ಹೊಸದಿಲ್ಲಿ: ನಿಷೇಧಿತ “ಪಬ್‌ಜಿ’ ಗೇಮ್, “ಪಬ್‌ಜಿ ಇಂಡಿಯಾ’ ಆಗಿ ಬರುತ್ತಿದೆ. ಇದರ ಬೆನ್ನಲ್ಲೇ ಟಿಕ್‌ಟಾಕ್ ಕೂಡ ಭಾರತದ ಮಾರುಕಟ್ಟೆಗೆ ಮರುಪ್ರವೇಶಿಸುವ ನಿರೀಕ್ಷೆಯಲ್ಲಿದೆ.
ಚೀನೀ ಆ್ಯಪ್ ನಿಷೇಧಗೊಂಡರೂ ಟಿಕ್‌ಟಾಕ್‌ನ ಪೋಷಕ ಸಂಸ್ಥೆ ಬೈಟ್‌ಡ್ಯಾನ್ಸ್, ಭಾರತದಲ್ಲಿನ ಉದ್ಯೋಗಿಗಳನ್ನು ಉಳಿಸಿಕೊಂಡಿದೆ. ಭಾರತದಲ್ಲಿ ಬೈಟ್ ಡ್ಯಾನ್ಸ್ ನ 2000 ಉದ್ಯೋಗಿಗಳಿದ್ದಾರೆ. ಟಿಕ್‌ಟಾಕ್ ಇಂಡಿಯಾ ಮುಖ್ಯಸ್ಥ ನಿಖೀಲ್ ಗಾಂಧಿ ಇತ್ತೀಚೆಗಷ್ಟೇ ಸಹೋದ್ಯೋಗಿಗಳಿಗೆ ಭರವಸೆ ಹುಟ್ಟಿಸುವಂಥ ಇ-ಮೇಲ್ ಮಾಡಿದ್ದಾರೆ.
“ಉದ್ಯೋಗಿಗಳ ಕ್ಷೇಮ ಕಾಪಾಡಲು ಸಂಸ್ಥೆ ಬದ್ಧ. ಸರಕಾರ ಮುಂದಿಟ್ಟ ತೊಡಕುಗಳನ್ನು ನಿವಾರಿಸಲು ಟಿಕ್‌ಟಾಕ್ ಪ್ರಯತ್ನಿಸುತ್ತಿದೆ. ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ನಮ್ಮ ವೇದಿಕೆ ಎಷ್ಟು ಬದ್ಧವಾಗಿದೆ ಎಂಬುದನ್ನು ನಾವು ಮನವರಿಕೆ ಮಾಡಿದ್ದೇವೆ. ಸರಕಾರದ ನಿಲುವುಗಳ ಬಗ್ಗೆ ಆಶಾವಾದಿಗಳಾಗಿರೋಣ’ ಎಂದು ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ:ಕೈ ಪಾಳಯದಲ್ಲಿ ಮತ್ತೆ ಹಿರಿಯರ ಮುನಿಸು: ಹೈಕಮಾಂಡ್ ವಿರುದ್ಧ ಹರಿಹಾಯ್ದ ಕಪಿಲ್ ಸಿಬಲ್
ಈ ಹಿಂದೆ, ರಿಲಯನ್ಸ್, ಏರ್ ಟೆಲ್ ಅಥವಾ ಮೈಕ್ರೋಸಾಫ್ಟ್ ಸಹ ಭಾರತೀಯ ಕಾರ್ಯಾಚರಣೆಗಳನ್ನು ಸ್ವಾಧೀನಪಡಿಸಿ ಕೊಳ್ಳಬಹುದು ಮತ್ತು ಎಲ್ಲಾ ಸುರಕ್ಷತಾ ಕ್ರಮಗಳು ಮತ್ತು ಡೇಟಾ ಗೌಪ್ಯತೆಯೊಂದಿಗೆ ಅಪ್ಲಿಕೇಶನ್ ಅನ್ನು ಮರು ಪ್ರಾರಂಭಿಸಬಹುದು ಎಂಬ ವದಂತಿಗಳು ಹರಡಿದ್ದವು.