Advertisement

ಪ್ರವಾಹದಲ್ಲಿ ಬಂದ ಹುಲಿ ಮನೆಯ ಕೋಣೆಯೊಳಗೆ ಮಲಗಿತ್ತು!

08:42 AM Jul 19, 2019 | sudhir |

ಮಣಿಪಾಲ: ಈಶಾನ್ಯ ಭಾರತ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಕಾರಣದಿಂದ ಅಸ್ಸಾಂ

Advertisement

ನ ಹಲವು ಪ್ರದೇಶಗಳಲ್ಲಿ ಬ್ರಹ್ಮಪುತ್ರಾ ನದಿಯ ಅಬ್ಬರ ಜೋರಾಗಿದೆ. ಈ ಪ್ರವಾಹದ ಪರಿಣಾಮ ಸುಮಾರು 8 ಲಕ್ಷ ಜನ ಮನೆ ಮಠ ಕಳೆದುಕೊಂಡು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.

ಇನ್ನು ಈ ರಾಜ್ಯದಲ್ಲಿರುವ ವಿಶ್ವಪ್ರಸಿದ್ಧ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿನ ಪ್ರಾಣಿಗಳಿಗೂ ಪ್ರವಾಹದಿಂದ ಸಂಕಷ್ಟ ಎದುರಾಗಿದೆ. ವಿಶಾಲವಾದ ಈ ರಾಷ್ಟ್ರೀಯ ಉದ್ಯಾನವನದ ಬಹುಭಾಗ ಇದೀಗ ಜಲಾವೃತವಾಗಿದ್ದು ಇದರಿಂದಾಗಿ ಇಲ್ಲಿರುವ ಪ್ರಾಣಿಗಳು ದಿಕ್ಕು ಪಾಲಾಗಿ ಓಡುತ್ತಿವೆ. ಮತ್ತು ನೀರಿಲ್ಲದ ಎತ್ತರದ ಪ್ರದೇಶಗಳಿಗೆ ಗುಳೇ ಹೋಗುತ್ತಿವೆ.

ರಾಷ್ಟ್ರೀಯ ಉದ್ಯಾನವನದ ಒಳಗೇ ಸುತ್ತಾಡುತ್ತಿದ್ದ ವಿವಿಧ ಜಾತಿಯ ಪ್ರಾಣಿಗಳು ಈ ಪ್ರವಾಹ ಪರಿಸ್ಥಿತಿಯಿಂದಾಗಿ ಇದೀಗ ಸಿಕ್ಕಸಿಕ್ಕಲ್ಲಿ ನುಗ್ಗುವಂತಾಗಿದೆ. ಈ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲೇ ಇರುವ ಗ್ರಾಮಕ್ಕೆ ಹುಲಿಯೊಂದು ನುಗ್ಗಿರುವ ಘಟನೆ ವರದಿಯಾಗಿದೆ. ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಈ ಹುಳಿ ಗ್ರಾಮದೊಳಗೆ ನುಸುಳಿ ಬಂದಿದೆ.

Advertisement

ಇಷ್ಟು ಮಾತ್ರವಲ್ಲದೇ ಈ ಹುಲಿ ಮನೆಯೊಂದಕ್ಕೆ ಪ್ರವೇಶಿಸಿದ್ದು, ಅಲ್ಲಿನ ಕೊಠಡಿಯೊಂದರಲ್ಲಿ ಆರಾಮವಾಗಿ ಮಲಗಿಕೊಂಡಿದೆ. ಇದು ಉದ್ಯಾನವನದಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಮನೆಯಾಗಿದೆ.

ಈ ಚಿತ್ರವನ್ನು ವೈಲ್ಡ್ ಲೈಫ್ ಟ್ರಸ್ಟ್ ಇಂಡಿಯಾ ತನ್ನ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಒಟ್ಟಾರೆಯಾಗಿ ಅಸ್ಸಾಂನಲ್ಲಿ ನಿರ್ಮಾಣವಾಗಿರುವ ಪ್ರವಾಹ ಪರಿಸ್ಥಿತಿ ಆ ಭಾಗದ ಜನರಿಗೆ ಹಾಗೂ ಪ್ರಾಣಿಗಳಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.

Advertisement

Udayavani is now on Telegram. Click here to join our channel and stay updated with the latest news.

Next