Advertisement

ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಂದಕ ನಿರ್ಮಾಣ!

03:05 PM Oct 11, 2021 | Team Udayavani |

ಯಳಂದೂರು: ತಾಲೂಕಿನ ಪ್ರಸಿದ್ಧ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಂದಕ ನಿರ್ಮಾಣ ಮಾಡುವ ಕೆಲಸ ಎಗ್ಗಿಲ್ಲದೆ ಸಾಗಿದೆ. ಅರಣ್ಯ ಇಲಾಖೆಗೆ ಈ ವಿಚಾರ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Advertisement

ಮಣ್ಣು ಲೂಟಿ ಅವ್ಯಾಹತ: ತಾಲೂಕಿನ ಯರಗಂಬಳ್ಳಿ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ದಾನಸಹುಂಡಿ ಗ್ರಾಮದ ಬಳಿ ಇರುವ ಸಾಯಿ ಫಾರಂ ಹುಲಿರಕ್ಷಿತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇದೆ. ಇಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆ ನಿರ್ಮಾಣ ಮಾಡಬೇಕಿದ್ದ ಆನೆ ಕಂದಕವನ್ನು ಈ ಜಮೀನಿನ ವ್ಯಕ್ತಿ ಜೆಸಿಬಿ ಮೂಲಕ ಅಕ್ರಮವಾಗಿ ತೋಡಿದ್ದಾರೆ.

20 ಅಡಿಗೂ ಹೆಚ್ಚು ಆಳವಿರುವ ಹತ್ತಾರು ಮೀಟರ್‌ ಉದ್ದದ ಕಂದಕವನ್ನು ತೋಡಿದ್ದು ಇಲ್ಲಿನ ಗ್ರಾವೆಲ್‌ ಮಣ್ಣನ್ನು ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಿಸಲು ಬಳಸಿಕೊಂಡಿದ್ದಾರೆ. ಇದರ ಬಳಿಯಲ್ಲೇ ಅರಣ್ಯ ಇಲಾಖೆಯ ವೀಕ್ಷಣಾ ಗೋಪುರವೂ ಇದೆ. ಆದರೂ, ಪ್ರಶ್ನಿಸುವ, ಕೆಲಸ ನಿಲ್ಲಿಸುವ ಗೋಜಿಗೆ ಇಲಾಖೆ ಹೋಗದಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ.

ಇದನ್ನೂ ಓದಿ;- ಪ್ರಮುಖ ಪಂದ್ಯಕ್ಕೂ ಮೊದಲೇ ಆರ್ ಸಿಬಿ ತಂಡದಿಂದ ಹೊರನಡೆದ ಇಬ್ಬರು ಸ್ಟಾರ್ ಆಟಗಾರರು!

ವ್ಯವಸ್ಥಾಪಕನ ಮೇಲೆ ದೂರು: ಈ ಜಮೀನಿನ ಮಾಲೀಕ ಪ್ರಭಾವಿ ವ್ಯಕ್ತಿಯಾಗಿದ್ದಾನೆ. ರಾಜಕೀಯ ಮುಖಂಡರು ಈತನ ತೆಕ್ಕೆಯಲ್ಲಿದ್ದಾರೆ ಎಂಬುದು ಸ್ಥಳೀಯರ ಆರೋಪ. ಅರಣ್ಯ ಇಲಾಖೆ ಜುಲೈನಲ್ಲಿ ಮೊದಲ ಬಾರಿಗೆ ಕಂದಕ ನಿರ್ಮಾಣ ಮಾಡಿದ್ದಾಗ, ಮಾಧ್ಯಮಗಳಲ್ಲಿ ಈ ವಿಷಯ ಪ್ರಕಟವಾಗುತ್ತಿದ್ದಂ ತೆಯೇ ಜು.11 ರಂದು ಅರಣ್ಯ ಇಲಾಖೆ ಜಮೀನಿನ ಮಾಲಿಕನನ್ನು ಬಿಟ್ಟು ವ್ಯವಸ್ಥಾಪಕನ ಮೇಲೆ ದೂರು ದಾಖಲಿಸಿ ಕೈ ತೊಳೆದುಕೊಂಡಿತ್ತು. ಇದನ್ನು ತೋಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳದೆ ಕಾಟಚಾರಕ್ಕೆ ದೂರು ದಾಖಲಾಗಿತ್ತು. ಆದರೆ ಈಗ ಮತ್ತೆ ಇಲ್ಲಿ ಜೆಸಿಬಿ ಸದ್ದು ಆರ್ಭಟಿಸುತ್ತಿದ್ದು ಅರಣ್ಯ ಇಲಾಖೆ ಮೇಲೆ ಈತನ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.

Advertisement

 ರಸ್ತೆಗೆ ಅನುಮತಿ ಇಲ್ಲ: ಅರಣ್ಯ ಇಲಾಖೆ ನಿಯಮಗಳು ಕಠಿಣವಾಗಿದೆ. ರಸ್ತೆ ಅಗಲೀಕರವಾಗಲಿ ಅಕ್ಕಪಕ್ಕದ ಸಣ್ಣಪುಟ್ಟ ಗಿಡಗಳನ್ನು ಕತ್ತರಿಸಲೂ ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಆದರೆ ಇಲ್ಲಿ ನೂರಾರು ಮೀಟರ್‌ ಕಂದಕ ನಿರ್ಮಾಣ ಮಾಡಿದರೂ ಇಲಾಖೆ ಮೌನ ವಹಿಸಿದೆ. ಹುಲಿ ರಕ್ಷಿತ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಸಣ್ಣ ಕಲ್ಲನ್ನು ಹೊರತರುವುದು ಅಪರಾಧ. ಇಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಅರಣ್ಯ ಸಂಪತ್ತು ಲೂಟಿ ಯಾಗುತ್ತಿದ್ದರೂ ಇಲಾಖೆ ಕ್ರಮ ವಹಿಸಿಲ್ಲ ಎಂಬುದು ಸ್ಥಳೀಯ ರೈತರ ದೂರು ಆಗಿದೆ. ಖಾಸಗಿ ವ್ಯಕ್ತಿಗಳು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತೋಡುತ್ತಿರುವ ಬಗ್ಗೆ ನನಗೆ ಈಗಾಗಲೇ ಮಾಹಿತಿ ಲಭ್ಯವಾಗಿದೆ. ಈ ಹಿಂದೆಯೂ ಇದು ನಡೆಯುತ್ತಿತ್ತು ಎಂಬುದರ ಬಗ್ಗೆಯೂ ಗೊತ್ತಿದೆ. ಈ ಕುರಿತು ನಮ್ಮ ಇಲಾಖೆ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದ್ದು ನಂತರ ಮುಂದಿನ ಕ್ರಮ ವಹಿಸಲಾಗುವುದು.

ಮನೋಜ್‌ಕುಮಾರ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಾಮರಾಜನಗರ ಜಿಲೆ

ಜೆಸಿಬಿ ವಾಹನಕ್ಕೆ ಸಂಖ್ಯೆಯೇ ನಮೂದಾಗಿಲ್ಲ: ಇದು ಹುಲಿರಕ್ಷಿರ ಅರಣ್ಯ ಪ್ರದೇಶಕ್ಕೆ ಅಂಟುಕೊಂಡಂತೆಯೇ ಇದೆ. ಇಲಾಖೆ ವತಿಯಿಂದ ಈಗಾಗಲೇ ಈ ಭಾಗದಲ್ಲಿ ಕಾಡುಪ್ರಾಣಿಗಳು ಬಾರದಂತೆ ತಡೆಯಲು ಆನೆ ಕಂದಕ ಹಾಗೂ ಸೋಲಾರ್‌ ತಂತಿ ಬೇಲಿಯ ನಿರ್ಮಾಣ ಮಾಡಿದೆ. ಆದರೆ, ಈ ಫಾರಂನ ಬಳಿ ಇರುವ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ದೊಡ್ಡ ಜೆಸಿಬಿ ಯಂತ್ರದ ಮೂಲಕ 20 ಅಡಿಗೂ ಹೆಚ್ಚು ಆಳದ, 10 ಅಡಿಗೂ ಹೆಚ್ಚು ಅಗಲದ ಆಳವನ್ನು ತೋಡ ಲಾಗಿದೆ. ಆದರೆ ಇದನ್ನು ತೋಡುತ್ತಿರುವ ಜೆಸಿಬಿ ವಾಹನಕ್ಕೆ ವಾಹನ ಸಂಖ್ಯೆಯನ್ನೇ ನಮೂದು ಮಾಡಿಲ್ಲ. ಅಲ್ಲದೆ ಇಲ್ಲಿನ ನೂರಾರು ಟ್ರಾÂಕ್ಟರ್‌ ಬೆಲೆ ಬಾಳುವ ಮಣ್ಣನ್ನು ತನ್ನ ಜಮೀನಿನ ಸುತ್ತಲೂ ರಸ್ತೆ ನಿರ್ಮಿಸಲು ಬಳಸಿಕೊಳ್ಳಲಾಗಿದೆ. ಈ ಕಂದಕದಲ್ಲಿ ಅಪ್ಪಿತಪ್ಪಿ ಪ್ರಾಣಿಗಳು ಬಿದ್ದರೂ ಮೇಲೇಳುವುದು ಕಷ್ಟವಾಗಿದೆ. ಅಲ್ಲದೆ ಇದನ್ನು ತೋಡುವಾಗಿ ಗಿಡಮರಗಳ ಹನನವೂ ನಡೆದಿದೆ.

  • ಫೈರೋಜ್‌ಖಾನ್‌
Advertisement

Udayavani is now on Telegram. Click here to join our channel and stay updated with the latest news.

Next