Advertisement

ಚೀನಾ: ಪ್ರತಿಭಟನೆ ಹತ್ತಿಕ್ಕಲು ಟ್ಯಾಂಕರ್‌ ಅಸ್ತ್ರ

11:12 PM Jul 21, 2022 | Team Udayavani |

ಬೀಜಿಂಗ್‌: ಚೀನಾದ ಹೆನಾನ್‌ ಪ್ರಾಂತ್ಯದಲ್ಲಿ ವಿವಿಧ ಬ್ಯಾಂಕುಗಳ ಗ್ರಾಹಕರು ಕೆಲವು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ.

Advertisement

ಅವರನ್ನು ನಿಯಂತ್ರಿಸಲು ಚೀನಾ ಸೇನೆ, ಟ್ಯಾಂಕರ್‌ಗಳನ್ನು ಆ ಪ್ರಾಂತ್ಯಕ್ಕೆ ಕಳುಹಿಸಿದೆ. ಚೀನಾ ಸೇನೆಯ ಟ್ಯಾಂಕರ್‌ಗಳು (ಪಿಎಲ್‌ಎ) ಟ್ಯಾಂಕರ್‌ಗಳು ಹೆನಾನ್‌ ಪ್ರಾಂತ್ಯದ ನಗರಗಳ ಮುಖ್ಯ ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್‌ ಆಗಿವೆ.

ಏಪ್ರಿಲ್‌ನಿಂದ ಬ್ಯಾಂಕುಗಳಲ್ಲಿರುವ ಉಳಿತಾಯ ಖಾತೆಯ ಹಣವನ್ನು ವಿತ್‌ಡ್ರಾ ಮಾಡುವುದಕ್ಕೆ ನಿರ್ಬಂಧ ಹೇರಿರುವುದಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next