Advertisement
ರಿಯಾಲಿಟಿ ಶೋ ಬಂತೆಂದರೆ, ಕಣ್ತೆರೆದು ಧ್ಯಾನಕ್ಕೆ ಕೂರುತ್ತಿತ್ತು ಮನಸ್ಸು. ಕಲರ್ ಕಲರ್ ಲೈಟುಗಳ ಮಧ್ಯೆ, ಮೈಕ್ ಹಿಡ್ಕೊಂಡ್, ಸೊಂಟ ಅಲ್ಲಾಡಿಸ್ಕೊಂಡ್ ಅವ್ರೆಲ್ಲ ಹಾಡೋ ಚೆಂದ ನೋಡಿ… ಚಪ್ಪಾಳೆ ಸಾಲುª ಅಂತ ಜಡ್ಜ್ ಶಿಳ್ಳೇನೂ ಹೊಡೆದುಬಿಟ್ರಪ್ಪಾ… ಗೇಮ್, ಕಾಮಿಕ್ಸ್, ಬುಕ್ಕುಗಳನ್ನೆಲ್ಲ ಬದಿಗೊತ್ತಿ, ಆ ಪುಟಾಣಿ ರಿಯಾಲಿಟಿ ಶೋ ಒಳಗೆ ಮುಳುಗಲೂ ಒಂದು ಕಾರಣ ಇತ್ತು. “ನಾನೆಂದು ಆ ಟಿ.ವಿ. ಹೊಕ್ಕಿ, ಸೆಲೆಬ್ರಿಟಿ ಆಗೋದು? ಅವರಂತೆ ಸಖತ್ತಾಗಿ ಹಾಡೋದು?’ - ಅದರ ಪ್ರಶ್ನೆ. ಟಿ.ವಿ.ಗೆ ಹೋಗುವ ಮಾರ್ಗ ತಿಳಿದಿಲ್ಲವೆಂದೇ ಅದು, ತನ್ನ ಅಪ್ಪನ ಮೊಬೈಲಿನಲ್ಲಿದ್ದ ಟಿಕ್‌ಟಾಕ್ ಆ್ಯಪ್‌ನ ಮೊರೆ ಹೋಗಿತ್ತು. ಅಲ್ಲೇನೂ ಕಾಯಬೇಕಿಲ್ವಲ್ಲ… ಹದಿನೈದೇ ಸೆಕೆಂಡಿನಲ್ಲಿ ಹೀರೋನಂತೆಯೇ ಅನುಕರಿಸಿ, ಮಿಂಚಬಹುದು!
ಫೇಸ್‌ಬುಕ್, ಇನ್‌ಸ್ಟಗ್ರಾಮ್‌ನಂಥ ಸೋಶಿಯಲ್ ಮೀಡಿಯಾ ಆ್ಯಪ್‌ಗ್ಳನ್ನೆಲ್ಲ ಹಿಂದಿಕ್ಕಿ “ಟಿಕ್ ಟಾಕ್’ ಜನಪ್ರಿಯವಾಗುತ್ತಿದೆ. ಸಮೀಕ್ಷೆಯೊಂದರ ಪ್ರಕಾರ, ಐಫೋನ್ ಹಾಗೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆ್ಯಪ್ ಇದು. ಚೀನಾದ ಈ ಆ್ಯಪ್, 2018ರ ಆಗಸ್ಟ್‌ನಲ್ಲಿ “ಮ್ಯೂಸಿಕಲ್.ಲಿ’ ಎಂಬ ಆ್ಯಪ್ ಅನ್ನೂ ತನ್ನೊಡಲಿಗೆ ಸೇರಿಸಿಕೊಂಡಿತು. “ಮ್ಯೂಸಿಕಲ್.ಲಿ’ ಕೂಡಾ ಟಿಕ್‌ಟಾಕ್‌ನಂತೆಯೇ ಶಾರ್ಟ್ ವಿಡಿಯೊಗಳ ಆ್ಯಪ್ ಆಗಿತ್ತು. ಆ ಆ್ಯಪ್‌ನ ಬಳಕೆದಾರರೆಲ್ಲ ಟಿಕ್‌ಟಾಕ್‌ಗೆ ಶಿಫ್ಟ್ ಆದ ಕಾರಣ, ಜಗತ್ತಿನ ತುಂಬಾ ಟಿಕ್ ಟಾಕ್‌ನ ಜನಪ್ರಿಯತೆ ಮತ್ತಷ್ಟು ಹೆಚ್ಚಿತು.
Related Articles
ಟಿಕ್‌ಟಾಕ್ ಆ್ಯಪ್ ಮೂಲಕ 15 ಸೆಕೆಂಡ್‌ಗಳ ಮ್ಯೂಸಿಕಲ್ ವಿಡಿಯೊ ಮಾಡಿ, ಅದನ್ನು ನಿಮ್ಮ ಗೆಳೆಯರು ಮತ್ತು ಫಾಲೊವರ್‌ಗಳೊಂದಿಗೆ ಹಂಚಿಕೊಳ್ಳಬಹುದು. 12 ವರ್ಷ ಮೇಲ್ಪಟ್ಟವರು ಟಿಕ್ ಟಾಕ್ ಬಳಕೆದಾರರಾಗಬಹುದು. ಇನ್‌ಸ್ಟಗ್ರಾಮ್, ಫೇಸ್‌ಬುಕ್ ಅಥವಾ ಗೂಗಲ್ ಅಕೌಂಟ್ ಮೂಲಕ ಟಿಕ್‌ಟಾಕ್ ಅಕೌಂಟ್ ತೆರೆದರೆ, ನಿಮ್ಮ ಮುಂದೆ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ. ನರಪೇತಲ ಅನ್ನಿಸಿಕೊಂಡವನೊಬ್ಬ ಅಬ್ಬರದ ಡೈಲಾಗ್ ಹೇಳುತ್ತಾನೆ, ಡುಮ್ಮೊಟ್ಟೆಯ ಅಂಕಲ್ ಒಬ್ಬರು ಮೈಕಲ್ ಜಾಕ್ಸನ್‌ನಂತೆ ಡ್ಯಾನ್ಸ್ ಮಾಡುತ್ತಾರೆ, ಕಾಲೇಜಲ್ಲಿ ಎಲ್ಲರಿಂದ ಕಡೆಗಣಿಸಲ್ಪಟ್ಟ ಹುಡುಗಿಯೂ ಅಲ್ಲಿ ಯಾವುದೋ ಹಾಡಿಗೆ ನಾಚಿಕೊಳ್ಳುತ್ತಾಳೆ, ಯಾರೋ ಹುಡುಗ ಇನ್ಯಾರೋ ಹುಡುಗಿಯ ಜೊತೆ ಡುಯೆಟ್ ಹಾಡುತ್ತಿರುತ್ತಾನೆ… ಇದನ್ನೆಲ್ಲಾ ಯಾರು ನೋಡ್ತಾರೆ ಅಂತ ಕಡೆಗಣಿಸಬೇಡಿ, ಆ ವಿಡಿಯೊಗಳೇ ಸಾವಿರಾರು ಲೈಕ್, ಶೇರ್, ಕಮೆಂಟ್ ಗಿಟ್ಟಿಸಿಕೊಂಡಿರುತ್ತವೆ.
Advertisement
ಹದಿನೈದೇ ಸೆಕೆಂಡು“ಇಲ್ಲಿ ಯಾರೂ ಹೀರೋಗಳನ್ನ ಹುಟ್ಟು ಹಾಕಲ್ಲ, ನಮಗೆ ನಾವೇ ಹೀರೋಗಳಾಗ್ಬೇಕು’ ಅನ್ನೋದು ಎಷ್ಟು ನಿಜ ನೋಡಿ. ಸೆಲೆಬ್ರಿಟಿ ಆಗೋದು ಬಹಳ ಸುಲಭ ಇಲ್ಲಿ. ಒಂದು ಹಿಡಿ ಆತ್ಮವಿಶ್ವಾಸ, ಒಂಚೂರು ನಟನೆ, ತಕ್ಕ ಮಟ್ಟಿಗಿನ ಡ್ಯಾನ್ಸ್ ಗೊತ್ತಿದ್ದರೆ ಸಾಕು; ಇಷ್ಟ ಬಂದಂತೆ ವಿಡಿಯೊಗಳನ್ನು ಮಾಡಬಹುದು. ನೀವು ಚಂದ ಕಾಣಿಸಲು, ವಿಡಿಯೊ ಬ್ಯಾಕ್‌ಗ್ರೌಂಡ್‌ನ್ನು ಅದ್ದೂರಿ ಕಾಣುವಂತೆ ಮಾಡಲು, ಹೀಗೆ ಟೂಲ್ಸ್, ಕ್ಯಾಮೆರಾ ಸ್ಪೀಡ್ ಅಡ್ಜಸ್ಟ್‌ಮೆಂಟ್‌ನಂಥ ಹತ್ತಾರು ಆಪ್ಷನ್‌ಗಳಿರುತ್ತವೆ. ಬೇರೆಯವರ ವಿಡಿಯೊವನ್ನು ನೀವು ಲೈಕ್, ಕಮೆಂಟ್ ಶೇರ್ ಕೂಡಾ ಮಾಡಬಹುದು. ಇಲ್ಲಿ ಕೆಲವರಿಗೆ ಮಿಲಿಯನ್‌ಗಟ್ಟಲೆ ಫ್ಯಾಲೋವರ್ಗಳಿದ್ದಾರೆ! 15 ಸೆಕೆಂಡ್‌ನದ್ದಾದರೂ, ಅವರ ವಿಡಿಯೊಗಳನ್ನು ಕಾದು ಕುಳಿತು ನೋಡುವಷ್ಟು ಕ್ರೇಝ್ ಹುಟ್ಟಿಸಿದ್ದಾರೆ. ಎಚ್ಚರವಿರಲಿ…
ನೀವು ಬಿಂದಾಸ್ ಆಗಿ ಅಪ್‌ಲೋಡ್ ಮಾಡಿದ ವಿಡಿಯೋಗಳಿಗೆ ಬರುವ ಕಮೆಂಟ್‌ಗಳನ್ನೂ ಅಷ್ಟೇ ಬಿಂದಾಸ್ ಆಗಿ ತೆಗೆದುಕೊಳ್ಳಬೇಕು. ಯಾಕಂದ್ರೆ, ಇಲ್ಲಿಯೂ ವಿಮರ್ಶಕರಿದ್ದಾರೆ. ಮನಸ್ಸಿಗೆ ಬೇಸರವಾಗುವಂಥ ಕಮೆಂಟ್‌ಗಳು ಬರುವುದು ಸಹಜ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವವರು ಟಿಕ್‌ಟಾಕ್‌ನಿಂದ ದೂರ ಉಳಿಯುವುದೇ ಉತ್ತಮ. ಹುಡುಗಿಯೊಬ್ಬಳ ಟಿಕ್‌ಟಾಕ್ ವಿಡಿಯೋಕ್ಕೆ ಅಶ್ಲೀಲ ಆಡಿಯೊ ಸೇರಿಸಿ, ಆಕೆಯ ಹೆಸರು ಹಾಳು ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟಿಕ್ ಟಾಕ್‌ನಿಂದಾಗಿ ಸೈಬರ್ ಕ್ರೈಂ ಪ್ರಕರಣಗಳೂ ಹೆಚ್ಚುತ್ತಿವೆ. ನಿಮ್ಮ ವಿಡಿಯೋಗಳನ್ನು ಯಾರು ಡೌನ್‌ಲೋಡ್ ಮಾಡಬಹುದು, ಯಾರು ನಿಮ್ಮೊಂದಿಗೆ ಡುಯಟ್ ವಿಡಿಯೊ ಮಾಡಬಹುದು ಎಂಬೆಲ್ಲಾ ಆಯ್ಕೆಗಳು ಆ್ಯಪ್‌ನ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಇವೆ. ಆ ಬಗ್ಗೆ ಗಮನ ಹರಿಸದಿದ್ದಾಗ, ಈ ರೀತಿಯ ಘಟನೆಗಳು ನಡೆಯುತ್ತವೆ. ಸೆಲೆಬ್ರಿಟಿ ಆಗಬೇಕೆಂದು ಹಪಹಪಿಸುವವರು ಇದಕ್ಕೆಲ್ಲಾ ರೆಡಿಯಾಗಿರಬೇಕು. ಬ್ಯಾನ್ ಆಗ್ಬೇಕ್ ಅಂತಿದ್ದಾರೆ…
ಟಿಕ್ ಟಾಕ್‌ನ ಬಳಕೆದಾರರಲ್ಲಿ ಹದಿ ಹರೆಯದ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಹೆಚ್ಚುತ್ತಿರುವ ಟಿಕ್ ಟಾಕ್ ಕ್ರೇಝ್ ಮಕ್ಕಳ ಮನಸ್ಸಿನ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂಬ ಕಾರಣಕ್ಕೆ, ಇಂಡೋನೇಷ್ಯಾದಲ್ಲಿ ಈ ಆ್ಯಪ್ ಅನ್ನು ಬ್ಯಾನ್ ಮಾಡಲಾಗಿತ್ತು. ಟಿಕ್ ಟಾಕ್ ಬ್ಯಾನ್ ಆಗ್ಬೇಕು ಅಂತ 1.7 ಲಕ್ಷ ಜನ ಪೆಟಿಷನ್ ಸೈನ್ ಮಾಡಿದ್ದರು. ಈ ಆ್ಯಪ್ ಅನ್ನು ಬ್ಯಾನ್ ಮಾಡಬೇಕೆಂಬ ಕೂಗು ಭಾರತದಲ್ಲಿಯೂ ಎದ್ದಿದ್ದು, ತಮಿಳುನಾಡಿನ ವಿಧಾನಸಭೆಯಲ್ಲಿ ಆ ಕುರಿತು ಚರ್ಚೆಯೂ ನಡೆದಿದೆ. ವಯಸ್ಸಿನ ಮಿತಿಯನ್ನು 12-16ಕ್ಕೆ ಏರಿಸುವ ಚರ್ಚೆಯೂ ನಡೆದಿದೆ. ಹಾಗೆ ಮಾಡಿದರೆ, ಮಿಲಿಯನ್‌ಗಟ್ಟಲೆ ಬಳಕೆದಾರರನ್ನು ಕಳೆದುಕೊಳ್ಳುವ ಚಿಂತೆ ಕಂಪನಿಯದ್ದು. ಡೌನ್‌ಲೋಡ್‌ನಲ್ಲಿ ಯಾವ ಆ್ಯಪ್ ಮುಂದೆ?
ಹೆಸರು ಡೌನ್‌ಲೋಡ್ (ಮಿಲಿಯನ್ಸ್)
1. ಟಿಕ್‌ಟಾಕ್ 45.8
2. ಯೂ ಟ್ಯೂಬ್ 35.3
3. ವಾಟ್ಸ್‌ಆ್ಯಪ್ 33.8
4. ಇನ್‌ಸ್ಟಗ್ರಾಮ್ 31
5.ಫೇಸ್‌ಬುಕ್ 29.4
6. ವಿಚಾಟ್ 28.9
(ಆಧಾರ: ಸೆನ್ಸಾರ್ ಟವರ್- 2018 ) *ಈ ಆ್ಯಪ್ 75 ಭಾಷೆಗಳಲ್ಲಿ ಲಭ್ಯ.
*ಕಳೆದ ಅಕ್ಟೋಬರ್‌ನಲ್ಲಿ ಟಿಕ್‌ಟಾಕ್ ಬಳಕೆದಾರರ ಸಂಖ್ಯೆ 800 ಮಿಲಿಯನ್ ಗಡಿ ದಾಟಿತು.
* ಪ್ರತಿ ತಿಂಗಳು ಸಕ್ರಿಯವಾಗಿ ಟಿಕ್‌ಟಾಕ್ ಬಳಸುವವರ ಸಂಖ್ಯೆ 500 ಮಿಲಿಯನ್‌ಗೂ ಹೆಚ್ಚು.
*ಬಳಕೆದಾರರಲ್ಲಿ 50% ಜನ 24 ವರ್ಷಕ್ಕಿಂತ ಮೇಲ್ಪಟ್ಟವರು.
*60% ಬಳಕೆದಾರರು ಮಹಿಳೆಯರು.
*60% ಜನ ಕಾಲೇಜು ಡಿಗ್ರಿ ಹೊಂದಿದವರು.
*40% ಜನ ಬಳಕೆದಾರರು ದೊಡ್ಡ ನಗರಗಳಲ್ಲಿ ವಾಸಿಸುವವರು.
(ಆಧಾರ: ಇಂಟರ್‌ನೆಟ್) ಪ್ರಿಯಾ