ಮೈಸೂರು: ಬೆಳಗಾವಿಯ ಭೂತರಾಮನ ಹಟ್ಟಿ ಮೃಗಾಲಯಕ್ಕೆ ಈಗಾಗಲೇ ಮೂರು ಸಿಂಹಗಳನ್ನು ಕಳುಹಿಸಿಕೊಡಲಾಗಿದ್ದು, ಸದ್ಯಕ್ಕೆ ಅವುಗಳನ್ನು ಕ್ವಾರಂಟೈನನಲ್ಲಿ ಇಡ ಲಾಗಿದೆ. ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್.ಮಹಾದೇವಸ್ವಾಮಿ ತಿಳಿಸಿದರು.
ಬೆಳಗಾವಿಯ ಭೂತರಾಮನಹಟ್ಟಿ ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಬುಧವಾರ ಭೇಟಿ ನೀಡಿದ್ದ ಅವರು, ಸುದ್ದಿಗಾರ ರೊಂದಿಗೆ ಮಾತನಾಡಿ, ಮೃಗಾಲಯ ಅಭಿ ವೃದ್ಧಿಗೆ ಹೆಚ್ಚು ಒತ್ತು ನೀಡುವ ಉದ್ದೇಶ ದಿಂದ ಈಗಾಗಲೇ ಸಿಂಹಗಳನ್ನು ಮೃಗಾ ಲಯಕ್ಕೆ ನೀಡಿದ್ದು, ಮುಂದಿನ ವಾರವೇ ಹುಲಿ ಕಳುಹಿಸಿ ಕೊಡಲಾಗುವುದು. ಅದರ ನಂತ ರದ ವಾರದಲ್ಲಿ ಚಿರತೆ ಯನ್ನೂ ನೀಡಲಾಗುವುದು. ಕೇಂದ್ರ ಮೃಗಾ ಲಯ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರ ಮೃಗಾಲಯ ಸಿದ್ಧವಾಗಿದೆ. ಬೆಳ ಗಾವಿ ಹಾಗೂ ಸುತ್ತಲಿನ ಜಿÇÉೆಗಳ ಪ್ರಾಣಿ ಪ್ರಿಯರು ಪ್ರಾಣಿಗಳನ್ನು ದತ್ತು ಪಡೆದರೆ ಮೃಗಾಲಯದ ಸಮಗ್ರ ಅಭಿವೃದ್ಧಿ ಆಗತ್ತದೆ ಎಂದರು.
ಜಿಲ್ಲೆಯ ಶಾಸಕರು ಮುತುವರ್ಜಿ ವಹಿಸಿ ಹೆಚ್ಚಿನ ಅನುದಾನ ನೀಡಬೇಕು ಎಂದು ಅವರು ಮನವಿ ಮಾಡಿದರು. ಮುಂದಿನ ವಾರ ಪ್ರಾಧಿಕಾರದ ರಾಜ್ಯ ಮಟ್ಟದ ಸಭೆ ಇದ್ದು, ಭೂತರಾಮನಹಟ್ಟಿ ಝೂನಲ್ಲಿನ ನೀರಿನ ಕೊರತೆ ನೀಗಿಸಲು ಅನುದಾನ ಬಿಡುಗಡೆ ಬಗ್ಗೆ ಸರ್ಕಾರದ ಜೊತೆಗೆ ಚರ್ಚೆ ಮಾಡಲಾಗು ವುದು.
ಝೂನಲ್ಲಿ ಸಾಕಷ್ಟು ಹಣ್ಣಿನ ಮತ್ತು ನಿತ್ಯ ಹರಿದ್ವರ್ಣ ಗಿಡ ನಾಟಿ ಮಾಡಲಾಗುವುದು. ತಮ್ಮ ತಮ್ಮ ಜನ್ಮ ದಿನದ ವೇಳೆಯೂ ಪ್ರವಾಸಿಗರು ಇಲ್ಲಿಗೆ ಬಂದು ಪ್ರಾಣಿ ದತ್ತು ಪಡೆಯಬಹುದು ಎಂದು ತಿಳಿಸಿದರು.
ಮೃಗಾಲಯ ಪ್ರವೇಶಕ್ಕೆ ಈಗಿರುವ 20 ರೂ. ದರವನ್ನು 40 ರೂ.ಗೆ ಏರಿಸುತ್ತೇವೆ. ಮಕ್ಕಳಿಗೆ 20 ರೂ. ನಿಗದಿ ಮಾಡಲಾಗು ವುದು. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ, ಖಾಸಗಿ ಶಾಲೆಯವರಿಗೆ ಶೇ.20 ರಿಯಾ ಯಿತಿ ಯೊಂದಿಗೆ ಮೃಗಾಲಯದಲ್ಲಿ ಪ್ರಾಣಿ ಕುರಿತ ಅರಿವು ಕಾರ್ಯಕ್ರಮ ನಡೆಸುವ ಉದ್ದೇಶ ವಿದೆ. 25 ಸಾವಿರ ರೂ.ಹಣ ಕೊಟ್ಟು ಪ್ರಾಣಿ ದತ್ತು ಪಡೆದರೆ ಕರ್ನಾಟಕದ 9 ಮೃಗಾಲಯದಲ್ಲಿ 10 ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದು ತಿಳಿಸಿದರು.