Advertisement

Tigers; ದೇಶದಲ್ಲಿ ಪ್ರಸಕ್ತ ವರ್ಷ 103 ದಿನಗಳಲ್ಲಿ 47 ಹುಲಿಗಳ ಸಾವು

12:24 AM Sep 01, 2024 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷದ 103 ದಿನಗಳಲ್ಲಿ ಕರ್ನಾಟಕದಲ್ಲಿ 6 ಸೇರಿದಂತೆ ಭಾರತವು ಒಟ್ಟು 47 ಹುಲಿಗಳನ್ನು ಕಳೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್‌ಗೆ ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ(NTCA) ಮಾಹಿತಿ ನೀಡಿದೆ. ಭಾರತದಲ್ಲಿ ಹುಲಿಗಳ ಸ್ಥಿತಿಗತಿ ಎಂಬ ವರದಿಯ ಅನ್ವಯ ಈ ಮಾಹಿತಿ ನೀಡಲಾಗಿದೆ.

Advertisement

ಜನವರಿ 1ರಿಂದ ಎಪ್ರಿಲ್‌ 12ರ ವರೆಗೆ ಒಟ್ಟು 47 ಹುಲಿಗಳು ಸಾವಿಗೀಡಾಗಿದ್ದು, ಈ ಪೈಕಿ ಅತೀ ಹೆಚ್ಚು ಅಂದರೆ 17 ಹುಲಿಗಳು ಮಧ್ಯಪ್ರದೇಶದಲ್ಲಿ, 11 ಹುಲಿಗಳು ಮಹಾರಾಷ್ಟ್ರದಲ್ಲಿ ಸಾವನ್ನ ಪ್ಪಿವೆ. ಕರ್ನಾಟಕದಲ್ಲಿ 6, ಉತ್ತರಪ್ರದೇಶ 3, ರಾಜಸ್ಥಾನ, ಕೇರಳ, ತೆಲಂಗಾಣ ಮತ್ತು ಉತ್ತರಾಖಂಡಗಳಲ್ಲಿ ತಲಾ 2, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ತಲಾ 1 ಹುಲಿ ಜೀವ ಕಳೆದುಕೊಂಡಿದೆ ಎಂದು ವರದಿ ಹೇಳಿದೆ.

ಕಳೆದ ವರ್ಷ ದೇಶದಲ್ಲಿ ಒಟ್ಟು 181 ಹುಲಿಗಳು ಮೃತಪಟ್ಟಿದ್ದವು. ಹುಲಿಗಳ ಸಾವಿಗೆ ಕಾರಣವೇನೆಂದು ಪರಿಶೀ ಲಿಸಲಾಗುತ್ತಿದೆ ಎಂದು ಕೋರ್ಟ್‌ಗೆ ಎನ್‌ಟಿಸಿಎ ತಿಳಿಸಿದೆ. ಹುಲಿಗಳನ್ನು ಕಳ್ಳ ಬೇಟೆಯಾಡುವುದನ್ನು ತಡೆಯಲು ಕೇಂದ್ರ, ರಾಜ್ಯ ಸರಕಾರಗಳು ಕಠಿನ ಕ್ರಮಗಳನ್ನು ಕೈಗೊಂಡಿವೆ ಎಂದು ಹೆಚ್ಚು ವರಿ ಸಾಲಿಸಿಟರ್‌ ಜನರಲ್‌ ಸುಪ್ರೀಂ ಕೋರ್ಟ್‌ನ ಗಮನಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next