ನವದೆಹಲಿ: ಹುಲಿ ಮತ್ತು ಆನೆ ಅತ್ಯಂತ ಪ್ರೀತಿಯ ಮತ್ತು ಜನಪ್ರಿಯ ಪ್ರಾಣಿ ವರ್ಗಕ್ಕೆ ಸೇರಿವೆ. ಈ ಎರಡೂ ಪ್ರಾಣಿಗಳ ಗಾತ್ರ ಮತ್ತು ಜೀವನಶೈಲಿಯ ನಡುವೆ ಗಮನಾರ್ಹ ವ್ಯತ್ಯಾಸವಿದ್ದರೂ ಕೂಡಾ ಪ್ರಾಣಿಗಳಲ್ಲೂ ಅದ್ಭುತ ಹೊಂದಾಣಿಕೆಯ ಮನೋಭಾವ ಇದೆ ಎಂಬುದಕ್ಕೆ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿಯಾಗಿದೆ.
ಇದನ್ನೂ ಓದಿ:5ಕೆಜಿ ಅಕ್ಕಿ, ಪ್ರತಿದಿನ ಅರ್ಧ ಲೀ. ಹಾಲು: ಬಿಜೆಪಿ ಪ್ರಣಾಳಿಕೆ ಬಿಡುಗಡೆ
ವಿಡಿಯೋದಲ್ಲಿ ದಾರಿಯಲ್ಲಿ ಸಾಗುತ್ತಿದ್ದ ಹುಲಿಯೊಂದು ಆನೆಯ ಹಿಂಡು ಬರುತ್ತಿರುವುದನ್ನು ಗಮನಿಸಿದ ತಕ್ಷಣ, ಉದ್ದನೆಯ ಹುಲ್ಲುಗಳ ಮೇಲೆ ಕುಳಿತು, ಆನೆಗಳಿಗೆ ಹೋಗಲು ದಾರಿ ಮಾಡಿ ಕೊಟ್ಟಿರುವುದು ಸೆರೆಯಾಗಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತಾ ನಂದಾ ಅವರು ಟ್ವೀಟರ್ ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಜೇತಾ ಸಿಂಹ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ನೂರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ ಪ್ರಾಣಿಗಳು ಕೂಡಾ ಹೇಗೆ ಸಂವಹನ ನಡೆಸುತ್ತವೆ ಮತ್ತು ಸಾಮರಸ್ಯ ಕಾಪಾಡಿಕೊಳ್ಳುತ್ತವೆ…ಎಂಬುದನ್ನು ಗಮನಿಸಿ..ಆನೆಗಳ ಹಿಂಡು ಬರುತ್ತಿರುವುದನ್ನು ಅರಿತ ಹುಲಿ ಆನೆ ಹಿಂಡು ಹೋಗಲು ದಾರಿ ಮಾಡಿಕೊಟ್ಟಿದೆ.” ಎಂದು ನಂದಾ ಕ್ಯಾಪ್ಶನ್ ನೀಡಿದ್ದಾರೆ.
ಇದು ಎರಡು ವನ್ಯ ಮೃಗಗಳ ನಡುವಿನ ಪರಸ್ಪರ ಗೌರವ ಮತ್ತು ತಿಳಿವಳಿಕೆಯ ವಿಶಿಷ್ಟ ಪ್ರದರ್ಶನವಾಗಿದೆ. ಇದು ಪ್ರಕೃತಿ ಜೀವನದ ಸಾಮರಸ್ಯವಾಗಿದೆ ಎಂದು ವರದಿ ತಿಳಿಸಿದೆ.
ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟಿದೆ ಅಂದರೆ ಹುಲಿ ಆನೆಗಳಿಗೆ ಹೆದರುತ್ತದೆ ಎಂದು ಅರ್ಥವಲ್ಲ. ಅನಾವಶ್ಯಕವಾದ ಕಾದಾಟ ತಪ್ಪಿಸುವ ಉದ್ದೇಶವಾಗಿದೆ. ಹುಲಿಗಳು ಆನೆ ಮೇಲೂ ದಾಳಿ ನಡೆಸಿ ಬೇಟೆಯಾಡುವುದು ಸರ್ವಸಾಮಾನ್ಯವಾಗಿದೆ.