ನ್ಯೂಯಾರ್ಕ್: ಚೀನಾ ಮೂಲದ ಟಿಕ್ ಟಾಕ್ ಆ್ಯಪ್, ಫೇಸ್ ಬುಕ್ , ಮೆಸೆಂಜರ್ , ಇನ್ ಸ್ಟಾ ಗ್ರಾಂ ಹಿಂದಿಕ್ಕಿ ಜಗತ್ತಿನಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆದ ಎರಡನೇ ಆ್ಯಪ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಬೈಟೇ ಡ್ಯಾನ್ಸ್ ಒಡೆತನದ ಟಿಕ್ ಟಾಕ್ ವಿಡಿಯೋ ಶೇರಿಂಗ್ ಆ್ಯಪ್ 2019ರಲ್ಲಿ ಅತೀ ಹೆಚ್ಚು ಜನರನ್ನು ಆಕರ್ಷಿಸಿತ್ತು.
ಆದರೂ ವಾಟ್ಸಾಪ್ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಫೇಸ್ ಬುಕ್ ಹಿಂದಕ್ಕೆ ತಳ್ಳಲ್ಪಟ್ಟಿದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಾದ್ಯಂತ ಟಿಕ್ ಟಾಕ್ 2019 ರಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮತ್ತು ಐಫೋನ್ , ಐಪ್ಯಾಡ್ ಸ್ಟೋರ್ ಗಳಲ್ಲಿ 740 ಮಿಲಿಯನ್ ಡೌನ್ ಲೋಡ್ ಆಗಿದೆ.
ಆಶ್ಚರ್ಯವೆಂದರೇ ಟಿಕ್ ಟಾಕ್ ಆ್ಯಪ್ ಅನ್ನು ಭಾರತದಲ್ಲೇ ಅತೀ ಹೆಚ್ಚು ಜನರು(44%) ಡೌನ್ ಲೋಡ್ ಮಾಡಿದ್ದಾರೆ. ಹೀಗಾಗಿ ಟಿಕ್ ಟಾಕ್ ಗೆ 2019 ನೇ ವರ್ಷ ಯಶಸ್ವೀ ವರ್ಷ ಎಂದೇನಿಸಿಕೊಂಡಿದೆ.