Advertisement

ಈ ಬಾರಿ 40 ಲಕ್ಷ ಟ್ರ್ಯಾಕ್ಟರ್ ಜತೆ ಸಂಸತ್ ಗೆ ಮುತ್ತಿಗೆ ಹಾಕ್ತೇವೆ: ಕೇಂದ್ರಕ್ಕೆ ಟಿಕಾಯತ್

12:29 PM Feb 24, 2021 | Team Udayavani |

ಸಿಕಾರ್(ರಾಜಸ್ಥಾನ್): ಒಂದು ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸದಿದ್ದರೆ ಬೃಹತ್ ಸಂಖ್ಯೆಯಲ್ಲಿ ಸಂಸತ್ ಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘಟನೆ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆಯ ಸಂದೇಶ ರವಾನಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಶ್ರೀದೇವಿ ಪುಣ್ಯಸ್ಮರಣೆ : ಬೊಗಸೆ ಕಂಗಳ ನಟಿ ಅಭಿಮಾನಿಗಳಿಗೆ ಆಘಾತ ನೀಡಿದ ದಿನವಿದು..!

ಯಾವುದೇ ಸಮಯದಲ್ಲಿಯೂ ದೆಹಲಿ ಚಲೋಗೆ ಕರೆ ನೀಡಬಹುದಾಗಿದ್ದು, ಎಲ್ಲಾ ರೈತರು ಪ್ರತಿಭಟನೆಗೆ ಸಿದ್ದರಾಗಿರುವಂತೆ ಟಿಕಾಯತ್ ಈ ಸಂದರ್ಭದಲ್ಲಿ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜಸ್ಥಾನದ ಸಿಕಾರ್ ನಲ್ಲಿ ಕಿಸಾನ್ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಟಿಕಾಯತ್ ಮಾತನಾಡಿದ್ದು, ಈ ಬಾರಿ ನಾವು ಸಂಸತ್ ಗೆ ಮುತ್ತಿಗೆ ಹಾಕಲಿದ್ದೇವೆ. ನಾವು ಈ ಬಗ್ಗೆ ಘೋಷಿಸುತ್ತಿದ್ದು, ನಂತರ ದೆಹಲಿ ಚಲೋಗೆ ಕರೆ ನೀಡುತ್ತೇವೆ. ಅಷ್ಟೇ ಅಲ್ಲ ಈ ಬಾರಿ 40 ಲಕ್ಷ ಟ್ರ್ಯಾಕ್ಟರ್ ನೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸುವುದಾಗಿ ಟಿಕಾಯತ್ ಹೇಳಿದರು.

ಸಂಸತ್ ಗೆ ಮುತ್ತಿಗೆ ಹಾಕುವ ದಿನಾಂಕವನ್ನು ಕಿಸಾನ್ ಒಕ್ಕೂಟ ನಿರ್ಧರಿಸಲಿದೆ ಎಂದು ಟಿಕಾಯತ್ ತಿಳಿಸಿದ್ದು, ಜನವರಿ 26ರಂದು ನಡೆದ ರೈತರ ಟ್ರ್ಯಾಕ್ಟರ್ ರಾಲಿಯಲ್ಲಿ ಸಂಚು ನಡೆಸಲಾಗಿತ್ತು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next