Advertisement

ಟಿಕೆಟ್‌ ಹಂಚಿಕೆ: ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಚಿವ ಹೆಗಡೆ

03:00 PM Apr 17, 2018 | Team Udayavani |

ಕಾರವಾರ: ಟಿಕೆಟ್‌ ನೀಡಿಕೆಯಲ್ಲಿ ಹೈಕಮಾಂಡ್‌ ನಿರ್ಧಾರವೇ ಅಂತಿಮ. ನಾನು ಇಂಥವರಿಗೆ ಟಿಕೆಟ್‌ ಕೊಡಿ ಎಂದು ಪತ್ರ ಬರೆದಿಲ್ಲ. ಇದೆಲ್ಲಾ ಮಾಧ್ಯಮಗಳ ಕಪೋಲಕಲ್ಪಿತ ವರದಿ ಎಂದು ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದರು.

Advertisement

ಕಾರವಾರದಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ಪದಾ ಕಾರಿಗಳು, ಪಕ್ಷದ ಪ್ರಮುಖರೊಂದಿಗೆ ಕ್ಲೋಜ್‌ ಡೋರ್‌ ಸಭೆ ನಡೆಸಿದ ಅವರು, ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಒಂದು ಕಾಲಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಹುಡುಕಬೇಕಿದ್ದ ಕಾಲವಿತ್ತು. ಈಗ ರಾಜಕೀಯದಲ್ಲಿಸ್ಪರ್ಧಿಸಲು ದಂಡೇ ಬರುತ್ತಿದೆ. ಅಭ್ಯರ್ಥಿ ಕೊರತೆ ಕಾಂಗ್ರೆಸ್‌ ಪಕ್ಷಕ್ಕೆ ಎದುರಾಗಿದೆ ಎಂದರು. ಪಕ್ಷಕ್ಕೆ ಸೇರಿದವರಿಗೆಲ್ಲಾ ಟಿಕೆಟ್‌ ನೀಡುವ ಭರವಸೆ ನೀಡಿಲ್ಲ. ಸಹಜ ಆಸೆ ಇಟ್ಟುಕೊಂಡು ಬಂದಿರುತ್ತಾರೆ. ಟಿಕೆಟ್‌ ಸಿಗದಿದ್ದರೆ ಪಕ್ಷಕ್ಕೆ ಕೆಲಸ ಮಾಡಬೇಕು. ಅದೇ ಬಿಜೆಪಿ ಸಿದ್ಧಾಂತ. ಟಿಕೆಟ್‌ ನೀಡಲೇಬೇಕೆಂದು ಕರಾರು ಹಾಕಿ ಯಾರೂ ಪಕ್ಷಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಕುಮಟಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಹೆಚ್ಚಿದ್ದಾರೆ. ಪಕ್ಷದ ಹೈಕಮಾಂಡ್‌ ಈ ವಿಷಯದಲ್ಲಿ ನಿರ್ಣಯಕ್ಕೆ ಬರಲಿದೆ.

ಟಿಕೆಟ್‌ ಕೊಟ್ಟ ನಂತರ ಎಲ್ಲರೂ ಕೆಲಸ ಮಾಡುತ್ತಾರೆ. ಕಾರವಾರವನ್ನೇ ಉದಾಹರಣೆ ತೆಗೆದುಕೊಳ್ಳಿ. ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದೇವೆ. ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಅವರೇ ಹೆಚ್ಚು ಮತಗಳಿಂದ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ. ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ರೂಪಾಲಿ ನಾಯ್ಕ ಹಾಗೂ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ. ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ್‌ ನಾಯಕ್‌, ಜಗದೀಶ್‌ ನಾಯಕ್‌, ನಯನಾ ನೀಲಾವರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next