಿಕ್ ಟಾಕ್ ಸ್ಟಾರ್ ಧನರಾಜ್ ಜೊತೆ  ಕಮಲಜ್ಜಿ 50ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಕುಟುಂಬವೇ ಟಿಕ್ ಟಾಕ್ ಫ್ಯಾಮಿಲಿ ಎಂದು ಹೆಸರು ಪಡೆದಿತ್ತು. ತಮ್ಮ ಇಳಿವಯಸ್ಸಿನಲ್ಲೂ ಇವರು ಟಿಕ್ ಟಾಕ್ ವಿಡಿಯೋಗಳಲ್ಲಿ ತೋರುತ್ತಿದ್ದ ಅಭಿನಯ, ಮಾತಿನ ವೇಗ, ಮನೆಮಂದಿಯ ಜೊತೆ ಬೆರೆಯುತ್ತಿದ್ದ ದೃಶ್ಯಾವಳಿಗಳಿಂದಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಅವರು ಪಡೆದಿದ್ದರು. ಪ್ರಸೂತಿ ತಜ್ಞೆಯಾಗಿದ್ದ ಇವರು ಪರೋಪಕಾರ ಮನಸ್ಸಿನವರಾಗಿದ್ದರು.

ಸಂತಾಪ : ಕಮಲಜ್ಜಿಯ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ, ಅನಂತಾಡಿ ಗ್ರಾಮ ಬಿಜೆಪಿ ಸಮಿತಿ ಸಂತಾಪ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next