ಪಿರಿಯಾಪಟ್ಟಣ: ಟಿಬೇಟಿಯನ್ ಬಂಧುಗಳು ಸ್ಥಳೀಯ ಎಲ್ಲಾ ವರ್ಗದವರೊಂದಿಗೆ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಬೈಲಕುಪ್ಪೆ ಗೋಲ್ಡನ್ ಟೆಂಪಲ್ ಆವರಣದಲ್ಲಿ ಬೌದ್ಧ ಸನ್ಯಾಸಿಗಳು ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳ ಹಿಂದೆ ಬಂದು ನೆಲೆಸಿದ್ದ ಟಿಬೇಟಿಯನ್‌ರು ಇಲ್ಲಿನ ಆಚರಣೆಗಳಿಗೆ ಹೊಂದಿಕೊಂಡು ಯಾವುದೇ ವರ್ಗಕ್ಕೂ ಕಪ್ಪು ಚುಕ್ಕಿ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸೌಹಾರ್ದಯುತ ಸಂಬಂಧ ಹೀಗೆ ಮುಂದುವರಿಯಲಿ ಎಂದು ಆಶಿಸಿದರು
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅಗ್ನಿಗೆ ಮುಖ್ಯಮಂತ್ರಿಯವರು ಹಾಲು, ತುಪ್ಪ, ಜೇನು ನೈವೇದ್ಯ ನೆರವೇರಿಸಿ ಬುದ್ಧನಿಗೆ ಹಾರ ಹಾಕುವ ಮೂಲಕ ನಮಸ್ಕರಿಸಿದರು. ಗೋಲ್ಡನ್ ಟೆಂಪಲ್ ಸಂಸ್ಥಾಪಕರಾದ ಪೆಮ ನೊಬು ರೆಂಪೋಚೆ ಮಾತನಾಡಿ, ಮಹಾತ್ಮ ಗಾಂಧೀಜಿ ತತ್ವಸಿದ್ಧಾಂತವನ್ನು ನಾವು ಸದಾ ಪಾಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೇಷ್ಮೆ ಸಚಿವ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸ.ರಾ.ಮಹೇಶ್, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಸಂಸದ ಡಿ.ಕುಪೇಂದ್ರರೆಡ್ಡಿ, ಪಿರಿಯಾಪಟ್ಟಣ ಶಾಸಕ ಹಾಗೂ ಕೈಗಾರಿಕ ನಿಗಮ ಮಂಡಳಿ ಅಧ್ಯಕ್ಷ ಕೆ.ಮಹದೇವ್, ಜಿಪಂ ಸದಸ್ಯ ರಾಜೇಂದ್ರ, ಪರಿಸರವಾದಿ ಬಸವೇಗೌಡ,
ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಉಪ ವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ಶ್ವೇತಾ, ಡಿವೈಎಸ್‌ಪಿ. ಭಾಸ್ಕರ್ ರೈ, ಪೊಲೀಸ್ ಠಾಣಾಧಿಕಾರಿಗಳಾದ ಪ್ರದೀಪ್, ಉಪ ತಹಶೀಲ್ದಾರ್‌ಗಳಾದ ಪ್ರಕಾಶ್, ಸಿ.ಮಹೇಶ್ ಇತರರು ಹಾಜರಿದ್ದರು.